– ಸಮುದ್ರದಿಂದ ದಡ ಸೇರಿದ ಮೀನುಗಾರಿಕಾ ಬೋಟುಗಳು
ಕಾರವಾರ: ರಾಜ್ಯಾದ್ಯಂತ ಉತ್ತಮ ಮಳೆಯಿಂದಾಗಿ (Rain) ರೈತರ ಮುಖದಲ್ಲಿ ಮಂದಹಾಸವನ್ನೇನೋ ಮೂಡಿಸಿದೆ. ಆದರೆ ಬಂಗಾಳಕೊಲ್ಲಿಯಲ್ಲಿ (Bay Of Bengal) ವಾಯುಭಾರ ಕುಸಿತದಿಂದಾಗಿ ಕರಾವಳಿಯಲ್ಲಿ ಮೀನುಗಾರಿಕೆಗೆ (Fishing) ನಿಷೇಧ ಹೇರಲಾಗಿದ್ದು, ಅವಧಿ ಮುಂಚೆಯೇ ಮೀನುಗಾರಿಕಾ ಬೋಟುಗಳು ಬಂದರಿನಲ್ಲಿ ಲಂಗರು ಹಾಕುತ್ತಿವೆ.
Advertisement
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಮೀನುಗಾರಿಕಾ ಇಲಾಖೆ ಐದು ದಿನಗಳ ಕಾಲ ಮೀನುಗಾರಿಕೆಗೆ ಆಳ ಸಮುದ್ರಕ್ಕೆ ತೆರಳದಂತೆ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಆಳ ಸಮುದ್ರಕ್ಕೆ ತೆರಳಿದ ಬೋಟುಗಳು ಕರಾವಳಿ ಭಾಗದ ಬಂದರುಗಳಿಗೆ ಬಂದು ನಿಲ್ಲುತ್ತಿದ್ದು, ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ 10,000 ಕ್ಕೂ ಹೆಚ್ಚು ಬೋಟುಗಳಿದ್ದು, ಕಾರವಾರ, ಅಂಕೋಲ, ಕುಮಟಾ, ಭಟ್ಕಳ, ಹೊನ್ನಾವರ ಭಾಗದಲ್ಲಿ ಚಂಡಮಾರುತದಿಂದಾಗಿ ಮರಳಿ ದಡ ಸೇರಿವೆ. ಇದನ್ನೂ ಓದಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ
Advertisement
Advertisement
ಈ ಹಿಂದೆ ಉತ್ತಮ ಮಳೆಯಿಂದಾಗಿ ಹೆಚ್ಚಿನ ಮೀನಿನ ಬೇಟೆ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಅರಬ್ಬಿ ಸಮುದ್ರದಲ್ಲಿ ಬೀಸಿದ ಹಲವು ಚಂಡಮಾರುತಗಳಿಂದಾಗಿ ಮೀನುಗಾರಿಕೆಗೆ ಅಡ್ಡಿ ಉಂಟುಮಾಡಿತ್ತು. ಕಳೆದ ಮೂರು ತಿಂಗಳಿನಿಂದ ಮೀನುಗಾರರು ಉತ್ತಮ ಮೀನಿನ ಬೇಟೆಯಲ್ಲಿ ನಿರತರಾಗಿದ್ದರು. ಆದರೆ ಇದೀಗ ಹವಾಮಾನ ವೈಪರಿತ್ಯ ಮತ್ತೆ ಮೀನುಗಾರರಿಗೆ ಬರೆ ಎಳೆದಿದೆ. ಇನ್ನು ಜೂನ್ 1ರಿಂದ ಎರಡು ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧವಿರುತ್ತದೆ. ಹೀಗಾಗಿ ಇದೀಗ ನಿರ್ಬಂಧ ಹಿನ್ನೆಲೆಯಲ್ಲಿ ಮೀನುಗಾರರು ಬಂದರಿಗೆ ಆಗಮಿಸಿ ತಮ್ಮ ಬೋಟುಗಳನ್ನು ದಡದಲ್ಲಿ ಇರಿಸಿ ಸರಿಪಡಿಸುವ ಕಾರ್ಯದಲ್ಲಿ ತೊಡಗುತ್ತಿದ್ದು, ಅವಧಿ ಮುಂಚಿತವಾಗಿಯೇ ಮೀನುಗಾರಿಕೆ ಸ್ಥಗಿತವಾಗುತ್ತಿದೆ. ಇದಲ್ಲದೇ ಮೀನುಗಾರಿಕೆ ನಂಬಿ ಬಂದ ಹೊರ ರಾಜ್ಯದ ಮೀನುಗಾರಿಕಾ ಕಾರ್ಮಿಕರು ಸಹ ನಿಷೇಧ ಹಿನ್ನೆಲೆಯಲ್ಲಿ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ ಲಕ್ಷಾಂತರ ಸಾಲ ಮಾಡಿ ಸಮುದ್ರಕ್ಕಿಳಿದ ಮೀನುಗಾರ ಮೀನುಗಳಿಲ್ಲದೇ ಈ ಬಾರಿ ನಷ್ಟದಲ್ಲೇ ನಿಲ್ಲುವಂತೆ ಮಾಡಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆ 2024: 5ನೇ ಹಂತದಲ್ಲಿರುವ ಪ್ರಮುಖ ಅಭ್ಯರ್ಥಿಗಳು
Advertisement
ಹವಾಮಾನ ಇಲಾಖೆ ಮಾಹಿತಿಯಂತೆ ಜೂನ್ 1ರ ವೇಳೆಗೆ ಮುಂಗಾರು ಕೇರಳ ಪ್ರವೇಶಿಸಲಿದೆ. ಜೂನ್ 15ರ ವೇಳೆಗೆ ದೇಶಾದ್ಯಂತ ಮುಂಗಾರು ವ್ಯಾಪಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ರೈತರಿಗೆ ಮುಂಗಾರು ಖುಷಿ ತಂದರೆ ಮೀನುಗಾರರಿಗೆ ಮಾತ್ರ ನಷ್ಟ ತಂದೊಡ್ಡಿದೆ. ಇದನ್ನೂ ಓದಿ: ಅಂಜಲಿ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ಚೆಕ್ ನೀಡಿದ ಸಚಿವ ಜೋಶಿ