ಮಂಗಳೂರು: ಜನರ ಭಾವನೆಗಳನ್ನ ಕೆಡವಿದವರು ಈಗ ದೇವಸ್ಥಾನ ಕೆಡವಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಸಚಿವ ಯು.ಟಿ.ಖಾದರ್ ಬಿಜೆಪಿಯವರನ್ನು ಟೀಕಿಸಿದ್ದಾರೆ.
ದೇವಸ್ಥಾನಗಳನ್ನು ಉರುಳಿಸುತ್ತಿರುವುದರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸಂಸ್ಕೃತಿ ಕೆಡವುತ್ತೆ ಎನ್ನುವುದು ಮತ್ತೆ ಸಾಬೀತಾಗಿದೆ. ಜನರ ಭಾವನೆಗಳನ್ನು ಕೆಡವಿದವರು ಈಗ ದೇವಸ್ಥಾನ ಕೆಡವಿದ್ದಾರೆ. ದೇವಸ್ಥಾನ ಕೆಡವಿದ ಬಗ್ಗೆ ಸರ್ಕಾರ ಯಾರನ್ನು ಜವಾಬ್ದಾರಿ ಮಾಡುತ್ತೆ. ದೇವಸ್ಥಾನದ ಇತಿಹಾಸ, ಅಲ್ಲಿನ ಶಿಲ್ಪಕಲೆ ಎಲ್ಲವೂ ಇವರಿಗೆ ಅರ್ಥವಾಗಿಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 7 ಕೋಟಿ ಮೊತ್ತದ ಅಡಿಕೆಯ ಜೊತೆ 7 ಲಾರಿ ಜಪ್ತಿ – 7 ಮಂದಿ ಅರೆಸ್ಟ್
ಮೈಸೂರು ಅಷ್ಟೇ ಅಲ್ಲ, ಇದು ಇಡೀ ದೇಶಕ್ಕೆ ದೊಡ್ಡ ಕಪ್ಪುಚುಕ್ಕೆ. ಇದರ ನೈತಿಕ ಹೊಣೆಹೊತ್ತು ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ. ಸರ್ಕಾರ ಆದೇಶ ಕೊಡುವಾಗ ಏಕೆ ಯೋಚನೆ ಮಾಡಿಲ್ಲ? ಇದನ್ನು ಕೂತು ಚರ್ಚಿಸಿದ್ರೆ ಈ ಸಮಸ್ಯೆಗೆ ಪರಿಹಾರ ಸಿಗ್ತಾ ಇರ್ಲಿಲ್ವಾ? ದೊಡ್ಡ ದೊಡ್ಡವರಿಗೆ ಬಿಜೆಪಿ ಸರ್ಕಾರ ಅಕ್ರಮ ಜಾಗ ಸಕ್ರಮ ಮಾಡಿ ಕೊಟ್ಟಿಲ್ವಾ? ಹೀಗಿರುವಾಗ ದೇವಸ್ಥಾನದ ಜಾಗ ಸಕ್ರಮ ಮಾಡಲು ಸರ್ಕಾರಕ್ಕೆ ಏನು ತೊಂದರೆ? ಇದು ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಕಂದಕ ನಿರ್ಮಿಸಿ ಪಂಚಾಯತಿ ಸದಸ್ಯೆ ಪತಿ ದರ್ಬಾರ್