– ಯಾರು ಡೋರ್ ಓಪನ್ ಮಾಡಬೇಡಿ
– ಕಾರಿನ ಗ್ಲಾಸ್‌ನಲ್ಲಿ ಡೆತ್‌ನೋಟ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಈ ಆತ್ಮಹತ್ಯೆ(Suicide) ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಕಾರಿನಲ್ಲಿ 3 ಕೆಜಿ ನೈಟ್ರೋಜನ್ ಸಿಲಿಂಡರ್(Nitrogen Cylinder) ಓಪನ್ ಮಾಡಿ ಹೊರಗಿನಿಂದ ಗಾಳಿ ಬರದಂತೆ ಕ್ಲೋಸ್ ಮಾಡಿಕೊಂಡು ವ್ಯಕ್ತಿಯೊಬ್ಬರು ಜೀವ ಬಿಟ್ಟಿದ್ದಾರೆ.
Advertisement
ವಿಜಯ್ ಕುಮಾರ್ (51) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತ ವಿಜಯ್ ಕುಮಾರ್ ಮಹಾಲಕ್ಷ್ಮಿ ಲೇಔಟ್ ನಿವಾಸಿಯಾಗಿದ್ದು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್(Software Engineer) ಆಗಿದ್ದರು. ಕುರುಬರಹಳ್ಳಿ ಜಂಕ್ಷನ್ ಬಳಿ ಕಾರು ನಿಲ್ಲಿಸಿ ವಿಜಯ್ ಕುಮಾರ್ ತಮ್ಮ ಕಾರಿನ ಎಲ್ಲ ಗ್ಲಾಸ್‌ಗಳನ್ನೂ ಮುಚ್ಚಿ ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಲೀಕ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ವಿಜಯ್ ಕುಮಾರ್ ಹೃದಯದ ಸಮಸ್ಯೆಗೆ ಆಪರೇಷನ್ ಮಾಡಿಸಿಕೊಂಡಿದ್ದರು. ಆಪರೇಷನ್ ಬಳಿಕವೂ ಉಸಿರಾಟದ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸಮಸ್ಯೆ ಎದುರಾಗಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿಜಯ್ ಕುಮಾರ್ ಆತ್ಮಹತ್ಯೆಗೂ ಮುನ್ನ ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಗೂಗಲ್‍ನಲ್ಲಿ ಸರ್ಚ್ ಮಾಡಿದ್ದಾರೆ.
Advertisement
ನೈಟ್ರೋಜನ್ ಹೊಗೆ ದೇಹದ ಒಳಗೆ ಸೇರಿದರೆ ಪ್ರಜ್ಞೆ ತಪ್ಪಿ ಸುಲಭವಾಗಿ ಸಾಯಬಹುದು ಎಂದು ತಿಳಿದುಕೊಂಡಿದ್ದ ಇವರು ಸೋಮವಾರ ಮಹಾಲಕ್ಷ್ಮಿ ಲೇಔಟ್ ಪಾರ್ಕ್ ಬಳಿಗೆ ತನ್ನ ಕಾರು ತೆಗೆದುಕೊಂಡು ಬಂದಿದ್ದಾರೆ.
ಪಾರ್ಕ್ ಬಳಿ ಕಾರು ನಿಲ್ಲಿಸಿ ಮೊದಲಿಗೆ ಕಾರಿಗೆ ಬಿಸಿಲು ಬೀಳದಂತೆ ಹೊದಿಸುವ ಕವರ್ ತೆಗೆದಿದ್ದರು. ಈ ವೇಳೆ ಅಲ್ಲೇ ಇದ್ದ ಒಬ್ಬರಲ್ಲಿ, ನನಗೆ ಸುಸ್ತಾಗಿದೆ. ಬಿಸಿಲು ಬೀಳದಂತೆ ಕವರ್ ಮುಚ್ಚುವಂತೆ ಹೇಳಿ ಕಾರಿನ ಒಳಗೆ ಕೂತಿದ್ದಾರೆ.
ವಿಜಯ್ ಕುಮಾರ್ ಮಾತು ಕೇಳಿ ಆ ವ್ಯಕ್ತಿ ಕಾರಿಗೆ ಕವರ್ ಮುಚ್ಚಿ ಹೋಗಿದ್ದರು. ಈ ವೇಳೆ ಮುಖಕ್ಕೆ ಕವರ್ ಸುತ್ತಿಕೊಂಡು ಅದರೊಳಗೆ ಪೈಪ್‍ಮೂಲಕ ನೈಟ್ರೋಜನ್ ಬಿಟ್ಟುಕೊಂಡಿದ್ದಾರೆ. ಕೆಲ ಹೊತ್ತಿನಲ್ಲೇ ವಿಷ ಗಾಳಿಯಿಂದ ತೀವ್ರ ಆಸ್ಥಸ್ಥರಾಗಿ ಒದ್ದಾಡಿ, ಒದ್ದಾಡಿ ಸಾವನ್ನಪ್ಪಿದ್ದಾರೆ.
ಸಾವಿಗೂ ಮುನ್ನ ಬರೆದಿದ್ದ ಡೆತ್ ನೋಟ್ ಬರೆದಿದ್ದು ಅದನ್ನು ಕಾರಿನ ಗ್ಲಾಸ್‌ಗೆ ಅಂಟಿಸಿದ್ದಾರೆ. “ಯಾರು ಕಾರಿನ ಬಾಗಿಲು ತೆರೆಯಬೇಡಿ. ಒಳಗಡೆ ವಿಷದ ಗಾಳಿ ಇದ್ದು ನಿಮಗೂ ಸಮಸ್ಯೆ ಆಗುತ್ತದೆ. ಇದನ್ನು ಪೊಲೀಸರು, ನುರಿತ ತಂಡದವರೇ ಓಪನ್ ಮಾಡಲಿ” ಎಂದು ಬರೆದಿದ್ದಾರೆ. ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.