Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Chikkaballapur

ಎಸ್‍ಎಂಕೆ ವಿರುದ್ಧ ನಿಂದನೆ – ಚಿಕ್ಕಬಳ್ಳಾಪುರ ಪರಾಜಿತ ಕೈ ಅಭ್ಯರ್ಥಿ ವಿರುದ್ಧ ಕೇಸ್ ದಾಖಲು

Public TV
Last updated: December 13, 2019 3:25 pm
Public TV
Share
2 Min Read
anjanappa sm krishna
SHARE

ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಎಂ ಅಂಜನಪ್ಪ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪಚುನಾವಣೆ ಸೋಲಿನ ಬಳಿಕ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ವಿರುದ್ಧ ಅಂಜನಪ್ಪ ಅವಾಚ್ಯ ಪದ ಬಳಸಿ ಹರಿಹಾಯ್ದಿದ್ದರು. ಹೀಗಾಗಿ ಎಸ್ ಎಂ ಕೃಷ್ಣ ಅಭಿಮಾನಿ ಅಂತ ಹೇಳಲಾಗುತ್ತಿರುವ ಶಂಕರಪ್ಪ ಅಂಜನಪ್ಪ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಐಪಿಸಿ ಸೆಕ್ಷನ್ 153(ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ), 504(ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು) ಅಡಿ ಪ್ರಕರಣ ದಾಖಲಾಗಿದೆ.

anjanappa sm krishna1

ದೂರಿನಲ್ಲಿ ಏನಿದೆ?
ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿಯವರು ಸುದ್ದಿಗೋಷ್ಠಿಯಲ್ಲಿ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ. ಹಾಗೂ ಮಾಜಿ ರಾಜ್ಯಪಾಲರಾದ ಶ್ರೀಯುತ ಎಸ್.ಎಂ. ಕೃಷ್ಣರವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಇಂತಹ ಫ್ರಾಡುಗಳಿಗೆ ಸೀಟು ಕೊಟ್ಟಿರುವುದಕ್ಕೆ ಕೈ ಪಕ್ಷ ಈ ಪರಿಸ್ಥಿತಿಗೆ ಬಂದಿದೆ. ತಾಯಿ ಪಕ್ಷಕ್ಕೆ ಮೋಸ ಮಾಡಿ, ಏನು ಗತಿ ಇಲ್ಲದವರ ರೀತಿ ಇಲ್ಲಿಗೆ ಬಂದುಬಿಟ್ಟ ಎಸ್.ಎಂ. ಕೃಷ್ಣ ಎಂದು ಏಕವಚನದಲ್ಲಿ ನಿಂದಿಸಿದ್ದಾರೆ.

ಇಂತಹವರನ್ನು ಪಕ್ಷದಲ್ಲಿಟ್ಟುಕೊಂಡು ಮುಖ್ಯಮಂತ್ರಿ, ಗವರ್ನರ್ ಮತ್ತು ಸೆಂಟ್ರಲ್ ಮಿನಿಸ್ಟರ್ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಆಗಿದೆ ಎಂದು ಏಕವಚನದಲ್ಲಿ ಅವಹೇಳನ ಮತ್ತು ಅಶ್ಲೀಲವಾಗಿ ಮಾತನಾಡಿ ನಮ್ಮ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ಗಲಭೆಗೆ ಅವಕಾಶ ಉಂಟಾಗುವಂತೆ ಪ್ರಚೋದನೆ ಭಾಷಣ ಮಾಡಿ ಜನರು ದಂಗೆ ಏಳುವ ರೀತಿಯಲ್ಲಿ ಆಂಜಿನಪ್ಪ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

sm krishna bjp jds 1

ಹಳೆ ಮೈಸೂರು ಭಾಗದ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯವೇ ಜಾಸ್ತಿ. ಆದರೆ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿದೆ. ಮೆಡಿಕಲ್ ಕಾಲೇಜು ತರುತ್ತೇನೆ ಎಂಬ ಸುಧಾಕರ್ ಭರವಸೆ ಕೆಲಸ ಮಾಡಿದ್ದು 34,801 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 84,389 ಮತಗಳು ಬಿದ್ದರೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಅಂಜನಪ್ಪ ಅವರಿಗೆ 49,588 ಮತಗಳು ಬಿದ್ದಿದೆ. ಜೆಡಿಎಸ್ 35,869 ಮತಗಳನ್ನು ಪಡೆದಿದೆ. 2018ರ ಚುನಾವಣೆಯಲ್ಲಿ ಸುಧಾಕರ್ 30,431 ಮತಗಳಿಂದ ಜಯಗಳಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿವಿ ಮಂಜುನಾಥ್ ಅವರಿಗೆ 5,576 ಮತಗಳು ಬಿದ್ದಿತ್ತು.

TAGGED:AnjanappabjpchikkaballapurcongresskarnatakaSM Krishnaಉಪ ಚುನಾವಣೆಎಸ್ ಎಂ ಕೃಷ್ಣಕಾಂಗ್ರೆಸ್ಚಿಕ್ಕಬಳ್ಳಾಪುರದೂರು
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
10 hours ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
11 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
11 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
13 hours ago

You Might Also Like

HM Revannas wife has passed away
Bengaluru City

ಕಾಂಗ್ರೆಸ್‌ ನಾಯಕ ಹೆಚ್‌.ಎಂ ರೇವಣ್ಣ ಪತ್ನಿ ನಿಧನ

Public TV
By Public TV
13 minutes ago
pilot Pooja
Bengaluru City

Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?

Public TV
By Public TV
15 minutes ago
PAYAL
Latest

ಕನಸಿನ ಕೋರ್ಸ್‌ಗಾಗಿ ಲಂಡನ್‌ಗೆ ಹೊರಟಿದ್ದ ಯುವತಿಯ ದುರಂತ ಅಂತ್ಯ!

Public TV
By Public TV
30 minutes ago
Nganthoi Sharma
Latest

ವಿಮಾನ ಪತನ – ಗಗನ ಸಖಿಯ ಫೋಟೋ ಹಿಡಿದು ಕಣ್ಣೀರಿಟ್ಟ ಕುಟುಂಬಸ್ಥರು

Public TV
By Public TV
2 hours ago
Amit Shah
Latest

1.25 ಲಕ್ಷ ಲೀಟರ್‌ ಇಂಧನ ಇತ್ತು, ಮಧ್ಯಾಹ್ನ ತಾಪಮಾನ ಹೆಚ್ಚಿದ್ದರಿಂದ ರಕ್ಷಿಸುವ ಅವಕಾಶ ಇರಲಿಲ್ಲ: ಅಮಿತ್‌ ಶಾ

Public TV
By Public TV
1 hour ago
rabindranath tagore
Crime

ಸೇಡಿಗಾಗಿ ಠಾಗೂರ್ ಮನೆ ಮೇಲೆ ದಾಳಿ – 50ಕ್ಕೂ ಹೆಚ್ಚು ಜನರ ಮೇಲೆ ಕೇಸ್ 

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?