ಬೆಂಗಳೂರು: ಹೊಸ ವರ್ಷದ ಹೊತ್ತಲ್ಲಿ ಮದ್ಯಕ್ಕೆ ಬಾರಿ ಡಿಮ್ಯಾಂಡ್ ಬಂದಿದೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹೊಸವರ್ಷವೇ ಬಂಡವಾಳವಾಗಿದ್ದು, ಮದ್ಯ ಮಾರಾಟದಲ್ಲಿ ಶೇಕಡಾ 15ರಿಂದ 20ರಷ್ಟು ಹೆಚ್ಚಳವಾಗಿದೆ.
ಅಬಕಾರಿ ಇಲಾಖೆ ನಗರದಲ್ಲಿ ಒಂದೇ ರಾತ್ರಿಗೆ 40 ಕೋಟಿ ರೂಪಾಯಿ ಟಾರ್ಗೆಟ್ ಮಾಡಲಾಗಿದ್ದು, ಐಷಾರಾಮಿ ಬಾರ್, ರೆಸ್ಟೋರೆಂಟ್, ಹೋಟೆಲ್‍ಗಳಿಗೆ ಎರಡೂವರೆಯಿಂದ 3 ಲಕ್ಷ ಜನ ಭೇಟಿ ನೀಡುವ ಸಾಧ್ಯತೆ ಇದೆ. ಇನ್ನು 2016ರಲ್ಲಿ ಡಿಸೆಂಬರ್ 31ರ ಮದ್ಯ ಮಾರಾಟದ ವಹಿವಾಟು 31 ಕೋಟಿ ಇದ್ದರೆ, ಕಳೆದ ವರ್ಷ 12 ಕೋಟಿಗೆ ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 2 ಗಂಟೆವರೆಗೂ ಮದ್ಯ ಮಾರಾಟ ಮಾಡಲು ಬಾರ್ & ರೆಸ್ಟೋರೆಂಟ್ ಮತ್ತು ಹೋಟೆಲ್‍ಗಳಿಗೆ ಅನುಮತಿ ನೀಡಲಾಗಿದೆ. ಅಲ್ಲದೆ ತಡರಾತ್ರಿವರೆಗೂ ಬಸ್ ಸಂಚಾರ ಇರಲಿದೆ.
ಈ ಹಿಂದೆಯೇ ಮಧ್ಯರಾತ್ರಿ 2 ಗಂಟೆವರೆಗೆ ಬಾರ್ ತೆರೆಯಲು ಅವಧಿಯನ್ನು ವಿಸ್ತರಿಸಿ ಅನುಮತಿ ನೀಡಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶಿಸಿದ್ದರು. ಡಿಸೆಂಬರ್ 31ರ ಮಧ್ಯರಾತ್ರಿ 2 ಗಂಟೆ ತನಕ ಬಾರ್ ಗಳು ಓಪನ್ ಆಗಿರಲು ಪೊಲೀಸರಿಂದ ಅನುಮತಿ ಪಡೆಯಬೇಕಾಗುತ್ತದೆ. ಸಿಎಲ್2 ಹೊರತು ಪಡಿಸಿ ಉಳಿದೆಲ್ಲಾ ಬಾರ್, ರಿಕ್ರಿಯೇಷನ್ ಕ್ಲಬ್ ಗಳು ಮತ್ತು ರೆಸ್ಟೋರೆಂಟ್‍ಗಳು ಮೊದಲೇ ಅನುಮತಿ ಪಡೆಯಬೇಕೆಂದು ನಿಬಂಧನೆ ವಿಧಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv