– ಗಂಡನ ಡಿವೋರ್ಸ್ ಪ್ರಶ್ನಿಸಿದ್ದ ಹೆಂಡತಿಗೆ ಹಿನ್ನಡೆ
ಭೋಪಾಲ್: ಪತಿಗೆ ದೈಹಿಕ ಸಂಬಂಧವನ್ನು ನಿರಾಕರಿಸುವುದು ಹಿಂದೂ ವಿವಾಹ ಕಾಯ್ದೆಯಡಿ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court) ಹೇಳಿದೆ. ಈ ಆಧಾರದ ಮೇಲೆ ಪತಿಗೆ ವಿಚ್ಛೇದನೆ ನೀಡುವ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.
2013ರ ಮೇ 26 ರಂದು ವಿವಾಹವಾಗಿದ್ದ ದಂಪತಿಗೆ ಹೈಕೋರ್ಟ್ ವಿಚ್ಛೇದನೆ (Divorce) ನೀಡಿ ತೀರ್ಪು ಪ್ರಕಟಿಸಿದೆ. ಗಂಡನಿಗೆ ದೈಹಿಕ ಸಂಬಂಧ ನಿರಾಕರಿಸುವುದು ಕ್ರೌರ್ಯಕ್ಕೆ ಸಮ ಎಂದು ಇದೇ ಕೋರ್ಟ್ ಹೇಳಿದೆ. ಇದನ್ನೂ ಓದಿ: CSIR-UGC-NET ಪರೀಕ್ಷೆ ಮಂದೂಡಿಕೆ
ಮದುವೆಯಾದ ಕೇವಲ 3 ದಿನಗಳಲ್ಲಿ ಮಹಿಳೆಯ ಸಹೋದರ ಆಕೆಯನ್ನು ಪರೀಕ್ಷೆಗೆ ಬರೆಯಲು ಪೋಷಕರ ಮನೆಗೆ ಕರೆದೊಯ್ದಿದ್ದರು. ಕೆಲವು ದಿನಗಳ ನಂತರ ಆಕೆಯನ್ನು ಕರೆತರಲು ಅತ್ತೆಯಂದಿರು ಹೋದಾಗ, ಆಕೆ ಅವರೊಂದಿಗೆ ಬರಲು ನಿರಾಕರಿಸಿದ್ದಳು.
ನಂತರ ಮಹಿಳೆ ಸಿಧಿಯಲ್ಲಿ ತನ್ನ ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಳು. ಬಳಿಕ ದಂಪತಿ ಪರಸ್ಪರ ಒಪ್ಪಂದದ ಮೂಲಕ ವಿಚ್ಛೇದನಕ್ಕೆ ಮುಂದಾದರು. ಆದಾಗ್ಯೂ, ಪತ್ನಿ ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದಳು. ಆಕೆ ಪತಿ ಹಿಂದೂ ವಿವಾಹ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸತ್ನಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ. ಎರಡೂ ಕಡೆಯವರ ಮಾತನ್ನು ಆಲಿಸಿದ ನಂತರ, ಕೌಟುಂಬಿಕ ನ್ಯಾಯಾಲಯವು 2021ರ ಆಗಸ್ಟ್ 17 ರಂದು ವಿಚ್ಛೇದನ ನೀಡಿ ಆದೇಶ ಹೊರಡಿಸಿತ್ತು. ಇದನ್ನೂ ಓದಿ: ಪಿಕ್ನಿಕ್‍ಗೆ ತೆರಳಿದ್ದಾಗ ಅವಘಡ – ಮುಳುಗುತ್ತಿದ್ದವನ ರಕ್ಷಿಸಲು ಹೋಗಿ ನಾಲ್ವರು ದುರ್ಮರಣ
ಆದರೆ, ಈ ವಿಚ್ಛೇದನದ ಆದೇಶವನ್ನು ಮಹಿಳೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಳು. ವಿಚಾರಣೆಯ ವೇಳೆ ಪತಿ, ‘ನನ್ನ ಹೆಂಡತಿ ತನ್ನೊಂದಿಗೆ ಕೇವಲ ಮೂರು ದಿನಗಳ ಕಾಲ ಇದ್ದಳು. ಈ ಅವಧಿಯಲ್ಲಿ ಆಕೆ ದೈಹಿಕ ಸಂಬಂಧ ಹೊಂದಿರಲಿಲ್ಲ’ ಎಂದು ಹೇಳಿದ್ದ.