ಪಣಜಿ: ದಕ್ಷಿಣ ಗೋವಾದಲ್ಲಿ ಕೋವಿಡ್ ರೂಪಾಂತರಿ ಡೆಲ್ಟಾ ಪ್ಲಸ್ ಮೊದಲ ಪ್ರಕರಣ ಪತ್ತೆಯಾಗಿದ್ದು, ಮತ್ತೆ ಕೊವೀಡ್ ಆತಂಕ ಹೆಚ್ಚಾಗಿದೆ.
ಗೋವಾದಲ್ಲಿ ಕೋವಿಡ್ ಸೋಂಕು ದೃಢಪಟ್ಟ ಹಾಗೂ ರೂಪಾಂತರಿ ಕೋವಿಡ್ ಸೋಂಕಿನ ಶಂಕಿತರ ಮಾದರಿಯನ್ನ ತಪಾಸಣೆಗಾಗಿ ಗೋವಾ ಆರೋಗ್ಯ ಇಲಾಖೆಯು ಪುಣೆಯ ಲ್ಯಾಬ್‍ಗೆ ಕಳುಹಿಸಿತ್ತು. ಈ ಪೈಕಿ ದಕ್ಷಿಣ ಗೋವಾದಿಂದ ಪುಣೆಗೆ ಕಳುಹಿಸಲಾಗಿದ್ದ, ಕೋವಿಡ್ ಸೋಂಕಿತ ವ್ಯಕ್ತಿಗೆ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ತಗುಲಿರೋದು ದೃಢಪಟ್ಟಿದೆ. ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆಯಾಗಿದೆಯಾದರೂ ಸದ್ಯ ಪತ್ತೆಯಾಗಿರುವ ಕೋವಿಡ್ ಸೋಂಕಿನ ರೂಪಾಂತರಿಯಿಂದಾಗಿ ಆತಂಕ ಸೃಷ್ಟಿ ಮಾಡಿದೆ.
Advertisement
Advertisement
ಕೋವಿಡ್ ರೂಪಾಂತರಿ ಸೋಂಕು ತಪಾಸಣೆಗಾಗಿ ಗೋವಾದಲ್ಲಿ ಸೋಂಕಿತರ ಮಾದರಿ ಸಂಗ್ರಹಿಸಿ ಪುಣೆಯ ಲ್ಯಾಬ್ ಗೆ ಕಳುಹಿಸಿ ಅಲ್ಲಿಂದ ತಪಾಸಣಾ ವರದಿ ಬರಲು ಹೆಚ್ಚಿನ ಸಮಯ ಹಿಡಿಯುತ್ತದೆ. ಅಷ್ಟು ದಿನಗಳಲ್ಲಿ ಸೋಂಕಿತ ವ್ಯಕ್ತಿಯಿಂದ ಸೋಂಕು ಬೇರೆಯವರಿಗೆ ಹರಡುವ ಸಾಧ್ಯತೆಯಿರುತ್ತದೆ. ಗೋವಾದಲ್ಲಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತ ವ್ಯಕ್ತಿ ಹಲವರಿಗೆ ಹರಡಿರುವ ಆತಂಕ ಸಹ ಎದುರಾಗಿದೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ – ಮೇಕೆದಾಟು ಯೋಜನೆಗೆ ಕೇರಳ, ಪುದುಚೆರಿಯಿಂದಲೂ ಕ್ಯಾತೆ