ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್(Pervez Musharraf) ಸೇರಿದಂತೆ ಹಲವು ಗಣ್ಯರ ಇಮೇಲ್ ಹ್ಯಾಕ್ ಮಾಡಿದ್ದ ಭಾರತದ ಟೆಕ್ಕಿಯನ್ನು Deloitte ಕಂಪನಿ ಕೆಲಸದಿಂದ ವಜಾ ಮಾಡಿದೆ.
ಭಾರತದ ಕೆಲ ಹ್ಯಾಕರ್ಸ್‌ಗಳು WhiteInt ಹೆಸರಿನಲ್ಲಿ ಪ್ರಸಿದ್ಧ ವ್ಯಕ್ತಿಗಳ ಖಾಸಗಿ ಇಮೇಲ್‌ಗಳನ್ನು ಹ್ಯಾಕ್(Hack) ಮಾಡುತ್ತಿದ್ದಾರೆ ಎಂದು ಸಂಡೇ ಟೈಮ್ಸ್ ತನಿಖಾ ವರದಿ ಮಾಡಿತ್ತು. ಈ ವರದಿಯ ಪ್ರಕಟವಾದ ಬೆನ್ನಲ್ಲೇ ಡೆಲೊಯಿಟ್ ತನ್ನ ಉದ್ಯೋಗಿ ಅದಿತ್ಯಾ ಜೈನ್‌ನನ್ನು ವಜಾ ಮಾಡಿದೆ.
ಅದಿತ್ಯಾ ಜೈನ್ ಈ ವರ್ಷದ ಫೆಬ್ರವರಿಯಲ್ಲಿ ಡೆಲೊಯಿಟ್ ಕಂಪನಿಯನ್ನು ಸೇರಿದ್ದು ಸೈಬರ್ ಯುನಿಟ್‌ನಲ್ಲಿ(Cyber Unit) ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ. ಈ ಕಂಪನಿ ಸೇರುವುದಕ್ಕೂ ಮೊದಲೂ ದೊಡ್ಡ ಕಂಪನಿಯಲ್ಲಿ ಸೈಬರ್ ಯುನಿಟ್‌ನಲ್ಲಿ ಕೆಲಸ ಮಾಡಿದ್ದ. ಇದನ್ನೂ ಓದಿ: ಭಾರತದಲ್ಲಿ ಉದ್ಯೋಗಿಗಳ ವಜಾ – ಟ್ವಿಟ್ಟರ್ ನಡೆಯನ್ನು ಖಂಡಿಸಿದ ಕೇಂದ್ರ
WhiteInt ಹ್ಯಾಕಿಂಗ್ ತಂಡ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್, ಸ್ವಿಸ್ ಅಧ್ಯಕ್ಷ ಇಗ್ನಾಜಿಯೊ ಕ್ಯಾಸಿಸ್, ಯುಕೆಯ ಮಾಜಿ ಚಾನ್ಸೆಲರ್ ಫಿಲಿಪ್ ಹ್ಯಾಮಂಡ್, BMW ಸಹ-ಮಾಲೀಕ ಸ್ಟೀಫನ್ ಕ್ವಾಂಡ್ಟ್, ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ, ಇಂಗ್ಲೆಂಡ್‌ನಲ್ಲಿರುವ ಶ್ರೀಮಂತ ವ್ಯಕ್ತಿಗಳ ಗೌಪ್ಯ ಮಾಹಿತಿಯನ್ನು ಲೀಕ್ ಮಾಡಿತ್ತು.
ಟೆಕ್ ಸಿಟಿ ಗುರುಗ್ರಾಮದ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಲ್ಲಿ ಈ ತಂಡ ಕೆಲಸ ಮಾಡುತ್ತಿತ್ತು. ಈ ತಂಡ ಕಳೆದ 7 ವರ್ಷದಿಂದ ಕೃತ್ಯ ಎಸಗುತ್ತಿತ್ತು. ಅದಿತ್ಯಾ ಜೈನ್ ಈ ತಂಡದ ಮಾಸ್ಟರ್ ಮೈಂಡ್ ಆಗಿದ್ದು, ದುರುದ್ದೇಶಪೂರಿತ ಸಾಫ್ಟ್‌ವೇರ್ ಕಳುಹಿಸಿ ಸಂತ್ರಸ್ತರ ಕ್ಯಾಮೆರಾ, ಮೈಕ್ರೋಫೋನ್ ಹ್ಯಾಕ್ ಮಾಡಿ ಆಡಿಯೋ, ವೀಡಿಯೋವನ್ನು ಸೆರೆಹಿಡಿಯುತ್ತಿತ್ತು.