-ಏನಿದು ಬಂಬೂ ಬಿರಿಯಾನಿ? ತಯಾರಿಸುವುದು ಹೇಗೆ?
ಮೈಸೂರು: ದಸರಾ ಎಂದರೆ ಸಾಕು ಮೈಸೂರಲ್ಲಿ ಸ್ವರ್ಗವೇ ಧರೆಗೆ ಇಳಿದಂತೆ ಕಾಣುತ್ತದೆ. ಕಲೆ, ಸಾಹಿತ್ಯ, ಕ್ರೀಡೆ, ಸಿನಿಮಾ, ಮನರಂಜನೆ ದಸರಾದಲ್ಲಿ ನಡೆಯುತ್ತದೆ. ಆದರೆ ಇವುಗಳಲ್ಲಿ ಜನರನ್ನು ಪ್ರಮುಖವಾಗಿ ಆಹಾರ ಮೇಳ ಆಕರ್ಷಣೆ ಮಾಡುತ್ತದೆ. ಈ ಮೇಳದಲ್ಲಿ ಸೋಲಿಗರು ಮಾಡುವ ವಿಶೇಷ ಬಿರಿಯಾನಿಗೆ ಡಿಮ್ಯಾಂಡು.
ಸಾಮಾನ್ಯವಾಗಿ ನಾವು ಧಮ್ ಬಿರಿಯಾನಿ, ದೊನ್ನೆ ಬಿರಿಯಾನಿ, ಆಂಧ್ರ ಬಿರಿಯಾನಿ, ಅಂಬೂರ್ ಬಿರಿಯಾನಿ ಈ ರೀತಿ ಬಿರಿಯಾನಿ ತಿಂದಿದ್ದೇವೆ. ನೀವು ಎಲ್ಲಾದರೂ ಬಂಬೂ ಬಿರಿಯಾನಿ ತಿಂದಿದ್ದಾರಾ? ಹೌದು. ಈಗ ಮೈಸೂರಲ್ಲಿ ಒಂದು ಕಡೆ ದಸರೆಯ ಸುಂದರ ಸೋಬಗು ಮನೆ ಮಾಡಿದರೆ, ಇನ್ನೊಂದು ಕಡೆ ಆಹಾರ ಮೇಳದಲ್ಲಿ ಎಲ್ಲರ ಬಾಯಲ್ಲಿ ಬಂಬೂ ಬಿರಿಯಾನಿಯದೇ ಮಾತು ಕೇಳಿ ಬರುತ್ತದೆ. ವರ್ಷಕ್ಕೆ ಒಂದು ಬಾರಿ ಕಳೆದ ಐದು ವರ್ಷದಿಂದ ಮೈಸೂರು ದಸರಾದ ಆಹಾರ ಮೇಳಕ್ಕೆ ಬಂಬೂ ಬಿರಿಯಾನಿ ಬರುತ್ತಿದೆ. ಮೈಸೂರು ಜಿಲ್ಲೆಯ ನಾಗರಹೊಳೆ ಕಾಡಿನಲ್ಲಿರುವ ಸೋಲಿಗರು ಈ ಬಂಬೂ ಬಿರಿಯಾನಿಯನ್ನು ತಯಾರು ಮಾಡುತ್ತಾರೆ.
Advertisement
Advertisement
ಬಂಬೂ ಬಿರಿಯಾನಿ ಮಾಡೋದು ಹೇಗೆ..?
25 ಮಂದಿ ಜನರನ್ನು ಹೊಂದಿರುವ ಸೋಲಿಗರ ಟೀಮ್ ಮಾಡುವ ಬಂಬೂ ಬಿರಿಯಾನಿಗೆ ಆಹಾರ ಮೇಳದಲ್ಲಿ ಜನರು ಮುಗಿ ಬಿಳುತ್ತಿದ್ದಾರೆ. ಈ ಸೋಲಿಗರು ಮೊದಲಿಗೆ ಟಮೋಟೋ, ಈರುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಚಕ್ಕೆ, ಲವಂಗ ಸೇರಿದಂತೆ ಇನ್ನಿತರ ಮಸಾಲ ಪದಾರ್ಥಗಳನ್ನು ಹಾಕಿ ಮಸಾಲೆ ರುಬ್ಬಿಕೊಳ್ಳುತ್ತಾರೆ. ರುಬ್ಬಿಕೊಂಡ ಮಸಾಲೆ, ಪಲಾವ್ ಎಲೆ, ಕೊತ್ತಂಬರಿ ಸೊಪ್ಪು ಮತ್ತು ನೀರಿನಲ್ಲಿ ನೆನಸದ ಅಕ್ಕಿಯನ್ನು ಒಂದು ಬಿದಿರಿನ ಬೊಂಬಿನಲ್ಲಿ ತುಂಬಲಾಗುತ್ತದೆ. ಇನ್ನೊಂದು ಬೊಂಬಿನಲ್ಲಿ ಶುಚಿಯಾಗಿ ತೊಳೆದ ಚಿಕನ್ ಹಾಗೂ ಮಸಾಲೆಯನ್ನು ತುಂಬಲಾಗುತ್ತದೆ. ಭರ್ತಿ ಮಾಡಿದ ಎರಡು ಬೊಂಬುಗಳನ್ನು ಬೆಂಕಿಗೆ ಹಾಕಲಾಗುತ್ತದೆ. ಬೆಂಕಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬೊಂಬುಗಳನ್ನು ಸುಡಲಾಗುತ್ತದೆ. ನಂತರ ಬೆಂಕಿಯಲ್ಲಿ ಬೆಂದ ಬೊಂಬುಗಳನ್ನು ಹೊರತೆಗೆದು, ಬೊಂಬನ್ನು ಓಪನ್ ಮಾಡಲಾಗುತ್ತದೆ. ನಂತರ ಚಿಕನ್ ಮತ್ತು ಪಲಾವ್‍ನ್ನು ಮಿಶ್ರಣ ಮಾಡಲಾಗುತ್ತದೆ. ಸಿದ್ಧವಾದ ಬೊಂಬು ಬಿರಿಯಾನಿಯನ್ನಾ 160ರೂ. ಕೊಟ್ಟು ತಿನ್ನಲು ಜನ ನಾ ಮುಂದು ತಾ ಮುಂದು ಎಂದು ಮುಗಿ ಬೀಳ್ತಾರೆ.
Advertisement
Advertisement
ದಸರಾ ವೇಳೆಯಲ್ಲಿ ಮೈಸೂರಿಗೆ ಬರುವ ಬಂಬೂ ಬಿರಿಯಾನಿಗೆ ಆಹಾರ ಮೇಳದಲ್ಲಿ ವರ್ಷದಿಂದ ವರ್ಷಕ್ಕೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಆಹಾರ ಪ್ರಿಯರು ಆಹಾರ ಮೇಳಕ್ಕೆ ಬಂದು ಬಂಬೂ ಬಿರಿಯಾನಿಯ ಸ್ವಾದವನ್ನು ಸವಿಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv