ಮೋದಿಗೆ ನಾಯಿ ಸಾವು ಬರುತ್ತೆ ಎಂದಿದ್ದ ಕಾಂಗ್ರೆಸ್ ಮುಖಂಡ ಶೇಖ್ ಹುಸೇನ್ ಬಂಧನ

Public TV
1 Min Read
Congress leader Sheikh Hussain

ಮುಂಬೈ: ಪ್ರಧಾನಿ ನರೇಂದ್ರ ಮೋದಿಗೆ ನಾಯಿ ಸಾವು ಬರುತ್ತೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಶೇಖ್ ಹುಸೇನ್ ಅವರನ್ನು ಗುರುವಾರ ನಾಗ್ಪುರದಲ್ಲಿ ಬಂಧಿಸಲಾಗಿದೆ.

modi (1)

ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ನಾಗ್ಪುರದ ಇಡಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಯಲ್ಲಿ ಶೇಖ್ ಹುಸೇನ್ ಮತ್ತು ಮಾಜಿ ನಗರಾಧ್ಯಕ್ಷರು ಭಾಗವಹಿಸಿದ್ದರು. ಈ ವೇಳೆ ಶೇಖ್ ಹುಸೇನ್ ಮೋದಿ ಕುರಿತಾಗಿ ಟೀಕೆ ವ್ಯಕ್ತಪಡಿಸುತ್ತ ಅವಹೇಳನಕಾರಿ ಮಾತುಗಳನ್ನಾಡಿದರು. ಬಳಿಕ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಮೋದಿಗೆ ನಾಯಿ ಸಾವು ಬರುತ್ತೆ- ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕನ ವಿರುದ್ಧ FIR

ಈ ಸಂಬಂಧ ನಾಗ್ಪುರ ಬಿಜೆಪಿ ಅಧ್ಯಕ್ಷ ವಿನೋದ್ ದಾಮೋದರ ಕನ್ಹರೆ ನೀಡಿದ ದೂರಿನ ಅನ್ವಯ ಶೇಖ್ ಹುಸೇನ್ ವಿರುದ್ಧ ಉದ್ದೇಶಪೂರ್ವಕ ಅವಮಾನ, ಉದ್ದೇಶಪೂರ್ವಕವಾಗಿ ಶಾಂತಿ ಕದಡುವ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಲಾಗಿತ್ತು. ಈ ಸಂಬಂಧ ಇಂದು ಶೇಖ್ ಹುಸೇನ್‍ರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಲಾಗಿದೆ. ಇದನ್ನೂ ಓದಿ: ಲೈಂಗಿಕ ಸುಖಕ್ಕಾಗಿ ವೇಶ್ಯಾಗೃಹಕ್ಕೆ ಹೋಗುವವರು ಅಪರಾಧಿಗಳಾಗಲ್ಲ: ಹೈಕೋರ್ಟ್

ಇತ್ತ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ, ವಿಪಕ್ಷಗಳ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡ್ತಿದೆ ಎಂದು ಆರೋಪಿಸಿ ಇಂದು ದೇಶಾದ್ಯಂತ ಕಾಂಗ್ರೆಸ್ ಭಾರೀ ಪ್ರತಿಭಟನೆ ನಡೆಸಿದೆ. ರಾಹುಲ್ ಗಾಂಧಿಯನ್ನು ಇ.ಡಿ ವಿಚಾರಣೆಗೆ ಒಳಪಡಿಸಿರೋದನ್ನು ಖಂಡಿಸಿ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ರಾಜಭವನ್ ಚಲೋ ನಡೆಸಿದೆ. ಕೆಲವೆಡೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪರದಾಡಿದ ಪ್ರಸಂಗ ನಡೆಯಿತು.

Live Tv

Share This Article