ಚಂಢೀಗಢ್: ಮಾಜಿ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ (Gurmeet Ram Rahim Singh) ಮತ್ತು ಇತರ ನಾಲ್ವರು ಆರೋಪಿಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ (Haryan High Court) ಪ್ರಕರಣದಿಂದ ಖುಲಾಸೆಗೊಳಿಸಿದೆ.
2019 ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಮತ್ತು ಮಾಜಿ ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಹತ್ಯೆಗೆ ಸಂಬಂಧಿಸಿದ ಎರಡು ಕೊಲೆ ಪ್ರಕರಣಗಳಲ್ಲಿ ಸ್ವಯಂ-ಘೋಷಿತ ದೇವಮಾನವನನ್ನು ಪಂಚಕುಲದ ಸಿಬಿಐ ನ್ಯಾಯಾಲಯವು ದೋಷಿ ಎಂದು ಘೋಷಿಸಿತು. 2021 ರ ಅಕ್ಟೋಬರ್ 18 ರಂದು ನ್ಯಾಯಾಲಯವು ರಾಮ್ ರಹೀಮ್ ಮತ್ತು ಇತರ ನಾಲ್ವರಿಗೆ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ, ಜೊತೆಗೆ ದಂಡ ವಿಧಿಸಿತ್ತು. ಇದನ್ನೂ ಓದಿ: ಆರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ
Advertisement
Advertisement
ಸಿಬಿಐ ನ್ಯಾಯಲಯದ ಆದೇಶದ ವಿರುದ್ಧ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಗುರ್ಮೀತ್ ರಾಮ್ ರಹೀಮ್ ಸಿಂಗ್ ಸೇರಿ ನಾಲ್ವರು ಆರೋಪಿಗಳಾದ ಅವತಾರ್ ಸಿಂಗ್, ಕ್ರಿಶನ್ ಲಾಲ್, ಜಸ್ಬೀರ್ ಸಿಂಗ್ ಮತ್ತು ಸಬ್ದಿಲ್ ಸಿಂಗ್ ಖುಲಾಸೆಗೊಳಿಸಿದೆ.
Advertisement
ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಎಲ್ಲಾ ಅಪರಾಧಗಳನ್ನು ಪ್ರಶ್ನಿಸಿದ್ದರು. ಆದರೆ ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಅವರ ಮೇಲ್ಮನವಿ ಬಾಕಿ ಇದೆ. ರಾಮ್ ರಹೀಮ್ ಸದ್ಯ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿದ್ದಾರೆ. ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅವರು ಪ್ರಸ್ತುತ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ರಾಜ್‍ಕೋಟ್‍ನ ಗೇಮಿಂಗ್ ಝೋನ್ ಅಗ್ನಿ ಅವಘಡ ಪ್ರಕರಣ – ಪ್ರಮುಖ ಆರೋಪಿ ಅರೆಸ್ಟ್
Advertisement
ಡೇರಾ ಸಚ್ಚಾ ಸೌಧದ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಅವರನ್ನು 2002 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಸಿಬಿಐ ಚಾರ್ಜ್‌ಶೀಟ್ ಪ್ರಕಾರ, ಡೇರಾ ಮುಖ್ಯಸ್ಥರ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಎತ್ತಿ ತೋರಿಸುವ ಪತ್ರದ ಹಂಚಿಕೆಯ ಹಿಂದೆ ರಂಜಿತ್ ಸಿಂಗ್ ಪಾತ್ರವಿದೆ ಎಂದು ರಾಮ್ ರಹೀಮ್ ಶಂಕಿಸಿದ್ದರು. ಈ ಹಿನ್ನೆಲೆ ಹತ್ಯೆ ಮಾಡಿದ್ದರು ಎನ್ನಲಾಗಿದೆ.