ಪ್ಯಾನ್‌ಕೇಕ್ ಸಾಮಾನ್ಯವಾಗಿ ಹೆಚ್ಚಿನವರು ಸವಿದಿರುತ್ತಾರೆ. ಯುನಜನರು ಹಾಗೂ ಮಕ್ಕಳಿಗೆ ಈ ರೆಸಿಪಿ ಇಷ್ಟವಾಗುತ್ತದೆ. ಬಾಳೆಹಣ್ಣು, ಆಪಲ್, ಸ್ಟ್ರಾಬೆರಿ ಸೇರಿದಂತೆ ಹಲವು ಹಣ್ಣುಗಳನ್ನು ಬಳಸಿಯೂ ಈ ಪ್ಯಾನ್‌ಕೇಕ್ ಅನ್ನು ವಿಧವಿಧವಾಗಿ ತಯಾರಿಸಬಹುದು. ಆದರೆ ನೀವು ಚಾಕ್ಲೇಟ್ ಹಾಗೂ ಕುಂಳಕಾಯಿಯ ಕಾಂಬಿನೇಷನ್‌ನಲ್ಲಿ ಪ್ಯಾನ್‌ಕೇಕ್ ಅನ್ನು ಎಂದೂ ಸವಿದಿಲ್ಲ ಎಂದರೆ ಇದೀಗ ಹೊಸ ಟೇಸ್ಟ್ ಅನ್ನು ಟ್ರೈ ಮಾಡೋ ಸಮಯ ಬಂದಿದೆ. ಚಾಕ್ಲೇಟ್ ಹಾಗೂ ಕುಂಬಳಕಾಯಿಯ ಈ ಪ್ಯಾನ್‌ಕೇಕ್ ರಿಚ್ ಟೇಸ್ಟ್ ನೀಡುತ್ತದೆ. ಮಕ್ಕಳು, ಯುವಜನರೇ ಏಕೆ? ಎಲ್ಲರಿಗೂ ಇದು ಖಂಡಿತಾ ಇಷ್ಟವಾಗುತ್ತದೆ.
Advertisement
ಬೇಕಾಗುವ ಪದಾರ್ಥಗಳು:
ಸಿಹಿ ಕುಂಬಳಕಾಯಿಯ ಪ್ಯೂರಿ – 1 ಕಪ್
ಮೊಟ್ಟೆ – 1
ಕರಗಿಸಿದ ಬೆಣ್ಣೆ – 2 ಟೀಸ್ಪೂನ್
ಮೈದಾ ಹಿಟ್ಟು – 2 ಕಪ್
ಸಕ್ಕರೆ – 3 ಟೀಸ್ಪೂನ್
ಬೇಕಿಂಗ್ ಪೌಡರ್ – 2 ಟೀಸ್ಪೂನ್
ಅಡುಗೆ ಸೋಡಾ – 1 ಟೀಸ್ಪೂನ್
ಕೋಕೋ ಪೌಡರ್ – 2 ಟೀಸ್ಪೂನ್
ದಾಲ್ಚಿನ್ನಿ ಪೌಡರ್ – 1 ಟೀಸ್ಪೂನ್
ತುರಿದ ಶುಂಠಿ – ಅರ್ಧ ಟೀಸ್ಪೂನ್
ಚಾಕ್ಲೇಟ್ ಮಿಲ್ಕ್ – 2 ಕಪ್
ಚಾಕ್ಲೇಟ್ ಚಿಪ್ಸ್ – ಅಲಂಕರಿಸಲು
ಚಾಕ್ಲೇಟ್ ಸಿರಪ್ – ಅಲಂಕರಿಸಲು ಇದನ್ನೂ ಓದಿ: ಮೂರೇ ಪದಾರ್ಥ ಬಳಸಿ ಮಾಡಿ ಹೆಲ್ತಿ ಓಟ್ಸ್ ಬಾರ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಸಿಹಿ ಕುಂಬಳಕಾಯಿ ಪ್ಯೂರಿ, ಮೊಟ್ಟೆ ಹಾಗೂ ಕರಗಿದ ಬೆಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಇನ್ನೊಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಅಡುಗೆ ಸೋಡಾ, ಕೋಕೋ ಪೌಡರ್, ದಾಲ್ಚಿನ್ನಿ ಪೌಡರ್ ಹಾಗೂ ತುರಿದ ಶುಂಠಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಮೈದಾ ಮಿಶ್ರಣವನ್ನು ಕುಂಬಳಕಾಯಿ ಮಿಶ್ರಣಕ್ಕೆ ಸೇರಿಸಿ, ಚಾಕ್ಲೇಟ್ ಮಿಲ್ಕ್ ಹಾಕಿ ಚೆನ್ನಾಗಿ ಸಂಯೋಜಿಸುವವರೆಗೆ ಬೆರೆಸಿಕೊಳ್ಳಿ.
* ಈಗ ಪ್ಯಾನ್ ಅನ್ನು ಬಿಸಿಗೆ ಇಟ್ಟು, ಅದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಗ್ರೀಸ್ ಮಾಡಿ, ಅರ್ಧ ಕಪ್ ಹಿಟ್ಟನ್ನು ಹಾಕಿ ಬೇಯಿಸಿ.
* ಪ್ಯಾನ್‌ಕೇಕ್‌ನಲ್ಲಿ ಗುಳ್ಳೆಗಳು ರೂಪುಗೊಳ್ಳುತ್ತದೆ ಹಾಗೂ ಅಂಚುಗಳು ಗಟ್ಟಿಯಾಗಲಾರಂಭಿಸುತ್ತದೆ. ಅದು 2-3 ನಿಮಿಷ ಬೆಂದ ಬಳಿಕ ತಿರುವಿ ಹಾಕಿ, ಇನ್ನೊಂದು ಬದಿಯೂ 2 ನಿಮಿಷ ಬೇಯಿಸಿಕೊಳ್ಳಿ. ಉಳಿದ ಹಿಟ್ಟನ್ನೂ ಇದೇ ರೀತಿ ಮುಂದುವರಿಸಿ.
* ಈಗ ಪ್ಯಾನ್‌ಕೇಕ್‌ಗಳ ಮೇಲೆ ಚಾಕ್ಲೇಟ್ ಸಿರಪ್ ಹಾಗೂ ಚಾಕ್ಲೇಟ್ ಚಿಪ್ ಅನ್ನು ಚಿಮುಕಿಸಿ, ಸವಿಯಿರಿ. ಇದನ್ನೂ ಓದಿ: ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ
Advertisement
Web Stories