ಯಾದಗಿರಿ: ಮಕ್ಕಳಾಗದ ಹಿನ್ನಲೆ ಮಾನಸಿಕ ಖಿನ್ನತೆಗೆ ಒಳಗಾಗಿ, ಮಹಿಳೆಯೊಬ್ಬಳು (Woman) ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿರಂಜೀವಿ ನಗರದಲ್ಲಿ ನಡೆದಿದೆ.
ತಾಯಮ್ಮ (38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿರುವ ಇಳಿಗೆಯಿಂದ ಕತ್ತು ಕಾಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ಪತಿ ವೆಂಕಟೇಶ ಹಾಗೂ ಇಬ್ಬರು ಸಹೋದರಿಯರ ಜೊತೆ ತಾಯಮ್ಮ ವಾಸವಾಗಿದ್ದರು. 8 ವರ್ಷಗಳ ಹಿಂದೆ ಸೋದರ ಮಾವನ ಜೊತೆ ಮದುವೆಯಾಗಿದ್ದ ತಾಯಮ್ಮಗೆ ಮಕ್ಕಳಾಗಿಲ್ಲ ಎಂಬ ಕೊರಗು ಇತ್ತು. ಇದೇ ಕಾರಣದಿಂದ ಮಾನಸಿಕ ಖಿನ್ನತೆಯಿಂದ ಒಳಗಾಗಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ಜಯತೀರ್ಥರ ಆರಾಧನೆಗೆ ಅವಕಾಶ – ಉತ್ತರಾಧಿ ಮಠದವರಿಂದ ಮೌನ ಪ್ರತಿಭಟನೆ
Advertisement
Advertisement
ಸ್ಥಳಕ್ಕೆ ಯಾದಗಿರಿ (Yadgir) ನಗರ ಠಾಣೆಯ ಪೊಲೀಸರು (Police) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಡಾನೆಯೊಂದಿಗೆ ಸೆಲ್ಫಿ – 20 ಸಾವಿರ ರೂ. ದಂಡ
Advertisement
Web Stories