ನವದೆಹಲಿ: ನೋಟು ನಿಷೇಧವಾದ ಬಳಿಕ ಬ್ಯಾಂಕ್‍ಗಳ ಮೂಲಕ ಒಟ್ಟು 7,147 ಲಕ್ಷ ರೂ. ಹಣವನ್ನು ಅಕ್ರಮವಾಗಿ ವಿನಿಮಯ ಮಾಡಿ ವ್ಯವಹಾರ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ರಾಜ್ಯ ಖಾತೆಯ ಸಚಿವ ಸಂತೋಷ್ ಕುಮಾರ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ಯಾವ ಬ್ಯಾಂಕಿನಿಂದ ಎಷ್ಟು ಅಕ್ರಮ?
ಅಕ್ರಮ ಎಸಗಿದ್ದಕ್ಕಾಗಿ 5 ಬ್ಯಾಂಕ್‍ಗಳ 20 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್ 3 ಶಾಖೆಯಲ್ಲಿ 4,629 ಲಕ್ಷ ರೂ. ಅಕ್ರಮ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿಯನ್ನು ಅಮಾನತು ಮಾಡಲಾಗಿದೆ.
Advertisement
ಧನಲಕ್ಷ್ಮಿ ಬ್ಯಾಂಕಿನ 6 ಶಾಖೆಗಳಲ್ಲಿ ನಲ್ಲಿ 2,267 ಲಕ್ಷ ರೂ. ಅಕ್ರಮ ನಡೆದಿದ್ದು 8 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
Advertisement
ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ 2 ಶಾಖೆಗಳಲ್ಲಿ 190 ಲಕ್ಷ ರೂ. ಅಕ್ರಮ ನಡೆದಿದ್ದು, 4 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
Advertisement
ಬ್ಯಾಂಕ್ ಅಫ್ ಮಹಾರಾಷ್ಟ್ರದ 2 ಶಾಖೆಯಲ್ಲಿ 6 ಮಂದಿ 54.90 ಲಕ್ಷ ರೂ. ಅಕ್ರಮ ಎಸಗಿದ್ದರೆ, ಸಿಂಡಿಕೇಟ್ ಬ್ಯಾಂಕಿನ 1 ಶಾಖೆಯಲ್ಲಿ 6 ಲಕ್ಷ ರೂ. ಅಕ್ರಮ ವಹಿವಾಟು ನಡೆದಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement