ಬೆಂಗಳೂರು: ಹಿಟ್ ಅಂಡ್ ರನ್‌ಗೆ (Hit&Run) ಡೆಲಿವರಿ ಬಾಯ್ (Delivery Boy) ಬಲಿಯಾಗಿರುವ ಘಟನೆ ಕೆಆರ್ ಪುರಂನ (KR Puram) ಭಟ್ಟರಹಳ್ಳಿ ಸಿಗ್ನಲ್ ಬಳಿ ನಡೆದಿದೆ.
ನೇಪಾಳ ಮೂಲದ ಸುರೇಂದರ್ ಬಹದ್ದೂರ್ (38) ಮೃತ ದುರ್ದೈವಿ. ಇಂದು ಬೆಳಗ್ಗೆ 3:30ರ ಸುಮಾರಿಗೆ ಅಪಘಾತ ನಡೆದಿದೆ. ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸುರೇಂದರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಡೆಲಿವರಿ ಕೊಡಲು ತೆರಳುತ್ತಿದ್ದ ವೇಳೆ ಕಾರೊಂದು ಸ್ಕೂಟಿಗೆ ಗುದ್ದಿ ಎಸ್ಕೇಪ್ ಆಗಿದೆ. ಅಪಘಾತದ ಪರಿಣಾಮ ಸುರೇಂದರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆಗಳ ಗುಂಡಿಗೆ ಐವರು ಮಹಿಳೆಯರು ಸೇರಿ 17 ಮಂದಿ ನಕ್ಸಲರು ಬಲಿ
ಹಿಟ್ ಅಂಡ್ ರನ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಕೆಆರ್ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಅಪಘಾತ ಎಸಗಿ ಎಸ್ಕೆಪ್ ಆಗಿರುವ ಕಾರು ಚಾಲಕನಿಗಾಗಿ ಪೋಲಿಸರು ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾಯಿ ಹುಡುಕಲು ಹೋಗಿದ್ದ ಬಾಲಕ ರೈಲು ಡಿಕ್ಕಿಯಾಗಿ ಸಾವು

