ಬೆಂಗಳೂರು: ಹೆಚ್‌ಡಿಕೆ ವಿರುದ್ಧದ ಪ್ರಕರಣ ಸೇರಿದಂತೆ ಬಾಕಿ ಇರುವ ನಾಲ್ಕು ಪ್ರಕರಣಗಳ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿಗೆ ಆಗ್ರಹಿಸಿ ಆ.31ರಂದು ರಾಜಭವನಕ್ಕೆ ಕಾಂಗ್ರೆಸ್ ಪರೇಡ್ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಹೇಳಿದ್ದಾರೆ.
Advertisement
ಕೆಪಿಸಿಸಿಯಲ್ಲಿ ಮಾತನಾಡಿ, ವಿಧಾನಸೌಧದ ಗಾಂಧಿ ಪ್ರತಿಮೆ ಬಳಿಯಿಂದ ರಾಜಭವನಕ್ಕೆ ಪಾದಯಾತ್ರೆ ಮಾಡಿ ಮನವಿ ಮಾಡುತ್ತೇವೆ. ಎಲ್ಲ ಕಾಂಗ್ರೆಸ್ (Congress) ಶಾಸಕರು ಭಾಗವಹಿಸುತ್ತಾರೆ. ಎಲ್ಲ ಸಚಿವರು ಇರ್ತಾರೆ, ಸಿಎಂ ಕೂಡ ಭಾಗವಹಿಸುತ್ತಾರೆ. ಪ್ರಾಸಿಕ್ಯೂಷನ್‌ಗೆ ಬಾಕಿ ಇರುವ ಎಲ್ಲ ೪ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು. ಕುಮಾರಸ್ವಾಮಿ ಪ್ರಕರಣ ಅಲ್ಲ, ಎಲ್ಲರ ಬಗ್ಗೆಯೂ ಮನವಿ ಮಾಡುತ್ತೇವೆ. 150 ಮೀ. ಪಾದಯಾತ್ರೆ, ಟ್ರಾಫಿಕ್‌ಗೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇರ್ ಸೆಂಟರ್: ದಿನೇಶ್ ಗುಂಡೂರಾವ್
Advertisement
ಇದೇ ವೇಳೆ ರಾಹುಲ್ ಖರ್ಗೆ ಟ್ರಸ್ಟ್ ಕೆಐಎಡಿಬಿ ಜಮೀನು ಹಂಚಿಕೆ ವಿಚಾರವಾಗಿ ಮಾತನಾಡಿ, ಎಲ್ಲವೂ ಕ್ಯಾಬಿನೆಟ್‌ಗೆ ಬರುವುದಿಲ್ಲ. ನಿಯಮ ಬಾಹಿರವಾಗಿ ಯಾವುದೂ ನೀಡಿಲ್ಲ. ಕೆಲವು ಪತ್ರಿಕಾ ಟ್ರಸ್ಟ್‌ಗಳೂ ಅರ್ಜಿ ಹಾಕಿಕೊಂಡಿವೆ. ಅವುಗಳಿಗೂ ಕೊಡುತ್ತೇವೆ. ಅದು ತಪ್ಪಲ್ಲ. ಯಾವುದೂ ಪ್ರಭಾವ ಬೀರಿಲ್ಲ. ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಜಿಂದಾಲ್‌ಗೆ ಜಮೀನು ಮಾರಾಟ ವಿಚಾರವಾಗಿ ಪ್ರಶ್ನಿಸಿದಾಗ, ಏನು ಗೊತ್ತಿಲ್ಲದಂತೆ. ನೀವು ಹೇಳಿದ ಮೇಲೆ ಗೊತ್ತಾಗಿದ್ದು, ತಿಳಿದುಕೊಂಡು ಮಾತಾಡ್ತೀನಿ ಎಂದು ಜಾರಿಕೊಂಡಿದ್ದಾರೆ. ಡಿಸಿಎಂ ಅವರಿಗೆ ಗೊತ್ತೇ ಇಲ್ಲದೇ ಜಿಂದಾಲ್ ಜಮೀನು ಮಾರಾಟ ಕ್ಯಾಬಿನೆಟ್‌ನಲ್ಲಿ ಪಾಸ್ ಆಗಿದೆಯಾ? ಡಿಸಿಎಂಗೆ ಗೊತ್ತೇ ಇಲ್ಲದೇ ಕ್ಯಾಬಿನೆಟ್ ತೀರ್ಮಾನ ಆಯ್ತಾ ಅನ್ನೋದು ಎಲ್ಲರಿಗೂ ಈಗ ಪ್ರಶ್ನೆಯಾಗಿದೆ.ಇದನ್ನೂ ಓದಿ: ಫೋರ್ಜರಿ ಸಹಿ ಮಾಡಿದ್ರೆ ಏಕೆ ದೂರು ಕೊಡಲಿಲ್ಲ?: ಹೆಚ್‍ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ