ಬೆಂಗಳೂರು: ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಹೋಟೆಲ್ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಪಾರ್ಕ್‍ಗೆ ಲೋಕೋಪಯೋಗಿ ಇಲಾಖೆ ಸ್ಕೆಚ್ ಹಾಕಿರುವುದು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಹೆಚ್ಚು ಬಿಲ್ಡಿಂಗ್ ಗಳ ನಿರ್ಮಾಣ ನಿಷಿದ್ಧವಾಗಿದೆ. ಆದರೂ, ಅಕ್ರಮ ಕಟ್ಟಡ, ಹೋಟೆಲ್‍ಗಳ ನಿರ್ಮಾಣಕ್ಕೆ ಇಲಾಖೆ ಅನುಮತಿ ನೀಡಿದೆ. ಇದ್ರಿಂದ ಕಬ್ಬನ್ ಪಾರ್ಕ್ ಗೆ ತೊಂದರೆಯಾಗ್ತಿದೆ ಎಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ನಿಂದ ಲೋಕೋಪಯೋಗಿ ಇಲಾಖೆ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.
Advertisement
Advertisement
ಬೆಂಗಳೂರಿನಲ್ಲಿ ಇದೀಗ ಉಳಿದಿರುವ ಪ್ರಮುಖ ಉದ್ಯಾನವನಗಳೆಂದರೆ ಲಾಲ್ ಬಗ್ ಮತ್ತು ಕಬ್ಬನ್ ಪಾರ್ಕ್. ಇತ್ತೀಚೆಗೆ ಕಬ್ಬನ್ ಪಾರ್ಕ್ ನಲ್ಲಿ ಕೆಲವೊಂದು ಸರ್ಕಾರಿ ಕಟ್ಟಡಗಳು ಹಾಗೂ ಅಂಗಡಿಗಳು ತಲೆ ಎತ್ತುತ್ತಿವೆ. ಅದರಲ್ಲೂ ಕೂಡ ಲೋಕೋಪಯೋಗಿ ಸಚಿವರಾಗಿರುವ ಎಚ್ ಡಿ ರೇವಣ್ಣ ಅವರು ಅಧಿಕಾರಿ ಸ್ವೀಕರಿಸಿದ ನಂತರ ಇನ್ನೂ ಹೆಚ್ಚಾಗಿದೆ ಅಂತ ಪರಿಸರವಾದಿ ಸಾಯಿದತ್ತ ಆರೋಪಿಸಿದ್ದಾರೆ.
Advertisement
Advertisement
ನಗರದ ಹೃದಯಭಾಗದಲ್ಲಿರುವಂತದ್ದು ಕಬ್ಬನ್ ಪಾರ್ಕ್ ಒಂದೇ. ಹೀಗಾಗಿ ಇದೀಗ ಸರ್ಕಾರವೇ ಈ ಒಂದು ಉದ್ಯಾನವನವನ್ನು ನಾಶ ಮಾಡಲು ಹೊರಟಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ. ಇನ್ನು ಮುಂದಾದರೂ ಕೂಡ ಕಬ್ಬನ್ ಪಾರ್ಕ್ ನಲ್ಲಿ ಯಾವುದೇ ರೀತಿಯ ಕಟ್ಟಡಗಳು ಆಗದೇ ಇರುವಂತೆ ನೋಡಿಕೊಳ್ಳಬೇಕು. ಇತ್ತೀಚೆಗೆ ನಗರದ ವಾತಾವರಣ ಕೂಡ ಹದಗೆಡುತ್ತಿದ್ದು, ಈ ಒಂದು ಉದ್ಯಾನವನವನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು ಅಂತ ಅವರು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv