ಬಜೆಟ್‌ನಲ್ಲಿ ಈಡೇರದ ಬೇಡಿಕೆ – ಸರ್ಕಾರದ ವಿರುದ್ಧ ಸಾರಿಗೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ

Public TV
2 Min Read
transport employees bus bundh plan

– ಮಾರ್ಚ್ 22ರವರೆಗೆ ಸರ್ಕಾರಕ್ಕೆ ಗಡುವು

ಬೆಂಗಳೂರು: ಶುಕ್ರವಾರ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿದ ರಾಜ್ಯ ಬಜೆಟ್ (Karnataka Budget) ಕೆಲವರಿಗೆ ಸಿಹಿ, ಕೆಲವರಿಗೆ ಕಹಿಯನ್ನುಂಟು ಮಾಡಿದೆ. ಮುಖ್ಯಮಂತ್ರಿಗಳ ಬಜೆಟ್ ಮೇಲೆ ಸಾರಿಗೆ ನೌಕರರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವು ಈಡೇರಿಲ್ಲ. ಹೀಗಾಗಿ ಸಾರಿಗೆ ನೌಕರರು ಮತ್ತೆ ಬಸ್ ಬಂದ್ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.

ಸರ್ಕಾರ ಹಾಗೂ ಸಾರಿಗೆ ನೌಕರರ ಪರಿಸ್ಥಿತಿ ನಾ ಕೊಡೆ, ನೀ ಬಿಡೇ ಎನ್ನುವಂತಾಗಿದೆ. ಸಾರಿಗೆ ನೌಕರರ ಭರವಸೆಗಳು ಸುಮಾರು ಮೂರು ವರ್ಷಗಳಾದರೂ ಈಡೇರುತ್ತಿಲ್ಲ. ಶಕ್ತಿ ಯೋಜನೆಯ ಎಫೆಕ್ಟ್‌ನಿಂದಾಗಿ ಸಾರಿಗೆ ನೌಕರರ ಕೆಲಸ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗಳು ಮಾತ್ರ ಈಡೇರಿಲ್ಲ. ಹೀಗಾಗಿ ಮಾರ್ಚ್ 22ರೊಳಗೆ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನವನ್ನು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರಿಗೆ ನೀಡಬೇಕು. ಇಲ್ಲವಾದರೆ ಮಾರ್ಚ್ 25ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟ ಸಭೆ ಮಾಡಿ ಬಂದ್ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಸಾರಿಗೆ ನೌಕರರ ಒಕ್ಕೂಟ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಯೂರೋಪ್‌, ಅಮೆರಿಕ, ದುಬೈಗೆ ನಿರಂತರ ಸುತ್ತಾಟ – ನಟಿ ರನ್ಯಾ ಟ್ರಾವೆಲ್‌ ಹಿಸ್ಟರಿ ಬಯಲು

Karnataka State Budget 2025 Siddaramaiah

ಅಲ್ಲದೇ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿಸಮಾನ ವೇತನ ನೀಡಬೇಕು. 7ನೇ ವೇತನ ಆಯೋಗ ಜಾರಿ ಆಗಬೇಕು. 38 ತಿಂಗಳ ವೇತನ ಹಿಂಬಾಕಿ ನೀಡಬೇಕು. ಕಾರ್ಮಿಕ ಸಂಘಟನೆಗಳ ಚುನಾವಣೆ ಮಾಡಬೇಕು. 2021ರ ವೇಳೆ ಮುಷ್ಕರದಲ್ಲಿ ವಜಾಗೊಂಡ ನೌಕರರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪ್ರಮುಖ ಬೇಡಿಕೆಗಳನ್ನು ನೌಕರರು ಇಟ್ಟಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಒಳಗೆ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಇತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತೆ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ, ಸಹಾಯಕಿಯರಿಗೆ 750 ರೂ. ಗೌರವಧನ ಹೆಚ್ಚಿಸಲಾಗಿದೆ. ಆದೆರೆ ಇದು ನಮಗೆ ತೃಪ್ತಿ ತಂದಿಲ್ಲ. ಎರಡರಿಂದ ಮೂರು ಸಾವಿರ ಗೌರವಧನ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ 1 ಸಾವಿರ, 750 ರೂಪಾಯಿ ಗೌರವಧನ ಅಷ್ಟೇ ಹೆಚ್ಚಳ ಮಾಡಿರೋದು ಭಾರೀ ನಿರಾಸೆ ಮೂಡಿಸಿದೆ. ಈ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟ ಆಗುತ್ತದೆ. ನಮ್ಮದೇ ದುಡ್ಡಲ್ಲಿ ಮೊಬೈಲ್ ಖರೀದಿಸಿ, ಇಲಾಖೆಯ ಕೆಲಸ ಮಾಡಬೇಕಾಗುತ್ತದೆ. ಸರ್ಕಾರದ ಅಲ್ಪ ಪ್ರಮಾಣದ ಗೌರವಧನ ಹೆಚ್ಚಳ ನಮಗೆ ತೃಪ್ತಿ ತಂದಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದನ್ನೂ ಓದಿ: ಹಾಸನ| ಪ್ರಿಯಕರನ ಜೊತೆ ಪತ್ನಿ ಪರಾರಿ – ನದಿಗೆ ಹಾರಿ ಪತಿ ಆತ್ಮಹತ್ಯೆ

ಸದ್ಯ ಫ್ರೀಡಂಪಾರ್ಕ್‌ನಲ್ಲಿ ಹೋರಾಟ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗೌರವಧನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದು, ಹೋರಾಟ ತೀವ್ರಗೊಳಿಸಲು ಚಿಂತನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹರ್ಲೀನ್ ಡಿಯೋಲ್‍ ಅಬ್ಬರದ ಬ್ಯಾಟಿಂಗ್‌ಗೆ ಡೆಲ್ಲಿ ಬರ್ನ್‌ – ಗುಜರಾತ್‌ಗೆ 5 ವಿಕೆಟ್‌ಗಳ ರೋಚಕ ಜಯ

Share This Article