ಚಿಕನ್ ಎಂದರೆ ನಾನ್ವೆಜ್ ಪ್ರಿಯರಿಗೆ ಪಂಚಪ್ರಾಣ. ಆದರೆ ಅದನ್ನು ವಿಧವಿಧವಾಗಿ ತಯಾರಿಸುವುದು ಎಲ್ಲರಿಗೂ ಸವಾಲು. ನಾವಿಂದು ಚಿಕನ್ ಕೀಮಾ ಪಕೋಡಾ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ರುಚಿರುಚಿಯಾಗಿ ಇದನ್ನು ಒಮ್ಮೆ ನೀವು ಕೂಡಾ ಮನೆಯಲ್ಲಿ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಮೂಳೆಗಳಿಲ್ಲದ ಚಿಕನ್ ಕೀಮಾ – 250 ಗ್ರಾಂ
ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಶುಂಠಿ ಪೇಸ್ಟ್ – 1 ಟೀಸ್ಪೂನ್
ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಗರಂ ಮಸಾಲೆ – ಅರ್ಧ ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ನಿಂಬೆ ರಸ – 2 ಟೀಸ್ಪೂನ್
ಕಡಲೆ ಹಿಟ್ಟು – 2 ಟೀಸ್ಪೂನ್
ಮೈದಾ ಹಿಟ್ಟು – 2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಸಖತ್ ಟೇಸ್ಟಿಯಾದ ಚಿಕನ್ ಗೀ ರೋಸ್ಟ್ ಮಾಡಿ ನೋಡಿದ್ದೀರಾ?
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಅನ್ನು ತೆಗೆದುಕೊಂಡು, ಅದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಕರಿಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು, ಗರಂ ಮಸಾಲೆ, ಕೊತ್ತಂಬರಿ ಪುಡಿ, ನಿಂಬೆ ರಸ ಹಾಕಿ ಮಿಶ್ರಣ ಮಾಡಿ.
* ಈಗ ಚಿಕನ್ ಮಿಶ್ರಣಕ್ಕೆ 1 ಗಂಟೆ ವಿಶ್ರಾಂತಿ ನೀಡಿ.
* ಈ ನಡುವೆ ಇನ್ನೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಮೈದಾ ಹಿಟ್ಟು, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪು ಹಾಕಿ, ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕಿಡಿ.
Advertisement
* 1 ಗಂಟೆಯ ಬಳಿಕ ಚಿಕನ್ ಮಿಶ್ರಣವನ್ನು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಡೀಪ್ ಫ್ರೈಗೆ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ.
* ಚಿಕನ್ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು, ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಎಣ್ಣೆಯಲ್ಲಿ ಬಿಟ್ಟು ಕರಿಯಿರಿ.
* ಚಿಕನ್ ಚೆನ್ನಾಗಿ ಬೆಂದು, ಪಕೋಡಾ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯು ಪೇಪರ್ ಮೇಲೆ ಹರಡಿ.
* ಇದೀಗ ಚಿಕನ್ ಕೀಮಾ ಪಕೋಡಾ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಚಹಾದೊಂದಿಗೆ ಮಾಡಿ ಸವಿಯಿರಿ ರುಚಿರುಚಿಯಾದ ಗೆಣಸಿನ ಕಟ್ಲೆಟ್
Live Tv