– ಚಿಕಿತ್ಸಾ ಕ್ರಮವನ್ನ ಯುವತಿ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆ ಎಂದಿದ್ದ ಕಾಮುಕ ವೈದ್ಯ
ಬೆಂಗಳೂರು: ಚಿಕಿತ್ಸೆ ಪಡೆಯಲು ಬಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಚರ್ಮರೋಗ ತಜ್ಞ (Dermatologist) ಅರೆಸ್ಟ್ ಆಗಿರುವ ಘಟನೆ ಬೆಂಗಳೂರಿನ (Bengaluru) ಖಾಸಗಿ ಕ್ಲಿನಿಕ್‌ನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಪ್ರವೀಣ್ ರೋಡ್ರಿಗಸ್ ಎಂದು ಗುರುತಿಸಲಾಗಿದ್ದು, ಚರ್ಮರೋಗ ತಜ್ಞನಾಗಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ:ಸಗಣಿಯಲ್ಲಿ ಹೊಡೆದಾಟ; ದೀಪಾವಳಿಗೆ ತೆರೆ – ವಿಶಿಷ್ಟ ಆಚರಣೆ ಎಲ್ಲಿ?
ಈ ಸಂಬಂಧ 21 ವರ್ಷದ ಯುವತಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚರ್ಮದ ಸೋಂಕು ಸಂಬಂಧ ಚಿಕಿತ್ಸೆ ಪಡೆಯಲು ನಾನು ಅ.18ರಂದು ಖಾಸಗಿ ಕ್ಲಿನಿಕ್‌ಗೆ ಹೋಗಿದ್ದೆ. ಚಿಕಿತ್ಸೆ ನೀಡುವಾಗ ವೈದ್ಯರು ನನ್ನೊಂದಿಗೆ ಲೈಂಗಿಕ ದುರುದ್ದೇಶದಿಂದ ನನ್ನ ದೇಹದ ವಿವಿಧ ಭಾಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾರೆ. ನನ್ನೊಂದಿಗೆ 30 ನಿಮಿಷಗಳ ಕಾಲ ಮಾತನಾಡಿ ಎರಡು ಬಾರಿ ಲೈಂಗಿಕ ಆಸೆಯಿಂದ ಕರೆದು ತಬ್ಬಿಕೊಂಡು ಎದೆಯ ಭಾಗ ಮುಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲವು ಬಾರಿ ಬಲವಂತವಾಗಿ ಮುತ್ತು ನೀಡಿ, ಬಟ್ಟೆ ಬಿಚ್ಚಿಸಿದ್ದಾರೆ. ಲೈಂಗಿಕ ಉದ್ದೇಶದಿಂದ ಪ್ರತ್ಯೇಕ ರೂಮ್ ಬುಕ್ ಮಾಡಿರುವುದಾಗಿ ತಿಳಿಸಿ ಸಹಕರಿಸುವಂತೆ ಹೇಳಿದ್ದ. ಪ್ರತಿ ಬಾರಿ ಚಿಕಿತ್ಸೆಗೆ ತಂದೆಯೊಂದಿಗೆ ಬರುತ್ತಿದ್ದೆ. ಈ ಬಾರಿ ತಂದೆಗೆ ಕೆಲಸ ಇದ್ದಿದ್ದರಿಂದ ನಾನೊಬ್ಬಳೇ ಹೋಗಿದ್ದೆ. ಇದನ್ನು ದುರುಪಯೋಗಪಡಿಸಿಕೊಂಡು ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಿದ್ದಾರೆ.
ಕೃತ್ಯವೆಸಗಿರುವ ಬಗ್ಗೆ ಯುವತಿ ಮನೆಯವರಿಗೆ ವಿಷಯ ತಿಳಿಸಿದ್ದರು. ಯುವತಿ ಕುಟುಂಬಸ್ಥರು ಹಾಗೂ ನೆರೆಹೊರೆ ಮನೆಯವರು ಕ್ಲಿನಿಕ್ ಮುಂದೆ ಹೋಗಿ ಪ್ರತಿಭಟನೆ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವೈದ್ಯನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ವೈದ್ಯ ನಿರಾಕರಿಸಿದ್ದ. ತನ್ನ ಚಿಕಿತ್ಸಾ ಕ್ರಮವನ್ನ ಯುವತಿ ತಪ್ಪಾಗಿ ಅರ್ಥೈಸಿಕೊಂಡಿದ್ದಳು ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ನೀಡಿದ ದೂರು ಆಧರಿಸಿ ಬಿಎನ್‌ಎಸ್ ಸೆಕ್ಷನ್ 75ರಡಿ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಇದನ್ನೂ ಓದಿ:ಲಾಡ್ಜ್‌ನಲ್ಲಿ ಯುವಕ ಅನುಮಾನಾಸ್ಪದ ಸಾವು ಕೇಸ್ – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಿಡ್ನಿ ಫೇಲ್ಯೂರ್ ಪತ್ತೆ