ಬೆಂಗಳೂರು: ಸಮ್ಮಿಶ್ರ ಸರ್ಕಾರವಿದ್ದಾಗ ವಿಧಾನಸಭೆಯಲ್ಲಿ ಉಪ ಸಭಾಧ್ಯಕ್ಷ ಸ್ಥಾನ ಪಡೆದಿದ್ದ ಜೆಡಿಎಸ್, ಮೈತ್ರಿ ಪತನವಾದ ಬಳಿಕವೂ ಉಪ ಸಭಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಉಪ ಸಭಾಧ್ಯಕ್ಷರಾದ ಕೃಷ್ಣಾರೆಡ್ಡಿ ಬಿಜೆಪಿ ಸರ್ಕಾರ ಬಂದರು ಇನ್ನೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಸಂಖ್ಯಾಬಲ ಇಲ್ಲದೆ ಇದ್ದರು ಉಪ ಸಭಾಧ್ಯಕ್ಷ ಸ್ಥಾನದ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು, ರಾಜಕೀಯ ಚದುರಂಗದಾಟವಾಡೋಕೆ ಮುಂದಾಗಿದೆ.
Advertisement
ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ರಾಜೀನಾಮೆ ಕೊಡದ್ದಕ್ಕೆ ಬಿಜೆಪಿ ಆಕ್ರೋಶ ಹೊರ ಹಾಕಿದೆ. ಆದ್ರೆ ಉಪ ಸಭಾಧ್ಯಕ್ಷರು ರಾಜೀನಾಮೆ ಕೊಡದ್ದಕ್ಕೆ ಜೆಡಿಎಸ್ ವರಿಷ್ಠರ ಸೂಚನೆ ಇದೆ ಎನ್ನಲಾಗ್ತಿದೆ. ಖುದ್ದು ಜೆಡಿಎಸ್ ವರಿಷ್ಠರು ಉಪ ಸಭಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ ಅಂತ ಸೂಚನೆ ಕೊಟ್ಟಿದ್ದಾರೆ ಅಂತ ಜೆಡಿಎಸ್ ಮೂಲಗಳು ಹೇಳ್ತಿದೆ. ನಾವಾಗಿಯೇ ಸ್ಥಾನ ಬಿಡೋದು ಬೇಡ. ಬಿಜೆಪಿ ಅವರು ಬೇಕಾದ್ರೆ ಉಪ ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿ ಅಂತ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
Advertisement
Advertisement
ಉಪ ಸಭಾಧ್ಯಕ್ಷರ ಸ್ಥಾನದಲ್ಲೂ ಜೆಡಿಎಸ್ ರಾಜಕೀಯ ಜಾಣತನ ಮೆರೆದಿದೆ. ವಿಧಾನಸಭೆ ಇತಿಹಾಸದಲ್ಲಿ ಈವರೆಗೂ ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿಲ್ಲ. ಒಂದು ವೇಳೆ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಸ್ಥಾನದಿಂದ ಕೆಳಗಿಳಿಸಿದ್ರೆ ಅದರ ಲಾಭ ಪಡೆಯೋದು ಜೆಡಿಎಸ್ ಉದ್ದೇಶ. ಅಲ್ಲದೆ ಉಪ ಸಭಾಧ್ಯಕ್ಷರನ್ನ ಅವಿಶ್ವಾಸ ನಿರ್ಣಯ ಮಂಡಿಸಿದ ಅಪಕೀರ್ತಿ ಬಿಜೆಪಿಯ ಮೇಲೆ ಹೊರಿಸಬಹುದು ಅನ್ನೋದು ಜೆಡಿಎಸ್ ವರಿಷ್ಠರ ಲೆಕ್ಕಾಚಾರ. ಹೀಗಾಗಿಯೇ ಉಪ ಸಭಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಕೊಡದಿರಲು ಕೃಷ್ಣಾರೆಡ್ಡಿ ತೀರ್ಮಾನ ಮಾಡಿದ್ದಾರೆ. ಹಾಗಾದರೆ ಬಿಜೆಪಿ ಉಪ ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತಾ ಕಾದು ನೋಡಬೇಕು.