ಗಣೇಶೋತ್ಸವವನ್ನು ಆಚರಿಸಲು ಈಗಿನಿಂದಲೇ ಕರ್ನಾಟಕ ಸಿದ್ಧತೆ ನಡೆಸಿದೆ. ಮುಂದಿನ ತಿಂಗಳು ಕೊನೆಯ ವಾರದಲ್ಲಿ ಗಣೇಶ ಹಬ್ಬ ಬರುತ್ತಿದ್ದು, ಗಣಪತಿ ಮೂರ್ತಿ ತಯಾರಕರು ಎರಡು ತಿಂಗಳಿನಿಂದ ಸತತವಾಗಿ ಈ ಕೆಲಸದಲ್ಲಿ ತೊಡಗಿದ್ದಾರೆ. ಅದರಲ್ಲೂ ಗಣಪತಿ ಜೊತೆ ಇರುವ ಪುನೀತ್ ರಾಜ್ ಕುಮಾರ್ ಅವರ ಮೂರ್ತಿಗಳನ್ನು ತಯಾರಿಸಲು ಹಲವು ದಿನಗಳಿಂದ ಬ್ಯುಸಿಯಾಗಿದ್ದಾರಂತೆ. ಅಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆಯಂತೆ.
Advertisement
ಪ್ರತಿ ಗಣೇಶೋತ್ಸವದಲ್ಲೂ ಒಂದೊಂದು ಟ್ರೆಂಡ್ ಸೃಷ್ಟಿಯಾಗುತ್ತದೆ. ಅದಕ್ಕೆ ತಕ್ಕಂತೆ ಗಣಪತಿ ಮೂರ್ತಿಗಳನ್ನು ತಯಾರು ಮಾಡಲಾಗುತ್ತದೆ. ಈ ಹಿಂದೆ ಡಾ.ರಾಜ್ ಕುಮಾರ್, ಅಬ್ದುಲ್ ಕಲಾಂ ಸೇರಿದಂತೆ ಹಲವು ಸಾಧಕರನ್ನು ಗಣಪತಿ ಜೊತೆ ಮೂರ್ತಿ ಮಾಡಿ ಪೂಜಿಸಲಾಗಿದೆ. ಅಲ್ಲದೇ, ಸಿನಿಮಾಗೆ ಸಂಬಂಧಿಸಿದಂತೆ ಹಲವಾರು ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಈ ಬಾರಿ ಅಪ್ಪು ಅವರನ್ನು ಕಳೆದುಕೊಂಡಿದ್ದರಿಂದ ಗಣಪತಿಯ ಜೊತೆ ಅಪ್ಪು ಮೂರ್ತಿಗಳನ್ನು ತಯಾರಿಸಿ ಮಾರಲಾಗುತ್ತಿದೆ. ಇದನ್ನೂ ಓದಿ:ವಿದೇಶದಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ ಯಶ್- ರಾಧಿಕಾ ಪಂಡಿತ್
Advertisement
Advertisement
ಅಪ್ಪು ನಿಧನದ ನಂತರ ಅಭಿಮಾನಿಗಳು ಅವರನ್ನು ದೇವರ ರೂಪದಲ್ಲಿಯೇ ನೋಡುತ್ತಿದ್ದಾರೆ. ನಿತ್ಯವೂ ಅವರ ಸಮಾಧಿಗೆ ಸಾವಿರಾರು ಅಭಿಮಾನಿಗಳು ಬಂದು ನಮಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಅಪ್ಪು ಸಮಾಧಿ ದೇವಸ್ಥಾನವೇ ಆಗಿದೆ. ಅಷ್ಟೊಂದು ಆರಾಧಿಸುವ ಅಭಿಮಾನಿಗಳು ಈ ಬಾರಿ ಗಣಪನ ರೂಪದಲ್ಲಿ ನೆಚ್ಚಿನ ನಟನನ್ನು ನೋಡುತ್ತಿದ್ದಾರೆ.