ರಾಯಚೂರು: ನಗರದ ಚಿನ್ನದ ಅಂಗಡಿ ಮಾಲೀಕರೊಬ್ಬರಿಗೆ ಮಾಜಿ ಸಿಬಿಐ (CBI) ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಹೆಸರಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ನಡೆದಿದೆ. ಹಣ ನೀಡದೇ ಇದ್ದರೆ ಖಾಸಗಿ ವೀಡಿಯೋ ವೈರಲ್ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ವ್ಯಾಪಾರಿ ಆರೋಪಿಸಿದ್ದಾರೆ.
ಚಿನ್ನದ ವ್ಯಾಪಾರಿ ವಿ.ಸುರೇಶ್ ಅವರಿಗೆ ಕಿಡಿಗೇಡಿಗಳು ಈ ರೀತಿ ಬ್ಲಾಕ್‍ಮೇಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಪರಿಚಿತರು ಕರೆ ಮಾಡಿ ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ಬಳಿಕ ಒಂದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದೇ ಇದ್ದರೆ ತನ್ನ ಬಳಿ ಇರುವ ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದಾನೆ ಎಂದು ಸುರೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ನಾನು ಓದಿದ್ದು 7ನೇ ಕ್ಲಾಸ್ – ಮೋಸಹೋದ ಕಥೆಯನ್ನು ವಿನಯ್ ಗುರೂಜಿಗೆ ಪತ್ರದಲ್ಲಿ ವಿವರಿಸಿದ್ದ ಗೋವಿಂದ ಪೂಜಾರಿ
Advertisement
Advertisement
ಮಾಜಿ ಸಿಬಿಐ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಹೆಸರಲ್ಲಿ ವಂಚನೆಗೆ ಯತ್ನಿಸಲಾಗಿದೆ. ಹಿಂದಿಯಲ್ಲಿ ಮಾತನಾಡಿ ಬೆದರಿಕೆ ಹಾಕಿದ್ದ ಸೈಬರ್ ಕಿರಾತಕರು (Cyber Crime), ಸುಬೋಧ್ ಕುಮಾರ್ ಐಡಿ ಕಾರ್ಡ್ ಹಾಗೂ ಫೋಟೋಗಳನ್ನು ಸಹ ದುರ್ಬಳಕೆ ಮಾಡಿಕೊಂಡು ಹೆದರಿಸಿದ್ದಾರೆ.
Advertisement
Advertisement
ಈ ಸಂಬಂಧ ರಾಯಚೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ?: ಹೆಚ್‍ಡಿಕೆ ಕಿಡಿ
Web Stories