ಲಕ್ನೋ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆಗಳನ್ನು ಮಾಡಿಕೊಂಡು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಿವೆ. ಈ ನಡುವೆ ಬಹುಜನ ಸಮಾಜ್ ಪಾರ್ಟಿ (BSP) ಪಕ್ಷದ ಟಿಕೆಟ್ ಆಕಾಂಕ್ಷಿಯೊಬ್ಬರು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಫ್ಲೆಕ್ಸ್, ಹೋರ್ಡಿಂಗ್ ಎಲ್ಲಾ ಹಾಕಿದ್ದೇನೆ ಆದರೂ ಸೀಟು ಕೊಟ್ಟಿಲ್ಲ ದಯವಿಟ್ಟು ಸೀಟು ಕೊಡಿ ಎಂದು ಬಿಕ್ಕಿಬಿಕ್ಕಿ ಅತ್ತ ವೀಡಿಯೋ ಒಂದು ವೈರಲ್ ಆಗ ತೊಡಗಿದೆ.
Advertisement
ಫೆಬ್ರವರಿ 10 ರಿಂದ ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಪಕ್ಷಗಳು ಚುನಾವಣೆಯ ಪೂರ್ವ ತಯಾರಿಯಲ್ಲಿ ಬ್ಯುಸಿ ಆಗಿವೆ. ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವಿಗೆ ಪ್ಲಾನ್ ಮಾಡಿಕೊಳ್ಳುತ್ತಿವೆ. ಉತ್ತರ ಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಮಾಜಿ ಸಿಎಂ ಮಯಾವತಿಯ ಬಿಎಸ್‍ಪಿ ಪಕ್ಷ ಕೂಡ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿ ಕೊಡಲು ಸಿದ್ಧತೆ ಮಾಡಿಕೊಂಡಿತ್ತು. ಈ ನಡುವೆ ಪಕ್ಷದಲ್ಲಿ ದುಡಿದಿದ್ದ ಅಭ್ಯರ್ಥಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ಷದ್ ರಾಣಾ ತಮಗೆ ಟಿಕೆಟ್ ಕೊಡದಿದ್ದುದಕ್ಕೆ ಬಿಕ್ಕಿಬಿಕ್ಕಿ ಅತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ
Advertisement
Advertisement
ಈ ವೀಡಿಯೋದಲ್ಲಿ ರಾಣಾ, ನಾನು ಹೋರ್ಡಿಂಗ್, ಫ್ಲೆಕ್ಸ್ ಎಲ್ಲವನ್ನೂ ಹಾಕಿದ್ದೇನೆ, ಪ್ಲೀಸ್ ಟಿಕೆಟ್ ಕೊಡಿ. ನನಗೆ ಅವಮಾನವಾದಂತಾಗಿದೆ. ನಾನು ಈರೀತಿ ಆಗಬಹುದು ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಬಿಎಸ್‍ಪಿ ಕಚೇರಿಯ ಒಳಗೆ ಕೂರಿಸಿದ ನಮ್ಮ ಪಕ್ಷದವರು ನನ್ನನ್ನು ಬಿಟ್ಟು ಬೇರೊಬ್ಬರಿಗೆ ಚುನಾವಣೆಯ ಟಿಕೆಟ್ ನೀಡಿದ್ದಾರೆ. ನೀವು ಪ್ರತಿದಿನವೂ ಮಾಧ್ಯಮಗಳಲ್ಲಿ ನೋಡುತ್ತಿರಬಹುದು ನಾನು ಎಲ್ಲಾ ಕಡೆ ಹೋರ್ಡಿಂಗ್, ಫ್ಲೆಕ್ಸ್, ಹಾಕಿದ್ದೇನೆ. ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ ಆದರೂ ನನಗೆ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿಕೊಂಡು ಅತ್ತಿದ್ದಾರೆ.
Advertisement
#WATCH | Uttar Pradesh: BSP worker Arshad Rana bitterly cries claiming that he was promised a ticket in UP election only to be denied ticket at the last moment despite putting up hoardings for the upcoming polls pic.twitter.com/DMe8mDHk2J
— ANI UP/Uttarakhand (@ANINewsUP) January 14, 2022
ನನ್ನ ಬಳಿ ಟಿಕೆಟ್‌ಗಾಗಿ ಪಕ್ಷ 50 ಲಕ್ಷ ಕೇಳಿದೆ ನನ್ನ ಜೊತೆ ಅಷ್ಟು ಹಣ ಇಲ್ಲ ಎಂದು ನಾನು ತಿಳಿಸಿದ್ದೆ. ಬಳಿಕ ನನ್ನ ತಾಯಿಯ ಬಳಿ ಈ ಬಗ್ಗೆ ಮಾತನಾಡಿ ನನ್ನ ಶ್ರಮವನ್ನು ನೋಡಿ ಅವರು ಹಣವನ್ನು ಕೊಟ್ಟು ಚುನಾವಣೆಗೆ ಸ್ಪರ್ಧಿಸಲು ಸಿದ್ಧನಾಗಿದ್ದೆ ಹಾಗಾಗಿ ಸ್ವಲ್ಪ ಹಣವನ್ನು ಪಕ್ಷಕ್ಕೆ ನೀಡಿದ್ದೇನೆ. ಆದರೂ ಟಿಕೆಟ್ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಕಣ್ಣೀರಿಟ್ಟು ವೀಡಿಯೋ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೂವಿನ ಮಾರುಕಟ್ಟೆಯಲ್ಲಿ ಇಟ್ಟಿದ್ದ ಬ್ಯಾಗ್‌ನಲ್ಲಿ ಬಾಂಬ್ ಪತ್ತೆ – ಜನರಲ್ಲಿ ಆತಂಕ