ಭೋಪಾಲ್: ಭಾನುವಾರ ರಾಮನವಮಿ ಮೆರವಣಿಗೆ ವೇಳೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೋಮವಾರ 20 ಅಕ್ರಮ ಕಟ್ಟಡ ಹಾಗೂ ಅಂಗಡಿಗಳನ್ನು ನೆಲಸಮಗೊಳಿಸಿ ಬಿಸಿ ಮುಟ್ಟಿಸಿದೆ.
ನಗರದ ಛೋಟೆ ಮೋಹನ್ ಟಾಕೀಸ್ ಪ್ರದೇಶದಿಂದ ಧ್ವಂಸ ಕಾರ್ಯ ಆರಂಭಗೊಂಡು, ನಾಲ್ಕು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಇದಾದ ಕೆಲವೇ ಹೊತ್ತಲ್ಲಿ ಆನಂದ್ ನಗರ ಮತ್ತು ಖಾಸ್ಖಾಸ್ವಾಡಿಯಲ್ಲಿ ಅಕ್ರಮ ಕಟ್ಟಡಗಳನ್ನು ಕೆಡವಲಾಯಿತು. ಇದನ್ನೂ ಓದಿ: ರಾಮನವಮಿ ರ‍್ಯಾಲಿ ವೇಳೆ ಕೋಮುಸಂಘರ್ಷ: 4 ರಾಜ್ಯಗಳಲ್ಲಿ ನಡೆದಿದ್ದೇನು?
Advertisement
India: Houses and shops belonging to Muslims are being demolished in #khargone, Madhya Pradesh.
— Ahmer Khan (@ahmermkhan) April 11, 2022
Advertisement
ಕೆಡವಲಾದ ಎಲ್ಲಾ ಅಂಗಡಿಗಳು ಹಾಗೂ ಮನೆಗಳು ಅತಿಕ್ರಮಣ ಮಾಡಲಾದ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡಗಳಾಗಿವೆ. ಈ ಪ್ರದೇಶಗಳಲ್ಲಿ ಕಲ್ಲು ತೂರಾಟ ವರದಿಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಅಕ್ರಮ ಕಟ್ಟಡಗಳನ್ನು ಕೆಡವಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
Advertisement
ರಾಮನವಮಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 84 ಜನರನ್ನು ಬಂಧಿಸಲಾಗಿದೆ. ಅವರಿಗೆ ತಕ್ಕ ಪಾಠ ಕಲಿಸಲು, ಅವರ ಅಕ್ರಮ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಕಮಿಷನರ್ ಡಾ. ಪವನ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
Advertisement
मध्य प्रदेश में रामनवमी की शोभा यात्रा पर मुस्लिम भीड़ का हमला, ट्रांसफर्मरों और गाड़ियों को किया आग के हवाले: DJ पर थी आपत्ति#Khargone #RamNavamihttps://t.co/XbyLDbNnZy
— ऑपइंडिया (@OpIndia_in) April 10, 2022
ಘಟನೆಗೆ ಸಂಬಂಧಿಸಿದಂತೆ ವದಂತಿಗಳನ್ನು ಹರಡಿದ್ದಕ್ಕಾಗಿ ರಾಜ್ಯ ಸರ್ಕಾರದ ಮೂವರು ಗುತ್ತಿಗೆ ನೌಕರರನ್ನು ವಜಾ ಮಾಡಿದ್ದರೆ ಒಬ್ಬ ನೌಕರರನ್ನು ಅಮಾನತುಗೊಳಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇದು ಅತ್ಯಾಚಾರವೋ? ಅಥವಾ ಅವಳು ಗರ್ಭಿಣಿಯೋ?: ಮಮತಾ ಬ್ಯಾನರ್ಜಿ ಪ್ರಶ್ನೆ
ಭಾನುವಾರ ರಾತ್ರಿ ನಡೆದ ಹಿಂಸಾಚಾರದ ಹಿನ್ನೆಲೆ ಖಾರ್ಗೋನ್ ಶಾಸಕ ರವಿ ಜೋಶಿ ಸ್ಥಳಕ್ಕೆ ಭೇಟಿ ನೀಡಿ, ಹಿಂಸಾಚಾರಕ್ಕೆ ಪೊಲೀಸರ ವೈಫಲ್ಯವೇ ಕಾರಣ. ಇಂತಹ ಬೃಹತ್ ರ‍್ಯಾಲಿಯಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಿತ್ತು. ಇದರಿಂದಾಗಿ ಪರಿಸ್ಥಿತಿ ಕೈಮೀರಿದೆ ಎಂದು ಆರೋಪಿಸಿದ್ದಾರೆ.