ಬೆಂಗಳೂರು: ಕಾಂಗ್ರೆಸ್ ನಲ್ಲಿ ಮಂತ್ರಿ ಸ್ಥಾನ ಮತ್ತು ಪಕ್ಷದ ಜವಾಬ್ದಾರಿ ಎರಡೂ ಹುದ್ದೆಗಳನ್ನು ಒಟ್ಟಿಗೆ ನೀಡುವ ಬಗ್ಗೆ ನನಗೆ ಗೊತ್ತಿಲ್ಲ ಅಂತ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ಬಂದಿದ್ದೇವೆ. ಚರ್ಚೆ ಬಳಿಕ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ. 22 ಸ್ಥಾನಗಳ ಪೈಕಿ ಒಂದು ಸಚಿವ ಸ್ಥಾನ ನನಗೆ ನಿಗದಿ ಆಗಿದ್ದು, 21 ಸ್ಥಾನಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಒಂದು ಅಥವಾ ಎರಡು ಹಂತದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
Advertisement
ಹಿರಿಯ ನಾಯಕರ ಅನುಭವ ಮುಖ್ಯ. ಕಿರಿಯ ನಾಯಕರನ್ನು ಬೆಳೆಸುವ ಮೂಲಕ ನಾಯಕತ್ವ ಬೆಳೆಯಬೇಕು. ಹಿರಿಯರು ಮತ್ತು ಕಿರಿಯರನ್ನು ಒಳಗೊಂಡ ಸಂಪುಟ ರಚಿಸಲಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಎಚ್‍ಡಿಕೆ ಐದು ವರ್ಷ ಸಿಎಂ ಆಗುವ ಬಗ್ಗೆಯೂ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
Advertisement
ರಾಹುಲ್ ಗಾಂಧಿ ಜೊತೆಗಿನ ಸಭೆಗೆ ಇನ್ನು ಸಮಯ ನಿಗದಿ ಆಗಿಲ್ಲ. ಡಿಕೆಶಿ ಮಂತ್ರಿ ಸ್ಥಾನ ಮತ್ತು ಕೆಪಿಸಿಸಿ ಪಟ್ಟ ಕೇಳುತ್ತಿರುವ ಹಿನ್ನೆಲೆಯಲ್ಲಿ ತಾನು ಕೂಡ ಪಕ್ಷದ ಅಧ್ಯಕ್ಷನಾಗುವಾಗ ಮಂತ್ರಿ ಸ್ಥಾನ ತ್ಯಜಿಸಿದ್ದೆ. ಒಬ್ಬರಿಗೆ ಏಕಕಾಲಕ್ಕೆ ಎರಡು ಹುದ್ದೆ ಕೊಡುವ ವಿಷಯ ಗೊತ್ತಿಲ್ಲ. ನನ್ನ ಪ್ರಕಾರ ಎರಡು ಜವಾಬ್ದಾರಿ ಏಕಕಾಲಕ್ಕೆ ನೀಡುವುದಿಲ್ಲ ಪರಮೇಶ್ವರ್ ತಿಳಿಸಿದರು.
Advertisement
ಡಿಕೆಶಿಗೆ ಇಲ್ಲ ಎರಡು ಹುದ್ದೆ?
ಈ ಹಿಂದೆ ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ಶಾಸಕರನ್ನು ಡಿಕೆ ಶಿವಕುಮಾರ್ ರಕ್ಷಿಸಿದ್ದರು. ಇದಕ್ಕೂ ಮೊದಲು ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಅಲ್ಲಿನ ಕೈ ಶಾಸಕರು ಕರ್ನಾಟಕಕ್ಕೆ ಬಂದಿದ್ದಾಗ ಡಿಕೆಶಿ ಉಸ್ತುವಾರಿ ವಹಿಸಿಕೊಂಡಿದ್ದರು. ಡಿಕೆ ಶಿವಕುಮಾರ್ ಅವರ ಈ ಕೆಲಸ ಹೈಕಮಾಂಡ್ ಗೆ ಮೆಚ್ಚುಗೆಯಾಗಿ ಎಚ್‍ಡಿಕೆ ಸರ್ಕಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಮಂತ್ರಿ ಸ್ಥಾನ ಸಿಗಲಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಈ ಪರಮೇಶ್ವರ್ ಪರೋಕ್ಷವಾಗಿ ಒಬ್ಬರಿಗೆ ಎರಡು ಹುದ್ದೆ ಇಲ್ಲ ಎಂದು ಹೇಳುವ ಮೂಲಕ ಡಿಕೆಶಿ ಅವರಿಗೆ ಎರಡು ಹುದ್ದೆ ಸಿಗುವುದಿಲ್ಲ ಎನ್ನುವ ಮಾತು ಈಗ ಕೇಳಿ ಬಂದಿದೆ.
Advertisement
ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರು ಪರಿಷತ್ ಗೆ ನೇಮಕ ಆಗಿದ್ದರು. ಆದರೆ ಅವರಿಗೆ ಯಾವುದೇ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿ ಕೊರಟಗೆರೆ ಕ್ಷೇತ್ರದಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ ಡಿಸಿಎಂ ಸ್ಥಾನ ಸಿಕ್ಕಿದ್ದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವರಾಗಿದ್ದರು. ಸಂಪುಟ ಪುನರ್ರಚನೆಯ ವೇಳೆ ಗುಂಡೂರಾವ್ ಅವರನ್ನು ಕೈ ಬಿಡಲಾಗಿತ್ತು. ಬಳಿಕ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.