ಡೆನಿಮ್ ಬಟ್ಟೆಗಳು (Denim Fashion) ಫ್ಯಾಷನ್ ಜಗತ್ತಿಗೆ ಕಾಲಿರಿಸಿದ ಕ್ಷಣದಿಂದಲೂ ದಿನಕ್ಕೊಂದು ಹೊಸ ಬಗೆಯ ಟ್ರೆಂಡ್ ಫ್ಯಾಷನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಕ್ಲಾಸಿಕ್ ಕಟ್‌ನಿಂದ ಬೋಲ್ಡ್ ಡಿಸೈನ್‌ವರೆಗೆ ಈಗಿನ ಡೆನಿಮ್ ಜೀನ್ಸ್ ಟ್ರೆಂಡ್ ಹೀಗಿದೆ. ಜೀನ್ಸ್ ಪ್ರತಿಯೊಬ್ಬರ ವಾರ್ಡ್‌ರೋಬ್‌ನಲ್ಲೂ ಸ್ಥಾನ ಪಡೆದಿರುವ ಪ್ರಮುಖ ಉಡುಪು. ಸ್ಟೈಲಿಶ್ ಜೀನ್ಸ್ ಟ್ರೆಂಡ್‌ಗೆ ಮಹಿಳೆಯರು ಫಿದಾ ಆಗಿದ್ದಾರೆ.
Advertisement
ಜೀನ್ಸ್ ಪ್ಯಾಂಟ್ (Denim Pant) ಅನ್ನು ಬಹುತೇಕ ಎಲ್ಲರೂ ಮೆಚ್ಚಿ ತೊಡುತ್ತಾರೆ, ಆರಾಮದಾಯಕ ಕೂಡ. ಆದರೆ ಜೀನ್ಸ್ ತೊಡುವ ರೀತಿ ಹಾಗೂ ಜೀನ್ಸ್ ಯಾವ ಕಾಲಕ್ಕೆ ಹೇಗಿರಬೇಕು ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಬೇರೆ ಬೇರೆ ಬಣ್ಣ, ಕಂಪರ್ಟ್, ಆರಾಮದಾಯಕ ಫಿಟ್, ಸ್ಲಿಮ್ ಜೀನ್ಸ್ ಹೀಗೆ ಹಲವು ವಿಧದ ಆಯ್ಕೆಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ನಿಮ್ಮ ದೇಹಕ್ಕೆ ಸೂಕ್ತ ಎನ್ನಿಸುವ ಹಾಗೂ ಆರಾಮ ಎನ್ನಿಸುವ ಜೀನ್ಸ್ ಧರಿಸುವುದು ಬಹಳ ಮುಖ್ಯ. ಈಗ ವೆಡ್‌ಲೆಗ್, ಹೈ ವೇಸ್ಟೆಡ್ ಜೀನ್ಸ್ ಹೆಚ್ಚು ಟ್ರೆಂಡ್‌ನಲ್ಲಿವೆ. ಸಾಮಾನ್ಯರಿಂದ ಹಿಡಿದು ಬಾಲಿವುಡ್ (Bollywood) ನಟಿಯರು ಕೂಡ ಡೆನಿಮ್ ಜೀನ್ಸ್‌ಗೆ ಫಿದಾ ಆಗಿದ್ದಾರೆ.
Advertisement
Advertisement
ಜೀನ್ಸ್ ನೋಡುವವರಿಗಿಂತ ಧರಿಸುವವರಿಗೆ ಕಂಪರ್ಟ್ ಆಗಿರುವುದು ಬಹಳ ಮುಖ್ಯ. ಹಿಂದಿನಿಂದಲೂ ಸ್ಟ್ರೇಟ್ ಜೀನ್ಸ್ ಹೆಚ್ಚು ಚಾಲ್ತಿಯಲ್ಲಿದೆ, ಇಂದಿಗೂ ಆ ಟ್ರೆಂಡ್ ಮುಂದುವರಿದಿದೆ. ಈ ಜೀನ್ಸ್ ಸೊಂಟ ಹಾಗೂ ತೊಡೆಯ ಭಾಗದಿಂದ ಮೊಣಕಾಲಿನವರೆಗೆ ಅಂಟಿಕೊಂಡಂತಿರುತ್ತದೆ. ಇದು ತೊಡೆಯಿಂದ ನೆಲಕ್ಕೆ ಸಮಾನಾಂತರವಾಗಿ ಕಾಣುತ್ತದೆ. ಇದು ಪರ್ಫೆಕ್ಟ್ ಫಿಟಿಂಗ್ ಹುಡುಕುತ್ತಿರುವವರಿಗೆ ಬೆಸ್ಟ್ ಆಯ್ಕೆ. ಇದನ್ನೂ ಓದಿ:ಯಶ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ ತಮಿಳು ನಟ ಜೈ ಆಕಾಶ್
Advertisement
ಡೆನಿಮ್ ಜೀನ್ಸ್ ಟ್ರೆಂಡ್‌ನ ಎಲ್ಲಾ ವರ್ಗದ ಮಹಿಳೆಯರು ಇಷ್ಟಪಡುತ್ತಾರೆ. ಸಾಮಾನ್ಯರಿಂದ ಹಿಡಿದು ಬಾಲಿವುಡ್ ತಾರೆಯರವರೆಗೂ ಡೆನಿಮ್ ಜೀನ್ಸ್ ಉಡುಗೆಯನ್ನ ಬಳಸುತ್ತಾರೆ.