ಆಲೂ ಪರೋಟಾ ಅತ್ಯಂತ ಫೇಮಸ್ ಹಾಗೂ ಸುಲಭವಾಗಿ ಮಾಡಬಹುದಾದ ಆಹಾರ. ಪಂಜಾಬ್ ಇದರ ಮೂಲವಾಗಿದ್ರೂ ದೇಶಾದ್ಯಂತ ಇದನ್ನು ಮಾಡಿ ಸವಿಯಲಾಗುತ್ತದೆ. ನಾವಿಂದು ಆಲೂ ಪರೋಟಾಗೆ ರುಚಿಕರ ಹಾಗೂ ನಾನ್‌ವೆಜ್ ಟ್ವಿಸ್ಟ್ ನೀಡಲಿದ್ದೇವೆ. ಚಿಕನ್ ಬಳಸಿ ಆಲೂ ಪರೋಟಾವನ್ನು ಇನ್ನಷ್ಟು ಟೇಸ್ಟಿಯಾಗಿ ಮಾಡಿ ನೀವೂ ಒಮ್ಮೆ ರುಚಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ – 250 ಗ್ರಾಂ
ಆಲೂಗಡ್ಡೆ – 2
ಮೈದಾ – 1 ಕಪ್
ಗೋಧಿ ಹಿಟ್ಟು – 1 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಹಸಿರು ಮೆಣಸಿನಕಾಯಿ – 3
ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಚಿಟಿಕೆ
ಕರಗಿದ ಬೆಣ್ಣೆ ಅಥವಾ ತುಪ್ಪ – ಪರೋಟಾ ಕಾಯಿಸಲು ಇದನ್ನೂ ಓದಿ: ರುಚಿರುಚಿಯಾದ ಬಾಂಬೆ ಬಟರ್ ಚಿಕನ್ ಹೀಗೆ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚಿಕನ್ ಅನ್ನು ನೀರಿನಲ್ಲಿ ಹಾಕಿ ಚಿಟಿಕೆ ಉಪ್ಪು ಹಾಗೂ ಕರಿಮೆಣಸಿನಪುಡಿ ಸೇರಿಸಿ ಕುದಿಸಿ.
* ಚಿಕನ್ ಬೆಂದ ಬಳಿಕ ನೀರಿನಿಂದ ಬೇರ್ಪಡಿಸಿ, ಚಿಕ್ಕ ಚಿಕ್ಕ ಚೂರುಗಳಾಗಿ ಮಾಡಿ, ಪಕ್ಕಕ್ಕಿಡಿ.
* ಒಂದು ಪಾತ್ರೆಯಲ್ಲಿ ಮೈದಾ ಹಾಗೂ ಗೋಧಿ ಹಿಟ್ಟನ್ನು ಬೆರೆಸಿ, ಚಿಟಿಕೆ ಉಪ್ಪು, 2 ಟೀಸ್ಪೂನ್ ಎಣ್ಣೆ ಹಾಗೂ ಅಗತ್ಯಕ್ಕೆ ತಕ್ಕಂತೆ ಬೆಚ್ಚಗಿನ ನೀರು ಸೇರಿಸಿ ಮಿಶ್ರಣ ಮಾಡಿ, ಮೃದುವಾದ ಹಿಟ್ಟನ್ನು ತಯಾರಿಸಿ. ಬಳಿಕ ಅದಕ್ಕೆ ಮುಚ್ಚಳ ಮುಚ್ಚಿ, ವಿಶ್ರಾಂತಿಗೆ ಪಕ್ಕಕ್ಕೆ ಇಡಿ.
* ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬೆರೆಸಿ.
* ಅದಕ್ಕೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಸೇರಿಸಿ ಹುರಿದುಕೊಳ್ಳಿ.
* ನಂತರ ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಟೀಸ್ಪೂನ್ ನೀರು ಸೇರಿಸಿ ಮಿಶ್ರಣ ಮಾಡಿ.
* ಈಗ ಚಿಕನ್ ಸೇರಿಸಿ, ಸುಮಾರು 15-20 ನಿಮಿಷಗಳ ಕಾಲ ಮಸಾಲೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ
* ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಿ, ಮಿಶ್ರಣ ಮಾಡಿ, ಉರಿಯನ್ನು ಆಫ್ ಮಾಡಿ, ಆರಲು ಪಕ್ಕಕ್ಕಿಡಿ.
* ಈಗ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ಸುಲಿದು, ಸ್ವಲ್ಪ ಉಪ್ಪು ಹಾಗೂ ಬೆಣ್ಣೆಯೊಂದಿಗೆ ಮ್ಯಾಶ್ ಮಾಡಿ.
* ಚಿಕನ್ ಮಿಶ್ರಣಕ್ಕೆ ಹಿಸುಕಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಈಗ ಹಿಟ್ಟನ್ನು ಪರೋಟಾಗೆ ಬೇಕಾಗುವಷ್ಟು ದೊಡ್ಡ ಗಾತ್ರದ ಉಂಡೆಗಳನ್ನಾಗಿ ಮಾಡಿ, ರೋಲಿಂಗ್ ಪಿನ್ ಬಳಸಿ ಸ್ವಲ್ಪ ಸುತ್ತಿಕೊಳ್ಳಿ.
* ಅದರ ನಡುವೆ ಸಾಕಷ್ಟು ಆಲೂ ಹಾಗೂ ಚಿಕನ್ ಮಿಶ್ರಣವನ್ನು ತುಂಬಿ, ಹಿಟ್ಟನ್ನು ಮತ್ತೆ ದುಂಡಗೆ ಮಡಚಿ, ಮತ್ತೆ ರೋಲಿಂಗ್ ಪಿನ್ ಸಹಾಯದಿಂದ ಸುತ್ತಿಕೊಳ್ಳಿ.
* ಉಳಿದ ಹಿಟ್ಟು ಹಾಗೂ ಚಿಕನ್ ಮಿಶ್ರಣವನ್ನು ಇದೇ ರೀತಿ ಮಾಡುವುದನ್ನು ಮುಂದುವರಿಸಿ.
* ಈಗ ತವಾ ಬಿಸಿ ಮಾಡಿ, ಅದರಲ್ಲಿ ಒಂದೊಂದೇ ಪರೋಟಾವನ್ನು ಇರಿಸಿ, ಸ್ವಲ್ಪ ಕರಗಿದ ತುಪ್ಪ ಅಥವಾ ಬೆಣ್ಣೆ ಹಚ್ಚಿ, ಎರಡೂ ಬದಿಗಳಲ್ಲಿ ಬೇಯಿಸಿಕೊಳ್ಳಿ.
* ಉಳಿದ ಪರೋಟಾಗಳನ್ನೂ ಇದೇ ರೀತಿ ಮಾಡಿ.
* ಇದೀಗ ಟೇಸ್ಟಿ ಚಿಕನ್ ಆಲೂ ಪರೋಟಾ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಉಳಿದ ದೋಸೆ ಹಿಟ್ಟು ಇದ್ದಾಗ ಕೀಮಾ ದೋಸೆ ಖಂಡಿತಾ ಟ್ರೈ ಮಾಡಿ
Advertisement
Web Stories