ಬೆಂಗಳೂರು: ಪೊಲೀಸ್ ಪೇದೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಡೆಂಟಲ್ ವೈದ್ಯೆಯೊಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ.
ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ವೈದ್ಯೆ ಗಿರಿನಗರ ಠಾಣೆಯ ಪೇದೆ ಸುದರ್ಶನ್ ಆಸ್ಕಿನ್ ಮೇಲೆ ದೂರು ದಾಖಲಿಸಿದ್ದಾರೆ. ಪೇದೆ ಸುದರ್ಶನ್ ಆಸ್ಕಿನ್ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ನೀಡುತ್ತಿರುವುದಾಗಿ ವೈದ್ಯೆ ದೂರಿನಲ್ಲಿ ತಿಳಿಸಿದ್ದಾರೆ.
Advertisement
Advertisement
ದೂರಿನಲ್ಲಿ ಏನಿದೆ?
2013ರಲ್ಲಿ ಸುದರ್ಶನ್ ಹಲ್ಲಿನ ಚಿಕಿತ್ಸೆಗೆಂದು ಬಂದಿದ್ದನು. ಈ ವೇಳೆ ನನ್ನ ಫೋನ್ ನಂಬರ್ ಇಟ್ಟುಕೊಂಡು ಚಿಕಿತ್ಸೆ ನೆಪ ಹೇಳಿಕೊಂಡು ಮಾತನಾಡುತ್ತಿದ್ದನು. ಮೊದಲಿಗೆ ಮಾಮೂಲಿಯಾಗಿದ್ದ ಸುದರ್ಶನ್ ನಂತರ ಫೋನಿನಲ್ಲಿ ಅಸಭ್ಯವಾಗಿ ವರ್ತನೆ ಮಾಡಲು ಶುರುಮಾಡಿದನು. ಮತ್ತೆ ಮತ್ತೆ ಫೋನ್ ಮಾಡಿ ಹಿಂಸೆ ಕೊಡುತ್ತಿದ್ದನು. ನಾನು ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಬಳಿಕ ಅವನು ನೇರವಾಗಿ ಕ್ಲಿನಿಕ್ ಗೆ ಬಂದು ನಾನು ಏನು ತೊಂದರೆ ಕೊಡುವುದಿಲ್ಲ ನನ್ನ ಬಳಿ ಮಾತನಾಡು ಎಂದು ಹೇಳುತ್ತಿದ್ದನು.
Advertisement
Advertisement
ಅವರ ಕಾಟ ಸಹಿಸಲಾಗದೇ ನಂತರ ನಾನು ಮನೆ ಬದಲಾಯಿಸಿದ್ದೆ. ಆದರೆ ಆತ ಮನೆ ಬದಲಾಯಿಸಿದರೂ ಫೋನ್ ಮಾಡುವುದನ್ನು ಬಿಡಲಿಲ್ಲ. ಹಿಂಬಾಲಿಸಿ ಕೊಂಡು ಮಾತನಾಡುತ್ತಿದ್ದನು. ಸಲುಗೆಯಿಂದ ವರ್ತಿಸಲಿಲ್ಲ ಎಂದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದನು. ಬಳಿಕ ನಾನು ಜ್ಞಾನ ಭಾರತಿ ಠಾಣೆಯಲ್ಲಿ ದೂರು ನೀಡಿದ್ದೆ. ಅಲ್ಲಿ ಅಧಿಕಾರಿಗಳು ಸುದರ್ಶನ್ ಕರೆಸಿ ಮಾತನಾಡಿ ಅವರಿನಿಂದ ಮುಚ್ಚಳಿಕೆ ಬರೆಯಿಸಿಕೊಂಡು ರಾಜಿ ಸಂಧಾನ ಮಾಡಲಾಗಿತ್ತು. ಪೊಲೀಸರು ರಾಜಿ ಸಂಧಾನ ಮಾಡಿಸಿದರೂ ಸುದರ್ಶನ್ ಪುನಃ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ವೈದ್ಯೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯಕ್ಕೆ ಸುದರ್ಶನ್ ನಡೆಯಿಂದ ಬೆಸರಗೊಂಡ ವೈದ್ಯೆ ಮತ್ತೆ ದೂರು ದಾಖಲು ಮಾಡಿದ್ದಾರೆ. ಈಗ ಜ್ಞಾನ ಭಾರತಿ ಠಾಣೆಯಲ್ಲಿ ಸೆಕ್ಷನ್ 354, 506 ಆಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv