ಚಿಕ್ಕಮಗಳೂರು: ಇಲ್ಲಿನ ಸರ್ಕಾರಿ ಹಾಸ್ಟೆಲ್‌ನಲ್ಲಿ (Government Hostel) ಪಿಯುಸಿ ವಿದ್ಯಾರ್ಥಿನಿಗೆ (PUC Student) ಹೆರಿಗೆ ಆಗಿರುವ ಘಟನೆ ನಡೆದಿದ್ದು, ದಲಿತ ಸಂಘಟನೆಗಳು (Dalits Organization) ಹಾಸ್ಟೆಲ್ ವಾರ್ಡನ್ ಹಾಗೂ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿವೆ.
Advertisement
ನಗರದ ಬೇಲೂರು ರಸ್ತೆಯಲ್ಲಿ ಸುಮಾರು 200 ಹೆಣ್ಣು ಮಕ್ಕಳಿರುವ ಪಿಯುಸಿ ಹಾಸ್ಟೆಲ್‌ನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಓರ್ವ ವಿದ್ಯಾರ್ಥಿನಿಗೆ ಹೆರಿಗೆ ಆಗಿದೆ ಎಂದು ದಲಿತ ಸಂಘಟನೆಗಳು ದೂರಿವೆ. ಪ್ರಕರಣವನ್ನ ಹೊರಬರಲು ಬಿಡದೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ (Social Welfare Department) ಅಧಿಕಾರಿ, ಹಾಸ್ಟೆಲ್ ವಾರ್ಡನ್ ಮುಚ್ಚಿ ಹಾಕಿದ್ದಾರೆ. ವಿಷಯ ತಿಳಿದ ಕೂಡಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಕೇಳಿದ್ರೆ ಆಕೆ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಳು, ಗೊತ್ತಾಗಿಲ್ಲ. ಹಾಗಾಗಿ, ಆಕೆಯನ್ನ ಮನೆಗೆ ಕಳಿಸಿ ಹುಡುಗನ ಮೇಲೆ ಪೋಕ್ಸೋ ಕೇಸ್ (POCSO Case) ದಾಖಲಿಸಿದ್ದೇವೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಹೆಚ್ಚಿನ ಸಮಯ ಫಿಕ್ಸ್? – ಮಧ್ಯರಾತ್ರಿ 2 ಗಂಟೆವರೆಗೂ ಅವಕಾಶ ಸಾಧ್ಯತೆ
Advertisement
Advertisement
ಇಷ್ಟಕ್ಕೆ ಸುಮ್ಮನಾಗದ ದಲಿತ ಮುಖಂಡರು, ನಮ್ಮ ಮಕ್ಕಳನ್ನ ಹಾಸ್ಟೆಲ್‌ಗೆ ಕಳಿಸೋದು ಏಕೆ? ಪೋಷಕರು ಯಾವ ಧೈರ್ಯದ ಮೇಲೆ ಮಕ್ಕಳನ್ನ ಹಾಸ್ಟೆಲ್‌ಗೆ ಸೇರಿಸುತ್ತಾರೆ? ಇಬ್ಬರು ವಾರ್ಡನ್‌ಗಳು ಏನು ಮಾಡುತ್ತಿದ್ದರು? ಸರ್ಕಾರಿ ಹಾಸ್ಟೆಲ್‌ನಲ್ಲೇ ರಕ್ಷಣೆ ಇಲ್ಲ ಅಂದ ಮೇಲೆ ಮಕ್ಕಳನ್ನ ಹೇಗೆ ಕಳಿಸೋದು? ಊಟ ಹಾಕಿ, ಬಿಲ್ ಮಾಡ್ಕೊಂಡು ದುಡ್ ತೆಗೆದುಕೊಳ್ಳುವುದು ಮಾತ್ರ ವಾರ್ಡನ್ ಕೆಲಸನಾ? ಒಂಭತ್ತು ತಿಂಗಳು ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಯಾರಿಗೂ ಗೊತ್ತಾಗದಂತೆ ಅದ್ಹೇಗೆ ಇದ್ದಳು? ಸಹಪಾಠಿಗಳು, ಅಡುಗೆಯವರು, ಕಾಲೇಜಿನಲ್ಲಿ ಶಿಕ್ಷಕರು, ವಾರ್ಡನ್‌ಗಳಿಗೆ ಒಂಚೂರು ಅನುಮಾನ ಬಾರದಂತೆ 9 ತಿಂಗಳು ಯಾಮಾರಿಸಿದಳಾ ಎಂದು ಪ್ರಶ್ನಿಸಿದ್ದಾರೆ.
Advertisement
ಹಾಸ್ಟೆಲ್‌ನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ತಪಾಸಣೆ ಮಾಡಬೇಕು. ಅದನ್ನ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದನ್ನ ಮಾಡಿದ್ದರೆ ಈ ಪ್ರಕರಣ ಆಗಲೇ ಹೊರಗೆ ಬರುತ್ತಿತ್ತು. ಆದರೆ ಒಂಭತ್ತು ತಿಂಗಳು ಮುಗಿದು ಹಾಸ್ಟೆಲ್‌ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ ಅಂದರೆ ಒಳಗೆ ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ವಾರ್ಡನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ – ಬಿಬಿಎಂಪಿಯಿಂದ ವರ್ಷಕ್ಕೆ ಕೋಟಿ, ಕೋಟಿ ರೂ. ಖರ್ಚು!
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೂ ಮಹಿಳೆಯಾಗಿದ್ದಾರೆ. ವಾರ್ಡನ್ ಸಹ ಮಹಿಳೆಯಾಗಿದ್ದು ಏನು ಮಾಡ್ತಿದ್ರು? ಇದು ಅವರಿಗೆ ಗೊತ್ತಿದ್ದೇ ಆಯ್ತಾ ಅಥವಾ ಗೊತ್ತಿಲ್ಲದೇ ಆಯ್ತಾ? ಮಕ್ಕಳ ಭವಿಷ್ಯದ ಬಗ್ಗೆ ಬೇಜವಾಬ್ದಾರಿ ಇರುವ ಇಂತಹ ವಾರ್ಡನ್‌ಗಳ ವಿರುದ್ಧ ಕೇಸ್ ದಾಖಲಿಸಿ ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.