ನವದೆಹಲಿ: ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಮತ್ತು ಚೀನಾದ ಬಗೆಗಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಗ್ಗೆ ಜುಲೈ 21ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚರ್ಚೆಯಾಗಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) ಆಗ್ರಹಿಸಿದ್ದಾರೆ.
ಈ ಅಧಿವೇಶನದಲ್ಲಿ ಈ ಎಲ್ಲಾ ವಿಚಾರಗಳ ಕುರಿತ ಚರ್ಚೆಗೆ ಕನಿಷ್ಠ 2 ದಿನವಾದರೂ ಅವಕಾಶ ಕಲ್ಪಿಸಬೇಕು. ಅಲ್ಲದೇ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (SIR) ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ನಡೆಯಬೇಕು. ಅಲ್ಲದೇ ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರು ಸದನದಲ್ಲಿ ಉತ್ತರಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಕೆಡಿಪಿ ಮೀಟಿಂಗ್‌ನಲ್ಲಿ ರಮ್ಮಿ ಆಡ್ತಿದ್ದ ಅರಣ್ಯಾಧಿಕಾರಿ – ಸಭೆಯಲ್ಲೇ ಗುಮ್ಮಿದ ಸಚಿವರು
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿರುವ ಭಯೋತ್ಪಾದಕರು ಇನ್ನು ಪತ್ತೆಯಾಗಿಲ್ಲ. ಆಪರೇಶನ್ ಸಿಂಧೂರ ಬಗ್ಗೆ ಮೊದಲು ಸೇನಾಪಡೆಗಳ ಮುಖ್ಯಸ್ಥ ಜನರಲ್ ಚೌಹಾಣ್, ಬಳಿಕ ಗ್ರೂಪ್ ಕ್ಯಾಪ್ಟನ್ ಶಿವಕುಮಾರ್ ತದನಂತರ ಲೆಫ್ಟಿನೆಂಟ್ ಜನರಲ್ ರಾಹುಲ್ ಸಿಂಗ್ ಮಹತ್ವದ ಹೇಳಿಯನ್ನು ನೀಡಿದ್ದಾರೆ ಇದರ ಬಗ್ಗೆಯೂ ಚರ್ಚೆಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಬಿಜೆಪಿ ಐಸಿಯುನಲ್ಲಿದೆ, ಮೋದಿ ಏಕೆ ಬದಲಾವಣೆ ಆಗಬಾರದು – ಸಂತೋಷ್ ಲಾಡ್ ಪ್ರಶ್ನೆ
ಅಲ್ಲದೇ ಮೇಕ್ ಇನ್ ಇಂಡಿಯಾವು ಮೇಡ್ ಇನ್ ಚೈನಾ ಮೇಲೆ ಅವಲಂಬಿತವಾಗಿದೆ ಎಂಬ ವಿಚಾರವೂ ಮಹತ್ವದಾಗಿದ್ದು, ಇವೆಲ್ಲದರ ಬಗ್ಗೆ ಚರ್ಚೆಯಾಗಬೇಕು ಹಾಗೂ ಪ್ರಧಾನಿಯವರು ಉತ್ತರವನ್ನು ನೀಡಬೇಕು. ಕಳೆದ 11 ವರ್ಷಗಳಲ್ಲಿ ಸಂಸತ್ತಿನಲ್ಲಿ ಒಮ್ಮತ ಮೂಡಿಸಿ, ಮುನ್ನಡೆಯುವಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಬದಲಿಗೆ ಪ್ರಧಾನಿ ಮೋದಿ ಅವರು ತಮ್ಮದೇ ಪ್ರತ್ಯೇಕ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.