ಆಮ್ಲೆಟ್ ಅನ್ನು ಮೊಟ್ಟೆಯಿಂದಲೇ ಮಾಡಲಾಗುತ್ತದೆ. ಆದರೆ ನಾವಿಂದು ಹೇಳಿಕೊಡುತ್ತಿರುವ ಬ್ರೆಡ್ ಆಮ್ಲೆಟ್‌ಗೆ ಮೊಟ್ಟೆಯ ಅಗತ್ಯವೇ ಇಲ್ಲ. ನೀವು ಆಮ್ಲೆಟ್‌ನ ಸ್ವಾದವನ್ನು ವೆಜ್‌ನಲ್ಲಿ ಹುಡುಕುತ್ತಿದ್ದೀರಿ ಎಂದಾದರೆ ನೀವು ಇದನ್ನು ಒಮ್ಮೆ ಟ್ರೈ ಮಾಡಲೇ ಬೇಕು. ಮೊಟ್ಟೆಯಿಲ್ಲದೇ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್ (Veg Bread Omelette) ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಹಿಟ್ಟು ತಯಾರಿಸಲು:
ಕಡಲೆ ಹಿಟ್ಟು – 1 ಕಪ್
ಮೈದಾ – ಕಾಲು ಕಪ್
ಬೇಕಿಂಗ್ ಪೌಡರ್ – ಮುಕ್ಕಾಲು ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ನೀರು – ಒಂದು ಕಾಲು ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 1
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
ಹುರಿಯಲು:
ಬೆಣ್ಣೆ
ಕೊತ್ತಂಬರಿ
ಬ್ರೆಡ್ ಸ್ಲೈಸ್ – 5 ಇದನ್ನೂ ಓದಿ: ಚಹಾದೊಂದಿಗೆ ಸವಿಯಿರಿ ಗೋಡಂಬಿ ಬಿಸ್ಕತ್ತು
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಮೈದಾ, ಬೇಕಿಂಗ್ ಪೌಡರ್, ಅರಿಶಿನ ಮತ್ತು ಉಪ್ಪು ಹಾಕಿ, ಅದಕ್ಕೆ ಒಂದು ಕಾಲು ಕಪ್ ನೀರು ಹಾಕಿ ಮಿಶ್ರಣ ಮಾಡಿ.
* ಹಿಟ್ಟು ರೂಪುಗೊಂಡ ಬಳಿಕ ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ, ಕೆಂಪು ಮೆಣಸಿನ ಪುಡಿ ಮತ್ತು ಕರಿಮೆಣಸಿನ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಒಂದು ಟೀಸ್ಪೂನ್ ಬೆಣ್ಣೆ ಮತ್ತು 1 ಟೀಸ್ಪೂನ್ ಕೊತ್ತಂಬರಿ ಹಾಕಿ ಏಕರೂಪದಲ್ಲಿ ಹರಡಿ.
* ಈಗ ಅದರ ಮೇಲೆ 1 ಸೌಟು ತಯಾರಿಸಿಟ್ಟ ಹಿಟ್ಟನ್ನು ಸುರಿದು, ಏಕರೂಪವಾಗಿ ಹರಡಿ.
* ಒಂದು ನಿಮಿಷ ಆಮ್ಲೆಟ್ ಕಾದ ಬಳಿಕ ಅದರ ಮೇಲೆ ಬ್ರೆಡ್ ಸ್ಲೈಸ್ ಇರಿಸಿ ಬೇಯಿಸುವುದನ್ನು ಮುಂದುವರಿಸಿ.
* ಈಗ ಆಮ್ಲೆಟ್ ಅನ್ನು ಮಗುಚಿ ಹಾಕಿ, ಬ್ರೆಡ್ ಗರಿಗರಿಯಾಗುವವರೆಗೆ ಹುರಿಯಿರಿ.
* ಈಗ ವೆಜ್ ಬ್ರೆಡ್ ಆಮ್ಲೆಟ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಮಡಚಿ, ಕತ್ತರಿಸಿಕೊಳ್ಳಿ.
* ವೆಜ್ ಬ್ರೆಡ್ ಆಮ್ಲೆಟ್ ಇದೀಗ ತಯಾರಾಗಿದ್ದು, ಟೊಮೆಟೊ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?