ಕಲಬುರಗಿ: ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ವಿಜ್ಞಾನ ವಿಷಯ ಎಂದರೆ ಮಕ್ಕಳಿಗೆ ತುಂಬಾ ಕಠಿಣ ವಿಷಯ ಎಂಬ ಮಾತು ಚಾಲ್ತಿಯಲ್ಲಿದೆ. ಇದನ್ನು ಅರಿತ ಕಲಬುರಗಿ ಶಿಕ್ಷಣ ಇಲಾಖೆ ಕೇವಲ ಪಠ್ಯದಿಂದ ಮಕ್ಕಳನ್ನು ಈ ವಿಷಯದಲ್ಲಿ ಆಸಕ್ತಿ ಮೂಡಿಸಿದರೆ ಸಾಲದು ಎಂದು ಅರಿತು ಹೊಸ ಪ್ರಯೋಹಗಕ್ಕೆ ಮುಂದಾಗಿದೆ.
ವಿಜ್ಞಾನ ವಿಷಯದ ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸಲು ಕಲಬುರಗಿಯ ನಗರದ ಬಸವೇಶ್ವರ ಕಾಲೋನಿಯ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬವನ್ನು ಶಿಕ್ಷಣ ಇಲಾಖೆ ಆಯೋಜನೆ ಮಾಡಿತ್ತು. ಈ ಮೂಲಕ ಪಠ್ಯದಲ್ಲಿನ ವಿಷಯವನ್ನು ಪ್ರಾಯೋಗಿಕವಾಗಿ ತೋರಿಸಿ ಮಕ್ಕಳಲ್ಲಿ ಆಸಕ್ತಿ ಮೂಡುವಂತೆ ಮಾಡಿದೆ.
Advertisement
Advertisement
ವಿಜ್ಞಾನ ಹಬ್ಬದ ಮೊದಲ ಅಂಗವಾಗಿ ಆಯೋಜಿಸಿದ ಜ್ಞಾನ ವಿಜ್ಞಾನ ಕಾರ್ಯಕ್ರಮದಲಿ ಇತ್ತೀಚೆಗೆ ಚಂದ್ರನ ಮೇಲೆ ಇಸ್ರೋ ಸಂಸ್ಥೆ ಉಡಾವಣೆ ಮಾಡಿದ ರಾಕೆಟ್ ಸೇರಿದಂತೆ ಗ್ರಹಣ, ಸೌರ ಮಂಡಲ ಹೇಗಿರುತ್ತೆ ಎಂಬಾತ ಹಲವು ವಿಷಯಗಳ ಚಿತ್ರಗಳನ್ನು ಬಿಡಿಸುವ ಮತ್ತು ಕ್ರಾಫ್ಟ್ ವರ್ಕ್ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಲಾಗಿದೆ.
Advertisement
ಒಟ್ಟು ಮೂರು ಜಿಲ್ಲಾ ಮಟ್ಟದ ಈ ಹಬ್ಬ ಮಕ್ಕಳಿಗೆ ಮನೋಲ್ಲಾಸ ನೀಡಿತ್ತು. ಮಾತ್ರವಲ್ಲ ಪಾಠ ಓದಿರೋದಕ್ಕಿಂತ ಹೆಚ್ಚಿನ ಜ್ಞಾನ ವೃದ್ಧಿಯಾದಂತಿತ್ತು. ಕಾರ್ಯಕ್ರಮದ ಬಗ್ಗೆ ಮಕ್ಕಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.