ವಿಜಯಪುರ: ಗೂಡ್ಸ್ ರೈಲು ಹಳಿ ತಪ್ಪಿ ಬೋಗಿಗಳು ಉರುಳಿ ಬಿದ್ದ ಘಟನೆ ವಿಜಪುರದಲ್ಲಿ ನಡೆದಿದೆ. ಗೂಡ್ಸ್ ಗಾಡಿ ಆದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.
ಗೂಡ್ಸ್ ರೈಲಿನ ಬೋಗಿಗಳು ಕಟ್ ಆಗಿ 6 ಬೋಗಿಗಳು ಉರುಳಿ ಬಿದ್ದಿವೆ. ಚಲಿಸುತ್ತಿದ್ದ ವೇಳೆ ಏಕಾಏಕಿ ರೈಲ್ವೆಯ ಆರು ಬೋಗಿಗಳು ಕಟ್ ಆಗಿ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ, ಯಾವುದೇ ಪ್ರಾಣ ಹಾನಿಯಾಗಿಲ್ಲ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ. ಇದನ್ನೂ ಓದಿ: ಸ್ವಾಮೀಜಿ ಆತ್ಮಹತ್ಯೆ ಪ್ರಕರಣ- ಮೂರು ಪುಟಗಳ ಡೆತ್‍ನೋಟ್ ಪತ್ತೆ
6 ಬೋಗಿಗಳು ಟ್ರ್ಯಾಕ್‍ನಿಂದ ಕಟ್ ಆಗಿ ಹೊರಗಡೆಗೆ ಬಿದ್ದಿವೆ. ಸ್ಥಳಕ್ಕೆ ವಿಜಯಪುರ ರೈಲ್ವೆ ಪೊಲೀಸರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಾಹುತ ಹಿನ್ನೆಲೆ ಸೊಲ್ಲಾಪುರ ಹಾಗೂ ವಿಜಯಪುರ ಮಾರ್ಗದಿಂದ ಹುಬ್ಬಳ್ಳಿ ಮಾರ್ಗಕ್ಕೆ ಹೋಗಬೇಕಿದ್ದ ಆರು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳಿಂದ ಇಂದು ಸಂಚರಿಸಬೇಕಿದ್ದ 6 ರೈಲು ಕ್ಯಾನ್ಸಲ್ ಮಾಡಿರುವ ಕುರಿತು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ: ಮೋದಿ