ವೀಕೆಂಡ್‌ನಲ್ಲಿ ನಾನ್‌ವೆಜ್ ಸವಿಯುವುದು ಹಲವರಿಗೆ ರೂಢಿ. ಆದರೆ ಪ್ರತಿ ಬಾರಿ ನಾನ್‌ವೆಜ್‌ನಲ್ಲಿ ಹೊಸ ಹೊಸ ರೆಸಿಪಿ ಮಾಡೋದು ತಲೆನೋವು. ನಾವಿಂದು ತುಂಬಾ ರುಚಿಕರವಾದ ಪೆಪ್ಪರ್ ಮಟನ್ (Pepper Mutton) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ರೊಟ್ಟಿ ಅಥವಾ ಅನ್ನದೊಂದಿಗೆ ಇದು ಸೂಪರ್ ಎನಿಸುತ್ತದೆ. ಖಾರವಾಗಿದ್ದರೂ ನೀವಿದನ್ನು ಸವಿದರೆ ಮತ್ತೆ ಮತ್ತೆ ಬೇಕೆನ್ನುತ್ತೀರಿ. ಪೆಪ್ಪರ್ ಮಟನ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಮಟನ್ – 1 ಕೆ.ಜಿ
ಕೆಂಪುಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲಾ ಪುಡಿ – 1 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಅರಿಶಿನ – ಅರ್ಧ ಟೀಸ್ಪೂನ್
ಸೀಳಿದ ಹಸಿಮೆಣಸಿನಕಾಯಿ – 4
ಶುಂಠಿ ಪೇಸ್ಟ್ – 1 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಕಾಳುಮೆಣಸು – 3 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
ಎಣ್ಣೆ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಸಖತ್ ಟೇಸ್ಟಿಯಾದ ಚಿಕನ್ ಗೀ ರೋಸ್ಟ್ ಮಾಡಿ ನೋಡಿದ್ದೀರಾ?
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆದು, ನೀರಿನಿಂದ ಬಸಿದು, ಅರಿಶಿನ ಪುಡಿ ಹಚ್ಚಿ 15 ನಿಮಿಷ ಬದಿಗಿಡಿ.
* ಬಳಿಕ ಪ್ರೆಶರ್ ಕುಕ್ಕರ್ ತೆಗೆದುಕೊಂಡು, ಸ್ವಲ್ಪ ಎಣ್ಣೆಹಾಕಿ, ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಚಿಕ್ಕ ಉರಿಯಲ್ಲಿ ಹುರಿಯಿರಿ.
* ಮಿಶ್ರಣ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಮಟನ್ ತುಂಡುಗಳನ್ನು ಹಾಕಿ ಸ್ವಲ್ಪ ಹುರಿಯಿರಿ.
* ಇದೀಗ ಸ್ವಲ್ಪ ನೀರು ಸೇರಿಸಿ, ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಕಡಿಮೆ ಉರಿಯಲ್ಲಿ ಸುಮಾರು 15 ನಿಮಿಷ ಬೇಯಲು ಬಿಡಿ.
* ಇನ್ನೊಂದು ಬಾಣಲೆ ತೆಗೆದುಕೊಂಡು 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಸಿಡಿಸಿ. ಬಳಿಕ ಕರಿಬೇವಿನ ಎಲೆ, ಶುಂಠಿ ಪೇಸ್ಟ್, ಹಸಿಮೆಣಸು ಹಾಕಿ, ಹುರಿಯಿರಿ.
* ಬಳಿಕ ಗರಂ ಮಸಾಲ ಪುಡಿ, ಕಾಳುಮೆಣಸು ಹಾಕಿ ಹುರಿಯಿರಿ.
* ನಂತರ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿದ್ದ ಮಟನ್ ತುಂಡುಗಳನ್ನು ಬಾಣಲೆಗೆ ಹಾಕಿ ಮಿಶ್ರಣ ಮಾಡಿ.
* ಸಣ್ಣ ಉರಿಯಲ್ಲಿ ನಡುನಡುವೆ ತಿರುವುತ್ತಾ ಮಾಂಸ ಬೇಯಲು ಬಿಡಿ. 10 ನಿಮಿಷದ ಬಳಿಕ ಉರಿಯನ್ನು ಆಫ್ ಮಾಡಿ.
* ಈಗ ಕೊತ್ತಂಬರಿ ಸೊಪ್ಪನ್ನು ಹಾಕಿ, ಅನ್ನ, ರೊಟ್ಟಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಕೊಡವ ಶೈಲಿಯ ಪೋರ್ಕ್ ಕರಿ ಮಾಡಿ ಕಡುಬು ಜೊತೆ ಸವಿಯಿರಿ