ರಾಮನಗರ: ರಾಜ್ಯದಲ್ಲಿ ಎಂಇಎಸ್ (MES) ಪುಂಡಾಟ ಮುಂದುವರಿದ ಹಿನ್ನೆಲೆ ಎಂಇಎಸ್ ವಿರುದ್ಧ ರಾಮನಗರದಲ್ಲಿ (Ramanagara) ವಾಟಾಳ್ ನಾಗರಾಜ್ (Vatal Nagaraj) ಪ್ರತಿಭಟನೆ ನಡೆಸಿದ್ದಾರೆ.
ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ಎಂಇಎಸ್ ನಿಷೇಧ ಮಾಡುವಂತೆ ಪೊರಕೆ ಹಿಡಿದು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದಲ್ಲಿ ದಿನೇದಿನೇ ಎಂಇಎಸ್ ಪುಂಡಾಟ ಹೆಚ್ಚಾಗಿದೆ. ಬೆಳಗಾವಿಯಲ್ಲಿ ಗ್ರಾ.ಪಂ ಅಧಿಕಾರಿ ಮೇಲೆ ಹಲ್ಲೆ ನಡೆಸಲಾಗಿದೆ. ಕನ್ನಡದಲ್ಲಿ ದಾಖಲಾತಿ ನೀಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದರೆ ಅವರ ಪುಂಡಾಟಕ್ಕೆ ಮಿತಿ ಇಲ್ಲದಂತಾಗಿದೆ. ಪದೇಪದೇ ಕನ್ನಡಿಗರ ಮೇಲೆ ಹಲ್ಲೆ ನಡೆಸುವ ಕೆಲಸವನ್ನು ಎಂಇಎಸ್ ಮಾಡುತ್ತಿದೆ. ಅದಕ್ಕಾಗಿ ಮಾ.22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈಗಾಗಲೇ ಎರಡು ಸಾವಿರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಅಖಂಡ ಕರ್ನಾಟಕ ಬಂದ್ ಸಂಪೂರ್ಣ ಯಶಸ್ವಿಯಾಗಲಿದೆ. ರಾಜ್ಯದ ನೀರಾವರಿ ಯೋಜನೆಗಳು ಶೀಘ್ರ ಜಾರಿಯಾಗಬೇಕು. ಎಂಇಎಸ್ ಸಂಪೂರ್ಣ ನಿಷೇಧ ಮಾಡುವಂತೆ ವಾಟಾಳ್ ನಾಗರಾಜ್ ಒತ್ತಾಯ ಮಾಡಿದರು. ಇದನ್ನೂ ಓದಿ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಯಲು ವಿಶೇಷ ಕ್ರಮ : ಪರಮೇಶ್ವರ್
ಕ್ಷೇತ್ರ ಪುನರ್ ವಿಂಗಡಣೆ ಖಂಡಿಸಿ ತಮಿಳುನಾಡಿನಲ್ಲಿ ದಕ್ಷಿಣ ರಾಜ್ಯಗಳ ಸಭೆ ಹಿನ್ನೆಲೆ, ತಮಿಳುನಾಡು ಸಿಎಂ ನೇತೃತ್ವದ ಸಭೆಯಲ್ಲಿ ಕರ್ನಾಟಕ ಭಾಗಿಯಾಗದಂತೆ ವಾಟಾಳ್ ಒತ್ತಾಯ ಮಾಡಿದ್ದಾರೆ. ತಮಿಳುನಾಡು ಹಿಂದಿನಿಂದಲೂ ಪ್ರತ್ಯೇಕವಾದ ಬಯಸುತ್ತಿದೆ. ಈಗ ಕ್ಷೇತ್ರ ಪುನರ್ ವಿಂಗಡಣೆ ಕುರಿತು ದಕ್ಷಿಣ ರಾಜ್ಯಗಳ ಸಭೆ ಮಾಡುತ್ತಿದೆ. ಆದರೆ ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಬಾರದು. ರಾಜ್ಯದಲ್ಲೇ ಪುನರ್ ವಿಂಗಡಣೆ ಬಗ್ಗೆ ಹೋರಾಟ ಮಾಡಲಿ. ಆದರೆ ತಮಿಳುನಾಡಿನ ಜೊತೆ ಹೋರಾಟಕ್ಕೆ ಹೋಗದಂತೆ ವಾಟಾಳ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಬಣ ವೀರರ ಲಿಂಗಾಯತ ಸಭೆಗಳಿಗೆ ಹೈಕಮಾಂಡ್ ಬ್ರೇಕ್ – ಬಿವೈವಿ ವಿರುದ್ಧ ಅಮಿತ್ ಶಾಗೆ ಲಿಂಬಾವಳಿ ದೂರು