ಪಾರ್ಟಿ ಅಥವಾ ಯಾವುದೇ ಕಾರ್ಯಕ್ರಮಗಳಲ್ಲಿ ಸ್ಟಾರ್ಟರ್‌ಗಳಿಂದಲೇ ಊಟ ಪ್ರಾರಂಭವಾಗುತ್ತದೆ. ಕರಿದ ಅಥವಾ ಡ್ರೈ ಅಡುಗೆಗಳು ಇಡೀ ಊಟದ ಮಜವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೇವಲ ರೆಸ್ಟೊರೆಂಟ್‌ಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲೇ ಏಕೆ? ನೀವು ಇಂತಹ ರುಚಿಯಾದ ಸ್ಟಾರ್ಟರ್ ರೆಸಿಪಿಗಳನ್ನು ಮನೆಯಲ್ಲಿಯೂ ತುಂಬಾ ಸಿಂಪಲ್ ಆಗಿ ಮಾಡಬಹುದು. ನಾವಿಂದು ಅಂತಹುದೇ ಸೂಪರ್ ರೆಸಿಪಿಯೊಂದನ್ನು ಹೇಳಿಕೊಡುತ್ತೇವೆ. ಬೇಬಿ ಕಾರ್ನ್ ಪೆಪ್ಪರ್ ಫ್ರೈ (Baby Corn Pepper Fry) ಮಾಡೋದು ತುಂಬಾ ಸುಲಭವಾಗಿದ್ದು, ನೀವೂ ಇದನ್ನು ಮನೆಯಲ್ಲಿ ಟ್ರೈ ಮಾಡಬಹುದು.
Advertisement
ಬೇಕಾಗುವ ಪದಾರ್ಥಗಳು:
ಮೈದಾ – 2 ಟೀಸ್ಪೂನ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಕತ್ತರಿಸಿದ ಕರಿಬೇವಿನ ಎಲೆ – ಕೆಲವು
ಹೆಚ್ಚಿದ ಬೇಬಿ ಕಾರ್ನ್ – 200 ಗ್ರಾಂ
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
ಒಗ್ಗರಣೆಗೆ:
ಎಣ್ಣೆ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 5
ಕತ್ತರಿಸಿದ ಈರುಳ್ಳಿ – 1
ಸ್ಪ್ರಿಂಗ್ ಆನಿಯನ್ – 2 ಚಿಗುರು
ಹೆಚ್ಚಿದ ಕ್ಯಾಪ್ಸಿಕಮ್ – 1
ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಉಳಿದ ಬ್ರೆಡ್‌ನಿಂದ ಮಾಡಿ ರುಚಿಕರ ವಡೆ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್ ತೆಗೆದುಕೊಂಡು, ಮೈದಾ, ಕಾರ್ನ್ ಫ್ಲೋರ್, ಕರಿ ಮೆಣಸಿನಪುಡಿ, ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ದಪ್ಪ ಹಿಟ್ಟನ್ನಾಗಿ ಕಲಸಿಕೊಳ್ಳಿ.
* ಈಗ ಬೇಬಿ ಕಾರ್ನ್ ಅನ್ನು ಹಿಟ್ಟಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಕರಿಬೇವಿನ ಎಲೆಗಳನ್ನು ಹಿಟ್ಟಿನ ಮಿಶ್ರಣಕ್ಕೆ ಹಾಕಿ.
* ಈಗ ಡೀಪ್ ಫ್ರೈಗೆ ಎಣ್ಣೆಯನ್ನು ಕಡಾಯಿಯಲ್ಲಿ ಹಾಕಿ ಬಿಸಿ ಮಾಡಿ. ಬೇಬಿ ಕಾರ್ನ್‌ಗಳನ್ನು ಒಂದೊಂದಾಗಿಯೇ ಬಿಸಿ ಎಣ್ಣೆಯಲ್ಲಿ ಬಿಟ್ಟು ಫ್ರೈ ಮಾಡಿಕೊಳ್ಳಿ.
* ಬೇಬಿ ಕಾರ್ನ್ ಚೆನ್ನಾಗಿ ಫ್ರೈ ಆದ ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಈಗ ಒಂದು ಬಾಣಲೆಗೆ 1 ಟೀಸ್ಪೂನ್ ಎಣ್ಣೆ ಹಾಕಿ, ಬಿಸಿ ಮಾಡಿ.
* ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್, ಕ್ಯಾಪ್ಸಿಕಮ್ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.
* ಕರಿ ಮೆಣಸಿನಪುಡಿ, ಉಪ್ಪು ಸೇರಿಸಿ ಬಳಿಕ ಡೀಪ್ ಫ್ರೈ ಮಾಡಿಟ್ಟ ಬೇಬಿ ಕಾರ್ನ್‌ಗಳನ್ನು ಹಾಕಿ ಚೆನ್ನಾಗಿ ಟಾಸ್ ಮಾಡಿ.
* ಕೊನೆಯಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ, ಉರಿಯನ್ನು ಆಫ್ ಮಾಡಿ.
* ಇದೀಗ ಸಖತ್ ರುಚಿಯಾದ ಬೇಬಿ ಕಾರ್ನ್ ಪೆಪ್ಪರ್ ಫ್ರೈ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಬಾಳೆಕಾಯಿಯ ತವಾ ಫ್ರೈ – ಚಹಾದೊಂದಿಗೆ ಪರ್ಫೆಕ್ಟ್ ಮ್ಯಾಚ್