ಬೆಂಗಳೂರು: ರಾಜ್ಯದಾದ್ಯಂತ ಡೆಂಗ್ಯೂ (Dengue Case) ಆರ್ಭಟ ಮುಂದುವರಿದಿದೆ. ಇಲ್ಲಿವರೆಗೆ ಡೆಂಗ್ಯೂಗೆ 10 ಮಂದಿ ಬಲಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 19 ಸಾವಿರಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 2,406 ಪ್ರಕರಣಗಳು ಸಕ್ರಿಯವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಳೆದ 24 ಗಂಟೆಯಲ್ಲಿ 337 ಪ್ರಕರಣಗಳು ದಾಖಲಾಗಿದೆ. ಅದರಲ್ಲಿ ಒಂದು ವರ್ಷದೊಳಗಿನ 10 ಮಕ್ಕಳಲ್ಲಿ ಡೆಂಗ್ಯೂ ಧೃಡಪಟ್ಟಿದೆ. ಇದನ್ನೂ ಓದಿ: ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನ ಡಿಕೆಶಿ ಲಪಟಾಯಿಸಿದ್ದಾರೆ – ಹೆಚ್‌ಡಿಕೆ ಬಾಂಬ್
ಇಲ್ಲಿಯವರೆಗೆ 1 ವರ್ಷದೊಳಗಿನ 360 ಮಕ್ಕಳಲ್ಲಿ, 1 ರಿಂದ 18 ವರ್ಷದ 6,863 ಮಕ್ಕಳಲ್ಲಿ ಮತ್ತು 18 ವರ್ಷ ಮೇಲ್ಪಟ್ಟ 12,090 ಜನರಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಇದನ್ನೂ ಓದಿ: 2ನೇ ದಿನಕ್ಕೆ ಕಾಲಿಟ್ಟ ದೋಸ್ತಿ ನಾಯಕರ ಪಾದಯಾತ್ರೆ; ಇದು ಹಗರಣಗಳ ಕೂಪ ಅಂತ ವಿಜಯೇಂದ್ರ ವಾಗ್ದಾಳಿ
ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ 123 ಡೆಂಗ್ಯೂ ಪ್ರಕರಣಗಳು ದಾಖಲಾಗಿದೆ. ಇಲ್ಲಿಯವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 8,800 ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಡೆಂಗ್ಯೂಗೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ – ಓರ್ವ ಸಾವು