-ಮ.ಪ್ರ. ಚುನಾವಣೆ ಪ್ರಚಾರದಲ್ಲಿ ಕರ್ನಾಟಕದ ಮೈತ್ರಿ ಸರ್ಕಾರದ ವಿರುದ್ಧ ಕಿಡಿ
ಭೋಪಾಲ್: ದೇಶದಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಾಚಾರ ವ್ಯವಸ್ಥೆಯ ನಿರ್ಮೂಲನೆಗೆ ನೋಟು ಅಮಾನ್ಯೀಕರಣ ಒಂದು ಉತ್ತಮ ಔಷಧಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಜಾಬ್ವಾದಲ್ಲಿ ಚುನಾವಣಾ ಪ್ರಚಾರದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ಔಷಧಿಯನ್ನಾಗಿ ನೋಟು ಅಮಾನ್ಯೀಕರಣವನ್ನು ಬಳಸಿದ್ದೇವೆ. ಇದರಿಂದಾಗಿ ಕಾರ್ಖಾನೆ, ಕಚೇರಿ, ಮನೆ ಹಾಗೂ ಹಾಸಿಗೆ ಕೆಳಗೆ ಇಟ್ಟಿದ್ದ ಪ್ರತಿಯೊಂದು ಪೈಸೆಗೂ ತೆರಿಗೆ ಕಟ್ಟುವಂತಾಗಿದೆ. ಈ ಹಣವನ್ನು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ತರಲು ಉಪಯೋಗಿಸಿದ್ದೇವೆಂದು ಹೇಳಿದರು.
Advertisement
Remember the time when Congress was in power here in Madhya Pradesh, what was the condition of people? Madhya Pradesh does not deserve a government which never thinks about the state's welfare: PM Narendra Modi in Jhabua pic.twitter.com/H5e8pxikZH
— ANI (@ANI) November 20, 2018
Advertisement
ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಸಾಲಮನ್ನಾ ಮಾಡುವುದಾಗಿ ಹೇಳಿತ್ತು. ಆದರೆ ಈಗ ಹಾಗೆ ಮಾಡುವ ಬದಲು, ರೈತರನ್ನು ಜೈಲಿಗೆ ಕಳುಹಿಸಲು ಸಿದ್ಧವಾಗುತ್ತಿದೆ. ಈಗ ಕರ್ನಾಟಕದಲ್ಲಿ ಹೇಳಿದ್ದ ರೀತಿಯಲ್ಲಿಯೇ, ಇಲ್ಲಿಯೂ ಹೇಳುತ್ತಿದೆ. ಹೀಗಾಗಿ ಕಾಂಗ್ರೆಸ್ ಮಾತಿಗೆ ಮರಳಾಗಬೇಡಿ. 2022 ರೊಳಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಭರವಸೆ ನೀಡಿದರು.
Advertisement
ಯಾವುದೇ ಆಧಾರವಿಲ್ಲದೇ ಪ್ರಧಾನಿ ಮಂತ್ರಿ ಮುದ್ರಾ ಯೋಜನೆಯಡಿ 14 ಕೋಟಿ ಜನರಿಗೆ ಕೇಂದ್ರ ಸರ್ಕಾರ ಸಾಲ ನೀಡಿದೆ. ಯುಪಿಎ ಸರ್ಕಾರ 10 ವರ್ಷದಲ್ಲಿ ಮಾಡದ ಕೆಲಸವನ್ನು, ಕೇವಲ ನಾಲ್ಕೇ ವರ್ಷದಲ್ಲಿ ಎನ್‍ಡಿಎ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕಿಂತ ಕಾಂಗ್ರೆಸ್ ಹೇಗೆ ಅಧಿಕಾರವನ್ನು ನಡೆಸಿತ್ತು ಎಂಬುದು ನಿಮಗೆ ಗೊತ್ತಿದೆ. ಕಾಂಗ್ರೆಸ್ ತನ್ನ 55 ವರ್ಷಗಳಲ್ಲಿ ರಾಜ್ಯಾದ್ಯಂತ ಕೇವಲ 1,500 ಶಾಲೆಗಳನ್ನು ತೆರದಿತ್ತು. ಆದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ನೇತೃತ್ವದಲ್ಲಿ ಕಳೆದ 15 ವರ್ಷಗಳಲ್ಲಿ ಸುಮಾರು 4,000 ಶಾಲೆಗಳು ಪ್ರಾರಂಭವಾಗಿದೆ ಎಂದು ತಿಳಿಸಿದರು.
Advertisement
Corruption had ruined the nation when Congress was in power. To tackle it, we are constantly making efforts and impact is clearly visible. Through technology, we are bringing transparency in the entire system: PM Modi in Jhabua #MadhyaPradesh pic.twitter.com/zJapQQJ2oa
— ANI (@ANI) November 20, 2018
ನಮ್ಮ ಮುಖ್ಯ ಉದ್ದೇಶ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗುವುದು, ಯುವ ಪೀಳಿಗೆಗೆ ಆದಾಯ ಬರುವಂತೆ ಮಾಡುವುದು, ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ ಹಿರಿಯರಿಗೆ ಔಷಧಿಗಳನ್ನು ಪೂರೈಸುವುದು. ಅಲ್ಲದೇ 2022ರ ವೇಳೆಗೆ ಎಲ್ಲಾ ವಸತಿ ರಹಿತರಿಗೆ ‘ಪುಕ್ಕಾ’ ಮನೆಗಳನ್ನು ನೀಡುವುದು ನನ್ನ ಕನಸಾಗಿದೆ. ಈಗಾಗಲೇ ನಾವು 1.25 ಕೋಟಿ ಜನರಿಗೆ ಅವರ ಸ್ವಂತ ಮನೆಯ ಕೀಲಿಗಳನ್ನು ಹಸ್ತಾಂತರಿಸಿದ್ದೇವೆಂದು ಹೇಳಿದರು.
WATCH:PM Modi addresses a rally in Madhya Pradesh's Jhabua https://t.co/UJ8ML4KY4x
— ANI (@ANI) November 20, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews