Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬ್ರಿಟಿಷ್ ಕೌನ್ಸಿಲ್ ಜೊತೆ 3 ವರ್ಷಗಳ ಒಪ್ಪಂದಕ್ಕೆ ಉನ್ನತ ಶಿಕ್ಷಣ ಇಲಾಖೆ ಅಂಕಿತ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬ್ರಿಟಿಷ್ ಕೌನ್ಸಿಲ್ ಜೊತೆ 3 ವರ್ಷಗಳ ಒಪ್ಪಂದಕ್ಕೆ ಉನ್ನತ ಶಿಕ್ಷಣ ಇಲಾಖೆ ಅಂಕಿತ

Bengaluru City

ಬ್ರಿಟಿಷ್ ಕೌನ್ಸಿಲ್ ಜೊತೆ 3 ವರ್ಷಗಳ ಒಪ್ಪಂದಕ್ಕೆ ಉನ್ನತ ಶಿಕ್ಷಣ ಇಲಾಖೆ ಅಂಕಿತ

Public TV
Last updated: March 11, 2022 2:05 pm
Public TV
Share
3 Min Read
Ashwath Narayan 1
SHARE

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ತಂದುಕೊಡುವ ಮೂರು ವರ್ಷಗಳ ಒಡಂಬಡಿಕೆಗೆ ಕರ್ನಾಟಕ ಸರ್ಕಾರ ಮತ್ತು ಬ್ರಿಟಿಷ್ ಕೌನ್ಸಿಲ್ ಸಂಸ್ಥೆಗಳು ಶುಕ್ರವಾರ ಅಂಕಿತ ಹಾಕಿದವು.

ವಿಕಾಸಸೌಧದಲ್ಲಿ ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪರವಾಗಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್ ಮತ್ತು ಬ್ರಿಟಿಷ್ ಕೌನ್ಸಿಲ್ ಪರವಾಗಿ ಆ ಸಂಸ್ಥೆಯ ದಕ್ಷಿಣ ಭಾರತ ಮಟ್ಟದ ನಿರ್ದೇಶಕ ಜನಕ ಪುಷ್ಪನಾಥನ್ ಅಂಕಿತ ಹಾಕಿ, ಒಡಂಬಡಿಕೆ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉಪಸ್ಥಿತರಿದ್ದರು.

Ashwath Narayan 2

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ ಅವರು, ಈ ಒಡಂಬಡಿಕೆಯು ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ, ಇಂಗ್ಲಿಷ್ ಕಲಿಕೆ ಮತ್ತು ಸಂಶೋಧನೆಗೆ ಅಗತ್ಯವಾದ ಶಿಸ್ತನ್ನು ಕಲಿಸಲಿದೆ. ರಾಜ್ಯ ಮತ್ತು ಇಂಗ್ಲೆಂಡ್‍ನ ಶಿಕ್ಷಣ ಸಂಸ್ಥೆಗಳ ಜೊತೆ ವಿದ್ಯಾರ್ಥಿಗಳ ವಿನಿಮಯ (ಟ್ವಿನ್ನಿಂಗ್ ಕಾರ್ಯಕ್ರಮ), ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ನಾಯಕತ್ವ ಬೆಳೆಸುವ ವಿಷಯದಲ್ಲಿ ಒಪ್ಪಂದ ಗಮನಹರಿಸಲಿದೆ. ಇದರಿಂದಾಗಿ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ ಎಂದರು.

ಬ್ರಿಟಿಷ್ ಕೌನ್ಸಿಲ್‍ನೊಂದಿಗೆ ಕಳೆದೊಂದು ದಶಕದಿಂದ ರಾಜ್ಯದ ಸಂಬಂಧ ಹಲವು ಪಟ್ಟು ಸುಧಾರಿಸಿದೆ. ಈ ಸಹಭಾಗಿತ್ವದ ಮೂಲಕ ರಾಜ್ಯದ ವಿ.ವಿ.ಗಳ ಪಠ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗಿದೆ. ಜೊತೆಗೆ, ಒಳ್ಳೆಯ ಉದ್ಯೋಗ ಸೃಷ್ಟಿಯಾಗುತ್ತಿವೆ ಎಂದು ಹೇಳಿದರು. ಇದನ್ನೂ ಓದಿ: EVMಗಳಲ್ಲಿ ಸಮಸ್ಯೆಯಿಲ್ಲ, ಜನರ ತಲೆಯೊಳಗಿನ ಚಿಪ್ಪಿನಲ್ಲಿ ಸಮಸ್ಯೆಯಿದೆ: ಫಲಿತಾಂಶದ ಬಗ್ಗೆ ಓವೈಸಿ ಪ್ರತಿಕ್ರಿಯೆ

Ashwath Narayan 3

ಈ ಒಡಂಬಡಿಕೆಯು ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯಲು ಬೇಕಾದ ಕೌಶಲ್ಯಗಳನ್ನು ಹೆಚ್ಚಿಸಲಿದೆ. ಜೊತೆಗೆ ಯುನೈಟೆಡ್ ಕಿಂಗ್ಡ್ಂ ಮತ್ತು ಭಾರತದ ನಡುವೆ ಶೈಕ್ಷಣಿಕ ಸಂಶೋಧನಾ ಉಪಕ್ರಮ ಮತ್ತು ಗೋಯಿಂಗ್ ಗ್ಲೋಬಲ್ ಕಾರ್ಯಕ್ರಮಗಳ ಮೂಲಕ ಈ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದರು.

ಬಹುಮುಖ್ಯವಾಗಿ ಐಟಿಐ, ಎಂಜಿನಿಯರಿಂಗ್ ಮತ್ತು ವ್ಯವಸ್ಥಾಪನಾ ವಿಜ್ಞಾನ (ಮ್ಯಾನೇಜ್ಮೆಂಟ್ ಕೋರ್ಸಸ್)ಗಳನ್ನು ಓದುತ್ತಿರುವವರಿಗೆ ಇದರಿಂದ ಅಪಾರ ಲಾಭವಾಗಲಿದೆ. ಅಲ್ಲದೇ ಕರ್ನಾಟಕದ ವಿದ್ಯಾರ್ಥಿಗಳು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳಿಗೆ ತೆರಳಿ ಉನ್ನತಾಧ್ಯಯನ ಮಾಡಲು ಅವಕಾಶವಾಗಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: BJPಯ ಬಡವರ ಪರ, ಸಕ್ರಿಯ ಆಡಳಿತಕ್ಕೆ ಜನರ ಬೆಂಬಲ ಅನ್ನೋದು ಫಲಿತಾಂಶದಿಂದ ಸಾಬೀತು: ಮೋದಿ

ಮಿಗಿಲಾಗಿ, ಎರಡೂ ಕಡೆಯ ಉತ್ಕೃಷ್ಟತಾ ಕೇಂದ್ರಗಳು ಸುಸ್ಥಿತ ಸಹಭಾಗಿತ್ವವನ್ನು ಹೊಂದುವ ಮೂಲಕ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಹೆಚ್ಚು ಉತ್ತೇಜನ ನೀಡಲಿವೆ. ಇದರಿಂದಾಗಿ ರಾಜ್ಯದ ವಿದ್ಯಾರ್ಥಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್, ಎಡ್-ಟೆಕ್, ಜೀವವಿಜ್ಞಾನಗಳು ಮತ್ತು ಸೈಬರ್ ಸೆಕ್ಯುರಿಟಿಯಂತಹ ಅತ್ಯಾಧುನಿಕ ಕೋರ್ಸ್‍ಗಳನ್ನು ಕಲಿಯಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಂಗ್ಲೆಂಡ್ ಸರ್ಕಾರದ ಅಂತರರಾಷ್ಟ್ರೀಯ ಶಿಕ್ಷಣ ಚಾಂಪಿಯನ್, ಶಿಕ್ಷಣ ತಜ್ಞ ಸರ್ ಸ್ಟೀವ್ ಸ್ಮಿತ್, ಈ ವರ್ಷದ ಮೇ ತಿಂಗಳಲ್ಲಿ ತಮ್ಮ ದೇಶದಲ್ಲಿ ನಡೆಯಲಿರುವ ವಿಶ್ವ ಶಿಕ್ಷಣ ಒಕ್ಕೂಟದ ಸಮಾವೇಶಕ್ಕೆ ಸಚಿವರನ್ನು ಆಹ್ವಾನಿಸಿದರು. ಇದರಂತೆ ರಾಜ್ಯದಿಂದ ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ತೆರಳಲಿರುವ ನಿಯೋಗದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಪ್ರತಿನಿಧಿಗಳು, ಹಲವು ವಿ.ವಿ.ಗಳ ಕುಲಪತಿಗಳು ಮತ್ತು ಇಲಾಖೆಯ ಕೆಲವು ಉನ್ನತಾಧಿಕಾರಿಗಳು ಇರಲಿದ್ದಾರೆ.

ಕಾರ್ಯಕ್ರಮದಲ್ಲಿ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಆಡ್ರಿಯನ್ ಚಾಡ್ವಿಕ್, ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಜೋಶಿ, ಆಡಳಿತಾಧಿಕಾರಿ ಡಾ.ತಾಂಡವಗೌಡ ಉಪಸ್ಥಿತರಿದ್ದರು.

TAGGED:Ashwath NarayanbengaluruBritish CouncilGovernment of Karnatakaಅಶ್ವತ್ಥನಾರಾಯಣಕರ್ನಾಟಕ ಸರ್ಕಾರಬೆಂಗಳೂರುಬ್ರಿಟಿಷ್ ಕೌನ್ಸಿಲ್
Share This Article
Facebook Whatsapp Whatsapp Telegram

Cinema news

Kichcha Sudeep Mark
ತ್ರಿಶೂಲ ಹಿಡಿದು ಬಂದ ನಟ ಕಿಚ್ಚ ಸುದೀಪ್
Cinema Latest Sandalwood Top Stories
45 Movie
ಕರುನಾಡಲ್ಲಿ `45’ ಸಿನಿಮಾ ಅಬ್ಬರ: ಅಡ್ವಾನ್ಸ್‌ ಬುಕ್ಕಿಂಗ್ ಭರ್ಜರಿ ಜೋರು
Cinema Latest Sandalwood Top Stories
Vijay Deverakondas next titled Rowdy Janardhana
ವಿಜಯ್‌ ದೇವರಕೊಂಡ ನಟನೆಯ ರೌಡಿ ಜನಾರ್ದನ ಟೈಟಲ್ ಗ್ಲಿಂಪ್ಸ್ ರಿಲೀಸ್
Cinema Latest South cinema
prakash raj
ಜ.29-ಫೆ.6ರವರೆಗೆ 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ – ರಾಯಭಾರಿಯಾಗಿ ಪ್ರಕಾಶ್ ರಾಜ್ ಆಯ್ಕೆ
Bengaluru City Cinema Districts Karnataka Latest Sandalwood Top Stories

You Might Also Like

DK Shivakumar Mahoharlal
Bengaluru City

ಬೆಂಗಳೂರಿನ ಯೋಜನೆಗಳಿಗೆ ಅನುಮೋದನೆ, ಬೆಂಬಲಕ್ಕೆ ಕೇಂದ್ರ ಸಚಿವರಿಗೆ ಡಿಸಿಎಂ ಡಿಕೆಶಿ ಮನವಿ

Public TV
By Public TV
9 minutes ago
Russian Man Kills Ex Wife
Crime

ಎಸ್ಕಾರ್ಟ್‌ ಆಗಿ ಕೆಲಸ ಮಾಡುತ್ತಿದ್ದಾಳೆಂದು ಶಂಕೆ; ರಷ್ಯಾದಿಂದ ದುಬೈಗೆ ಬಂದು ಮಾಜಿ ಪತ್ನಿ ಬರ್ಬರ ಹತ್ಯೆ

Public TV
By Public TV
25 minutes ago
Priyank Kharge
Latest

3,000 ವರ್ಷಗಳಿಂದಲೂ ಭಾರತ ಹಿಂದೂ ರಾಷ್ಟ್ರ, ಇದ್ರಲ್ಲಿ ಇತ್ತೀಚಿಗೆ ಬಂದ RSS ಹೇಳೋದೇನಿದೆ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

Public TV
By Public TV
27 minutes ago
Byrati Basavaraj a
Bengaluru City

ಶಾಸಕ ಬೈರತಿ ಬಸವರಾಜ್‌ಗೆ ಶಾಕ್‌ – ನಿರೀಕ್ಷಣಾ ಜಾಮೀನು ಅರ್ಜಿ ವಜಾ

Public TV
By Public TV
1 hour ago
b.k.hariprasad mohan bhagwat
Latest

ಮೋಹನ್ ಭಾಗವತ್ ಕಾನೂನು ಬಾಹಿರ ಸಂಘಟನೆ ಮುಖ್ಯಸ್ಥ: ಹಿಂದೂ ರಾಷ್ಟ್ರ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ತಿರುಗೇಟು

Public TV
By Public TV
1 hour ago
ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ ಮೈದಾನದಲ್ಲಿ ರಿಷಬ್‌ ಪಂತ್‌ ಮತ್ತು ವಿರಾಟ್‌ ಕೊಹ್ಲಿ
Bengaluru City

ಬೆಂಗಳೂರಿನಲ್ಲೇ ಕೊಹ್ಲಿ ಆಡಲಿದ್ದಾರೆ, ಆದ್ರೆ ಚಿನ್ನಸ್ವಾಮಿಯಲ್ಲಿ ಅಲ್ಲ!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?