ಚಿಕ್ಕಮಗಳೂರು: ನೂತನ ಸ್ಪೀಕರ್ ಯುಟಿ ಖಾದರ್ (UT Khader) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಶ್ರೀರಾಮಸೇನೆಯ (Sri Ram Sena) ನಾಯಕನ ವಿರುದ್ಧ ಕಾಂಗ್ರೆಸ್ (Congress) ದೂರು ದಾಖಲಿಸಿದೆ.
ಶ್ರೀರಾಮಸೇನೆಯ ಮುಖಂಡ ಪ್ರೀತೇಶ್ ಎಂಬುವವರು ಯುಟಿ ಖಾದರ್ ಬಗ್ಗೆ ಅವಹೇಳನಕಾರಿಯಾಗಿ ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ ಕೋಮು ದ್ವೇಷ ಹಾಗೂ ಜನಾಂಗದ ನೋವಿಗೆ ಪ್ರೀತೇಶ್ ಕಾರಣರಾಗಿದ್ದಾರೆ. ಈ ರೀತಿ ಸಂವಿಧಾನಾತ್ಮಕ ಹುದ್ದೆಗೆ ಅಗೌರವ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಕ್ಷದ ಐಟಿ ಸೆಲ್‍ನ ಜಿಲ್ಲಾ ಕಾರ್ಯದರ್ಶಿ ಎಂಎಲ್‍ಎ ಮಂಜು ಎಂಬುವವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶಾಸಕರಲ್ಲ, ಎಂಎಲ್‌ಸಿಯೂ ಆಗದೇ ಇದ್ರೂ ಮಂತ್ರಿ ಸ್ಥಾನ ಪಡೆದ ಬೋಸರಾಜು
Advertisement
Advertisement
ಪೋಸ್ಟ್‌ನಲ್ಲಿ ಏನಿತ್ತು?
`ಸದನದಲ್ಲಿ ಮಾನ್ಯ ಸಭಾಧ್ಯಕ್ಷರೇ ಅನ್ನಬೇಕಾ? ಸಾಬಾಧ್ಯಕ್ಷರೇ ಅನ್ನಬೇಕಾ?’ ಎಂದು ಶ್ರೀರಾಮ ಸೇನೆ ಮುಖಂಡ ಬರೆದುಕೊಂಡಿದ್ದರು. ಅಲ್ಲದೆ ಯುಟಿ ಖಾದರ್ ಅವರ ಹೆಸರಿನಲ್ಲಿ ಟ್ಯಾಗ್ ಬಳಸಿ ಪೋಸ್ಟ್ ಮಾಡಲಾಗಿತ್ತು.
Advertisement
Advertisement
ಈ ಸಂಬಂಧ ಚಿಕ್ಕಮಗಳೂರು (Chikkamagaluru) ನಗರದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದು ಸಂಪುಟದಲ್ಲಿ ಹಲವರಿಗೆ ಸಚಿವ ಸ್ಥಾನ ಮಿಸ್