– ಬೀದರ್‌ನಿಂದ ಚಾಮರಾಜನಗರದವರೆಗೆ ರಾಜ್ಯದ ಅತಿ ಉದ್ದದ ಮಾನವ ಸರಪಳಿ ಕಾರ್ಯಕ್ರಮ
ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಇಂದು (ಸೆ.15) ಬೀದರ್‌ನಿಂದ (Bidar) ಚಾಮರಾಜನಗರದವರೆಗೆ (Chamarajnagar) ಕರ್ನಾಟಕದ ಅತಿ ಉದ್ದದ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಚಾಲನೆ ನೀಡಿದರು.
Advertisement
Advertisement
ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೆಚ್.ಸಿ ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್, ಪರಿಷತ್ ಸಭಾಪತಿ ಹೊರಟ್ಟಿ, ಶಾಸಕ ರಿಜ್ವಾನ್ ಅರ್ಷದ್, ಪರಿಷತ್ ಸದಸ್ಯ ಸಲೀಂ ಅಹಮದ್, ಯು.ಬಿ ವೆಂಕಟೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಪ್ಪ ಮತ್ತಿತರರು ಸಾಥ್ ನೀಡಿದರು.
Advertisement
Advertisement
ಏಕಕಾಲಕ್ಕೆ 2500 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಬಹುತೇಕ ವಿವಿಧ ಸಮಾಜದ 3 ಕೋಟಿ ಜನರು ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿಲಿದ್ದಾರೆ.
ರಾಜ್ಯಾದ್ಯಂತ ಮಾನವ ಸರಪಳಿಗೆ ಚಾಲನೆ:
ಬೀದರ್:
ಸಂವಿಧಾನದ ಆಶಯ ಜಾಗೃತಿಗೊಳಿಸುವ ಮಹಾದಾಶಯದೊಂದಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ನಿಮಿತ್ತ ಬಸವಾದಿ ಶರಣರ ಕಾಯಕ ಭೂಮಿ ಬಸವಕಲ್ಯಾಣದ ಅನುಭವ ಮಂಟಪದಿಂದ ಚಾಮರಾಜನಗರದವರೆಗೆ ರಾಜ್ಯ ಸರ್ಕಾರದಿಂದ ಹಮ್ಮಿಕೊಳ್ಳಲಾದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ. ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಅನುಭವ ಮಂಟಪದಿಂದ ಮಾನವ ಸರಪಳಿಗೆ ಚಾಲನೆ ನೀಡುವಂತೆ ಕಾಂಗ್ರೆಸ್ ಸರ್ಕಾರ ಯೋಜನೆ ಹಾಕಿದೆ. ಬೃಹತ್ ಮಾನವ ಸರಪಳಿ ಅಭಿಯಾನಕ್ಕೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಚಾಲನೆ ನೀಡಿದರು. ಜಿಲ್ಲೆಯಾದ್ಯಂತ 40 ಕಿ.ಮೀ.ವರೆಗೆ 35 ಸಾವಿರ ಜನರು ಭಾಗಿಯಾಗಿ ಮಾನವ ಸರಪಳಿ ರಚನೆಯಾಗಲಿದೆ. ಬಸವಕಲ್ಯಾಣದಿಂದ ಹುಮ್ನಾಬಾದ್‌ಗೆ ತಲುಪಿ ಬಳಿಕ ಕಲಬುರಗಿಯ ಕಿಣ್ಣಿ ಸಡಕ ತಲುಪಲಿದೆ.
ಕಲಬುರಗಿ :
ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್‌ನಿಂದ ಚಿತ್ತಾಪುರ ತಾಲೂಕಿನ ದೇವಲಾಪುರದವರೆಗೆ ಮಾನವ ಸರಪಳಿ ನಿರ್ಮಾಣವಾಗಲಿದೆ. ಈ ಕಾರ್ಯಕ್ರಮಕ್ಕೆ ಸಚಿವ ಶರಣಪ್ರಕಾಶ್ ಪಾಟೀಲ್ ವೀರಶೈವ ಕಲ್ಯಾಣ ಮಂಟಪದ ಬಳಿ ಚಾಲನೆ ನೀಡಿದರು. ಜಿಲ್ಲೆಯಾದ್ಯಂತ 113ಕಿ.ಮಿ. ಹಾದು ಹೋಗಲಿದೆ.
ಉತ್ತರಕನ್ನಡ:
ಹೊನ್ನಾವರದಲ್ಲಿ ಸಚಿವ ಮಂಕಾಳು ವೈದ್ಯ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಚಾಲನೆ ನೀಡಿದರು. ಉತ್ತರಕನ್ನಡ ಜಿಲ್ಲೆಯಲ್ಲಿ 143 ಕಿ.ಮೀ. ಉದ್ದದ ಮಾನವ ಸರಪಳಿ ಹಳಿಯಾಳದ ಮಾವಿನಕೊಪ್ಪದಿಂದ ಭಟ್ಕಳದ ಶಿರೂರುವರೆಗೆ ರಚನೆಯಾಗಲಿದ್ದು, 80 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದಾರೆ.
ದಕ್ಷಿಣ ಕನ್ನಡ:
ಜಿಲ್ಲೆಯಲ್ಲಿ ಒಟ್ಟು 132 ಕಿ.ಮೀ. ಮಾನವ ಸರಪಳಿ ನಿರ್ಮಾಣವಾಗಲಿದ್ದು, ಉಡುಪಿ ಜಿಲ್ಲಾ ಗಡಿ ಹೆಜಮಾಡಿಯಿಂದ ಕೊಡಗು ಜಿಲ್ಲಾ ಗಡಿ ಸಂಪಾಜೆಯವರೆಗೆ ಮಾನವ ಸರಪಳಿ ರಚನೆಯಾಗಲಿದೆ.
ಬಾಗಲಕೋಟೆ:
ಜಿಲ್ಲೆಯಲ್ಲಿ 105 ಕಿ.ಮೀ. ಮಾನವಸರಪಳಿ ಆಲಮಟ್ಟಿಯಿಂದ ಸಾಲಹಳ್ಳಿವರೆಗೆ ರಚನೆಯಾಗಲಿದೆ. ಈಗಾಗಲೇ ವಿದ್ಯಾರ್ಥಿಗಳು ರಸ್ತೆ ಬದಿ ಬಂದು ಉತ್ಸುಕತಟಯಿಂದ ಕಾಯುತ್ತಿದ್ದಾರೆ.
ಚಾಮರಾಜನಗರ:
ಜಿಲ್ಲೆಯಲ್ಲಿ 24 ಕಿ.ಮೀ ಉದ್ದ ಮಾನವ ಸರಪಳಿ ರಚನೆಗೆ ಸಿದ್ದತೆ ನಡೆದಿದ್ದು, ಗಡಿಭಾಗ ಮೂಗೂರು ಕ್ರಾಸ್‌ನಿಂದ ಚಾಮರಾಜನಗರದವರೆಗೆ 24 ಕಿ.ಮೀ ಮಾನವ ಸರಪಳಿ 19,200 ಜನರಿಂದ ರಚನೆಯಾಗಲಿದೆ. ಬೆಳಿಗ್ಗೆ 9.30 ರಿಂದ ಕಾರ್ಯಕ್ರಮ ಆರಂಭವಾಗಲಿದೆ. ಬೆಳಿಗ್ಗೆ 9.57 ರಿಂದ 9.59ರವರೆಗೆ ಮಾನವ ಸರಪಳಿ ರಚನೆಯಾಗಲಿದೆ.
ದಾವಣಗೆರೆ:
ನ್ಯಾಮತಿ ಗಡಿಭಾಗದಿಂದ ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ್ ಹೊಸಪೇಟೆವರೆಗೆ ಮಾನವ ಸರಪಳಿ ನಿರ್ಮಾಣವಾಗಲಿದೆ. 80 ಕಿ.ಮೀ.ನಲ್ಲಿ 90 ಸಾವಿರ ಜನ ಮಾನವ ಸರಪಳಿಯಲ್ಲಿ ಭಾಗಿಯಾಗಲಿದ್ದಾರೆ. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ಮಂಡ್ಯ:
ಜಿಲ್ಲೆಯ ನಿಡಘಟ್ಟದಿಂದ ಸಿದ್ದಲಿಂಗಪುರದವರೆಗೆ ಮಾನವ ಸರಪಳಿ ನಿರ್ಮಾಣವಾಗಲಿದ್ದು, 62 ಕಿ.ಮೀ. ಮಾನವ ಸರಪಳಿ ನಿರ್ಮಾಣವಾಗಲಿದೆ.
ಚಿತ್ರದುರ್ಗ:
145ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಾಣವಾಗಲಿದ್ದು, 1.50ಲಕ್ಷ ಜನ ಭಾಗಿ ನಿರೀಕ್ಷೆಯಿದೆ. ಮೊಳಕಾಲ್ಮೂರು ತಾಲೂಕಿನ ಮೇಗಲಕಣಿವೆ ಗ್ರಾಮದಿಂದ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿವರೆಗೆ ಮಾನವ ಸರಪಳಿ ರಚನೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಚಾಲನೆ ನೀಡಿದರು.
ಧಾರವಾಡ:
ಜಿಲ್ಲೆಯಲ್ಲಿ 55 ಕಿ.ಮೀ. ಮಾನವ ಸರಪಳಿ ನಿರ್ಮಾಣವಾಗಲಿದ್ದು, ಕೆಸಿಡಿ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಚಾಲನೆ ನೀಡಿದರು.
ಬೆಳಗಾವಿ:
ಸುವರ್ಣ ವಿಧಾನಸೌಧದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.
ಹಾಸನ:
ಜಿಲ್ಲೆಯ, ಕೊಡಗು ಗಡಿ ಕಡುವಿನಹೊಸಹಳ್ಳಿಯಿಂದ ಚಿಕ್ಕಮಗಳೂರು ಜಿಲ್ಲೆಯ ಗಡಿವರೆಗೆ 114 ಕಿಲೋಮೀಟರ್ ಉದ್ದದ ಮಾನವ ಸರಪಳಿ ನಿರ್ಮಾಣವಾಗಲಿದೆ.
ಶಿವಮೊಗ್ಗ:
ಜಿಲ್ಲೆ ಭದ್ರಾವತಿ ತಾಲೂಕಿನ ಕಾರೇಹಳ್ಳಿಯಿಂದ ಶಿವಮೊಗ್ಗ ತಾಲೂಕಿನ ಮಡಕೆ ಚೀಲೂರು ವರೆಗೆ 60 ಕಿ.ಮೀ ಮಾನವ ಸರಪಳಿ ನಿರ್ಮಾಣವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.
ಕೊಡಗು:
ಜಿಲ್ಲೆಯ ಸಂಪಾಜೆಯಿಂದ ಶಿರಂಗಾಲದವರೆಗೆ 72.7 ಕಿ.ಮೀ ಮಾನವ ಸರಪಳಿ ನಿರ್ಮಾಣವಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಚಾಲನೆ ನೀಡಿದರು.
ಕೋಲಾರ:
ಜಿಲ್ಲೆಯ ಚೊಕ್ಕನಹಳ್ಳಿ ಗ್ರಾಮದಿಂದ ವೆಂಕಟಾಪುರ ಗ್ರಾಮದವರೆಗೆ 55 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಾಣವಾಗಲಿದೆ.
ತುಮಕೂರು:
ಜಿಲ್ಲೆಯಲ್ಲಿ 25 ಲಕ್ಷ ಜನರಿಂದ ಮಾನವ ಸರಪಳಿ ನಿರ್ಮಾಣವಾಗಲಿದ್ದು, ಮಾನವ ಸರಪಳಿಗೆ ಸಚಿವ ಪರಮೇಶ್ವರ್ ಚಾಲನೆ ನೀಡಿದರು.
ಉಡುಪಿ:
ಜಿಲ್ಲೆಯ ಗಡಿ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್‌ನಿಂದ, ಕಾಪು ತಾಲೂಕಿನ ಹೆಜಮಾಡಿ ಸೇತುವೆವರೆಗೆ 106 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಾಣವಾಗಲಿದೆ.
ರಾಮನಗರ:
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಮೈಸೂರು-ಬೆಂಗಳೂರು ಹಳೇ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಾಣವಾಗಲಿದೆ.