ನವದೆಹಲಿ: ಗಲಭೆಗೂ ಬುಲ್ಡೋಜರ್ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ. ಕಾನೂನು ಬದ್ಧವಾಗಿಯೇ ಅಕ್ರಮ ಕಟ್ಟಡಗಳನ್ನು ಕೆಡವಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ಗೆ ತನ್ನ ಕಾರ್ಯಾಚರಣೆಯ ಬಗ್ಗೆ ಸಮರ್ಥನೆ ನೀಡಿದೆ.
ನೂಪುರ್ ಶರ್ಮಾ ಹೇಳಿಕೆಯನ್ನು ಖಂಡಿಸಿ ನಡೆದ ಗಲಭೆಯ ಬಳಿಕ ಉತ್ತರ ಪ್ರದೇಶದ ಹಲವೆಡೆ ಕಟ್ಟಡಗಳನ್ನು ಕೆಡವಲಾಗಿತ್ತು. ಒಂದೇ ಸಮುದಾಯದ ಕಟ್ಟಡಗಳನ್ನು ಗುರಿಯಾಗಿಸಿ ನಡೆದ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿತ್ತು. ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜೂನ್ 16 ಎಂದು ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು.
Advertisement
Advertisement
ಈ ಅರ್ಜಿಯ ವಿಚಾರಣೆ ವೇಳೆ, ಕಾನೂನು ಬದ್ಧವಾಗಿಯೇ ಈ ಕಾರ್ಯಾಚರಣೆ ಮಾಡಲಾಗಿದೆ. ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವುದು ಹೊಸದೆನಲ್ಲ. ಈ ಹಿಂದಿನಿಂದಲೂ ಈ ರೀತಿಯ ಕಾರ್ಯಾಚರಣೆ ನಡೆದುಕೊಂಡು ಬಂದಿದೆ. ಆದರೆ ಅರ್ಜಿದಾರರು ತಪ್ಪಾಗಿ ಈ ಕಾರ್ಯಾಚರಣೆಯನ್ನು ಗಲಭೆ ಪ್ರಕರಣಕ್ಕೆ ಜೋಡಿಸಿದ್ದಾರೆ ಎಂದು ಸರ್ಕಾರ ವಾದಿಸಿದೆ.
Advertisement
ನೆಲಸಮ ಕಾರ್ಯಾಚರಣೆಯನ್ನು ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಹಾಲಿ ಜಾರಿಯಲ್ಲಿರುವ ಕಾನೂನು ಪ್ರಕಾರವೇ ಮಾಡಿದ್ದಾರೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ಅರ್ಜಿದಾರರು ಈ ಅರ್ಜಿಯನ್ನು ಮೊದಲು ಹೈಕೋರ್ಟ್ ಸಲ್ಲಿಸಬೇಕಿತ್ತು. ಆದರೆ ಸುಪ್ರೀಂ ಮೊರೆ ಹೋಗಿದ್ದಾರೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕೆಂದು ಮನವಿ ಮಾಡಿದೆ.
Advertisement
ಜಾವೇದ್ ಮುಹಮ್ಮದ್ ಅವರಿಗೆ ಹಲವು ಸಮಯಗಳನ್ನು ನೀಡಿದ ಬಳಿಕ ಕಟ್ಟಡಗಳನ್ನು ಕೆಡವಲಾಗಿದೆ. ಪ್ರಯಾಗ್ರಾಜ್ ಗಲಭೆಗೂ ಈ ನೆಲಸಮ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಕೋರ್ಟ್ಗ ಮಾಹಿತಿ ನೀಡಿದೆ. ಇದನ್ನೂ ಓದಿ: ಕಲ್ಲು ತೂರಿದವರಿಗೆ ಬುಲ್ಡೋಜರ್ ಶಾಕ್ ಕೊಟ್ಟ ಯೋಗಿ – ಅಕ್ರಮ ಕಟ್ಟಡಗಳು ಧ್ವಂಸ
ಕಾನ್ಪುರ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸರ್ಕಾರ, ಕಾನ್ಪುರದ ಇಬ್ಬರು ಬಿಲ್ಡರ್ ಅಕ್ರಮ ಕಟ್ಟಡವನ್ನು ಕಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಕಟ್ಟಡ ನೆಲಸಮ ಕಾರ್ಯಾಚರಣೆಯ ಸಿದ್ಧತೆ ಗಲಭೆಗೂ ಮೊದಲೇ ಆರಂಭವಾಗಿತ್ತು ಎಂದು ಹೇಳಿದೆ.
ಗಲಭೆಕೋರರ ವಿರುದ್ಧ ಸಿಆರ್ಪಿಸಿ, ಐಪಿಸಿ, ಉತ್ತರ ಪ್ರದೇಶ ಗ್ಯಾಂಗ್ಸ್ಟರ್ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1986, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಮತ್ತು ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯ ಮರುಪಡೆಯುವಿಕೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
Live Tv