ಹಾವೇರಿ: ಡೆಪ್ಯೂಟಿ ಸ್ಪೀಕರ್ (Deputy Speaker) ರುದ್ರಪ್ಪ ಲಮಾಣಿ (Rudrappa Lamani) ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರೆ ಇತ್ತ ಕಡೆ ರುದ್ರಪ್ಪ ಲಮಾಣಿ ಪುತ್ರ ಸರ್ಕಾರಿ ಕಾರಲ್ಲಿ ಸುತ್ತಾಡುತ್ತಾ ದರ್ಬಾರ್ ನಡೆಸುತ್ತಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ (Darshan Lamani) ಬೆಂಗಳೂರಿನಿಂದ ಹಾವೇರಿಗೆ (Haveri) ಸರ್ಕಾರಿ ಕಾರಿನಲ್ಲಿ ಆಗಮಿಸಿದ್ದು, ಸರ್ಕಾರ ಡೆಪ್ಯೂಟಿ ಸ್ಪೀಕರ್‌ಗೆ ನೀಡಿರುವ ಕಾರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಬಿಜೆಪಿಗೆ ದೇಣಿಗೆ ಜಾಸ್ತಿ
ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆ ಅಧಿಕಾರಿಗಳು ಹಾಗೂ ಕಾರ್ಯಕರ್ತರು ರುದ್ರಪ್ಪ ಲಮಾಣಿ ಅವರೇ ಬಂದರೂ ಎಂದು ಕಾರು ಕಡೆ ಬಂದರು. ಬಂದಿದ್ದು ಅವರ ಪುತ್ರ ಅಂತಾ ಗೊತ್ತಾಗುತ್ತಿದ್ದಂತೆ ರುದ್ರಪ್ಪ ಲಮಾಣಿ ಅವರ ಆರೋಗ್ಯದ ಕುರಿತು ವಿಚಾರಣೆ ಮಾಡಿದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ನಾಲ್ವರಿಗೆ ಕೆಎಫ್‍ಡಿ ಸೋಂಕು – ಕಾಡಿಗೆ ತೆರಳದಂತೆ ಆರೋಗ್ಯ ಇಲಾಖೆ ಎಚ್ಚರಿಕೆ
ದರ್ಶನ್ ಲಮಾಣಿ ತಮ್ಮ ಬೆಂಬಲಿಗರ ಜೊತೆ ನಗರ ಸಂಚಾರ ಮಾಡಿದ್ದು, ಕೆಎಂ05, ಜಿ6000 ನಂಬರಿನ ಸರ್ಕಾರಿ ವಾಹನದಲ್ಲಿ ಓಡಾಡುವ ಮೂಲಕ ದರ್ಬಾರ್ ನಡೆಸಿದ್ದಾರೆ. ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.