ರಾಯಚೂರು: ಜಿಲ್ಲೆಯಲ್ಲಿ ದಿನೇ, ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದೀಗ 5 ವರ್ಷದ ಮಗು ಡೆಂಗ್ಯೂವಿನಿಂದ ಮೃತಪಟ್ಟಿದ್ದು, ಇದು ಮೂರನೇ ಸಾವಿನ ಪ್ರಕರಣವಾಗಿದೆ. ಇದನ್ನೂ ಓದಿ: ನಮ್ಮಪ್ಪ ಕಾಮುಕ, ಸ್ಯಾಡಿಸ್ಟ್, ಕುಡುಕ – ಡೆತ್‍ನೋಟ್‍ನಲ್ಲಿ ಮಧುಸಾಗರ್ ಗಂಭೀರ ಆರೋಪ
Advertisement
ಮಾನ್ವಿ ಪಟ್ಟಣದ ಉಮ್ಮೇ ಕುಲ್ಸುಮ್(5) ಮೃತ ಬಾಲಕಿ. ಚಿಕಿತ್ಸೆ ಫಲಕಾರಿಯಾಗದೇ ಮಗು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಮಾನ್ವಿ ಪಟ್ಟಣದ ನಿವಾಸಿ ಸೈಯದ್‍ರವರ ಮಗಳು ಉಮ್ಮೇ ಕುಲ್ಸುಮ್‍ಗೆ ಮಾನ್ವಿ, ರಾಯಚೂರು ಹಾಗೂ ಹೈದರಾಬಾದ್‍ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಉಮ್ಮೇ ಕುಲ್ಸುಮ್ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದೆ.
Advertisement
Advertisement
ಜಿಲ್ಲೆಯಲ್ಲಿ ಈವರೆಗೆ ಮೂರು ಮಕ್ಕಳು ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾರೆ. ಮಾನ್ವಿ ಪಟ್ಟಣದಲ್ಲಿ ಡೆಂಗ್ಯೂ ಜ್ವರದಿಂದ ಹೆಚ್ಚು ಮಕ್ಕಳು ಬಾಧಿತರಾಗಿದ್ದಾರೆ. ಪಟ್ಟಣದ ತಾಲೂಕಾಸ್ಪತ್ರೆ ಹಾಗೂ ರಾಯಚೂರು ನಗರದ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಎದುರಾಗಿದೆ. ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಪೋಷಕರು ಪರದಾಡುವಂತಾಗಿದೆ. ಇದನ್ನೂ ಓದಿ: 40 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್‍ನ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿ