ನವದೆಹಲಿ: `ಯಮುನಾ ಎಕ್ಸ್ ಪ್ರೆಸ್ ವೇ’ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟ ಮಂಜು ಆವರಿಸಿದ್ದರ ಪರಿಣಾಮ 13 ವಾಹನಗಳು ಒಂದರ ಹಿಂದೆ ಒಂದು ಡಿಕ್ಕಿ ಹೊಡೆದಿದೆ. ಗ್ರೇಟರ್ ನೊಯ್ಡಾ ಬಳಿಯ ದಂಕೂರ್ ಪ್ರದೇಶದಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ.
ವಾಹನಗಳ ಒಂದಕ್ಕೊಂದು ಡಿಕ್ಕಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಚಾಲಕರಿಗೆ ದಟ್ಟ ಮಂಜು ಆವರಿಸಿದ್ದರಿಂದ ರಸ್ತೆ ಕಾಣದೇ ಮುಂದೆ ನಿಂತಿರುವ ವಾಹನಗಳಿಗೆ ಡಿಕ್ಕಿ ಆಗಿವೆ. ಈ ವೇಳೆ ಸ್ಥಳೀಯರು ವಾಹನಗಳಲ್ಲಿ ಜನರನ್ನು ರಕ್ಷಣೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Advertisement
Advertisement
ಕೇಂದ್ರಾಡಳಿತ ದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಕಿನ ಪ್ರಖರತೆ ಶೂನ್ಯಕ್ಕೆ ಬಂದಿದ್ದು, ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಟೊಯೋಟಾ ಇನ್ನೋವಾ, ಮಹಿಂದ್ರಾ ಸ್ಕಾರ್ಪೀಯೋ, ಹುಂಡೈ ಕ್ಷೆಂಟ್, ಮಾರುತಿ ಎರ್ಟಿಗಾ ಸೇರಿದಂತೆ 13 ವಾಹನಗಳು ಅಪಘಾತಕ್ಕೀಡಾಗಿವೆ. ಅಪಘಾತಕ್ಕೊಳಗಾದ 13 ವಾಹನಗಳಲ್ಲಿ 5 ಆಗ್ರಾ ಮೂಲದಾಗಿದ್ದು, ಉಳಿದ 8 ವಾಹನಗಳು ದೆಹಲಿಯ ಮೂಲದವು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಘಟನಾ ಸ್ಥಳದಿಂದ 6 ವಾಹನಗಳನ್ನೂ ತಕ್ಷಣವೇ ರಾಷ್ಟ್ರೀಯ ಹೆದ್ದಾರಿಯಿಂದ ತೆರವು ಮಾಡಲಾಗಿದ್ದು, ಉಳಿದ ವಾಹನಗಳು ಜಖಂ ಆಗಿದ್ದು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಎಲ್ಲರೂ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ದಂಕೂರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅಲಿ ಪುಂದಿರ್ ಹೇಳಿದ್ದಾರೆ.
Advertisement
What is happening in Delhi is sooo scary !! Someone sent me this … This is the Yamuna expressway apparently #Smog pic.twitter.com/J7lqzkCMae
— Huma Qureshi (@humasqureshi) November 8, 2017
Accident on yamuna expressway pic.twitter.com/EmDIiCoZyC
— ????????जाट ???????? (@VipulBaliyan12) November 8, 2017
Low visibility triggers pile up on Yamuna Expressway. Who is accountable for this? #DelhiChoked pic.twitter.com/9GzEhY4jVZ
— TIMES NOW (@TimesNow) November 8, 2017