Districts

ಡೆಂಗ್ಯೂ ನಿಯಂತ್ರಣಕ್ಕೆ ಗಪ್ಪೆ ಮೀನುಗಳ ಮೊರೆ ಹೋದ ಜಿಲ್ಲಾಡಳಿತ

Published

on

Share this

ರಾಯಚೂರು: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಚಿಕ್ಕಮಕ್ಕಳನ್ನು ಹೆಚ್ಚು ಬಾಧಿಸುತ್ತಿರುವುದರಿಂದ ಜಿಲ್ಲಾಡಳಿತ ಸೊಳ್ಳೆಗಳ ನಿಯಂತ್ರಣಕ್ಕಾಗಿ ಗಪ್ಪೆ ಮೀನುಗಳ ಬಳಕೆಗೆ ಮುಂದಾಗಿದೆ.

ಗಪ್ಪೆ ಮತ್ತು ಶ್ಯಾಂಬೊ ಮೀನುಗಳನ್ನು ನೀರಿನ ಮೂಲ ತಾಣಗಳಲ್ಲಿ ಬಿಡುವುದರಿಂದ ಲಾರ್ವಾ ಉತ್ಪತ್ತಿ ಕಡಿಮೆ ಆಗುತ್ತದೆ. ಇದರಿಂದ ಹೆಚ್ಚು ಸೊಳ್ಳೆಗಳ ಉತ್ಪತ್ತಿ ಆಗುವುದಿಲ್ಲ. ನಿಂತ ನೀರಲ್ಲಿ ಸೊಳ್ಳೆಗಳಿಡುವ ಮೊಟ್ಟೆಗಳನ್ನು ಈ ಮೀನುಗಳು ತಿನ್ನುವುದರಿಂದ ಸೊಳ್ಳೆಗಳ ಉತ್ಪತ್ತಿ ನಿಯಂತ್ರಣವಾಗಲಿದ್ದು, ಈ ಮೂಲಕ ಡೆಂಗ್ಯೂ ಹರಡದಂತೆ ತಡೆಯಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ. ಇದನ್ನೂ ಓದಿ: 2021ರಿಂದಲೇ ಕರ್ನಾಟಕ ಯುವ ನೀತಿ ಪರಿಷ್ಕರಣೆ ಜಾರಿ- ಸಚಿವ ಡಾ.ನಾರಾಯಣಗೌಡ

ಪ್ರಥಮ ಹಂತವಾಗಿ ನಗರದ ವಾಸವಿ ನಗರ ಮತ್ತು ವಿದ್ಯಾನಗರ ಬಡಾವಣೆಯಲ್ಲಿ ನಿಂತ ನೀರಿನಲ್ಲಿ ಹಾಗೂ ತೆರೆದ ಬಾವಿಯಲ್ಲಿ ಈ ಗಪ್ಪೆ ಮತ್ತು ಶ್ಯಾಂಬೊ ಮೀನುಗಳನ್ನು ಬಿಡಲಾಗಿದೆ. ನಾರಾಯಣಪುರ ಜಲಾಶಯದಿಂದ ಈ ಮೀನುಗಳನ್ನು ಸಂಗ್ರಹಿಸಿ ರಾಯಚೂರಿಗೆ ತರಲಾಗಿದೆ. ಇದನ್ನೂ ಓದಿ: ಚಾಮುಂಡೇಶ್ವರಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ರೂ ಜನ ಸೋಲಿಸಿಬಿಟ್ರು: ಸಿದ್ದರಾಮಯ್ಯ

ಆಶಾ ಕಾರ್ಯಕರ್ತೆಯರು ಲಾರ್ವಾ ಇರುವ ನೀರಿನ ಸ್ಥಳಗಳನ್ನು ಈಗಾಗಲೇ ಗುರುತಿಸಿದ್ದು, ಅಂತಹ ಸ್ಥಳಗಳಲ್ಲಿ ಮೀನುಗಳನ್ನು ಬಿಡಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ. ಎರಡನೇ ಹಂತದಲ್ಲಿ ಗ್ರಾಮೀಣ ಪ್ರದೇಶದ ಕೆರೆ ಮತ್ತು ಬಾವಿಗಳಲ್ಲೂ ಈ ಮೀನುಗಳನ್ನ ಬಿಡಲು ನಿರ್ಧರಿಸಲಾಗಿದೆ.

ಈಗಾಗಲೇ ಜಿಲ್ಲೆಯಾದ್ಯಂತ 900ಕ್ಕೂ ಹೆಚ್ಚು ಮಕ್ಕಳಲ್ಲಿ ಶಂಕಿತ ಡೆಂಗ್ಯೂ ಜ್ವರ ಪತ್ತೆಯಾಗಿದೆ. 60 ಮಕ್ಕಳಿಗೆ ಡೆಂಗ್ಯೂ ಖಚಿತವಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿ 170 ಬೆಡ್‍ಗಳ ವ್ಯವಸ್ಥೆ ಸಹ ಮಾಡಲಾಗಿದೆ. ಜಿಲ್ಲೆಯಲ್ಲಿ 3 ಮಕ್ಕಳು ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಅಧಿಕಾರಿಗಳ ನಿದ್ದೆಗೆಡಿಸಿರುವ ಡೆಂಗ್ಯೂ ನಿಯಂತ್ರಣಕ್ಕೆ ಜಿಲ್ಲಾಡಳಿತ ಗಪ್ಪೆ ಮೀನುಗಳ ಮೊರೆ ಹೋಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement