ಹೊಸ ತೊಡಕಿಗೆ ರುಚಿಯಾದ ಮಟನ್ ಕರಿ ರೆಸಿಪಿ ನಿಮಗಾಗಿ

Public TV
2 Min Read
Mutton Masala4

ಯುಗಾದಿ ಹಬ್ಬದ ಮಾರನೇ ದಿನ ಆಚರಣೆ ಮಾಡೋದು ಹೊಸ ತೊಡಕು. ಯುಗಾದಿಯಂದು ಸಿಹಿ ಅಡುಗೆಗಳನ್ನು ಮಾಡಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತೇವೆ. ಅದರ ಮರುದಿನ ಏನಿದ್ದರೂ ಎಲ್ಲೆಡೆ ಬಾಡೂಟದ್ದೇ ಕಾರುಬಾರು. ಚಿಕನ್, ಮಟನ್ ಅಂತ ವಿವಿಧ ಭಕ್ಷ್ಯಗಳನ್ನು ಮಾಡಿ, ಹೊಸ ತೊಡಕನ್ನು ಸಂಭ್ರಮಿಸುತ್ತೇವೆ. ನಾವಿಂದು ಹೊಸ ತೊಡಕಿಗೆ ಸ್ಪೆಷಲ್ ರುಚಿಯಾದ ಮಟನ್ ಕರಿ (Mutton Curry) ರೆಸಿಪಿ ಹೇಳಿಕೊಡುತ್ತೇವೆ. ಈ ದಿನ ಬಾಡೂಟ ಸವಿದು ಹೊಸತೊಡಕನ್ನು ನೀವೂ ಆಚರಿಸಿ.

MuttonCurry 2

ಬೇಕಾಗುವ ಪದಾರ್ಥಗಳು:
ಮಟನ್ – 1 ಕೆ.ಜಿ
ಬೆಳ್ಳುಳ್ಳಿ – 1
ಅರಿಶಿನ – ಚಿಟಿಕೆ
ಲವಂಗ – 7
ಏಲಕ್ಕಿ – 3
ಕೆಂಪು ಮೆಣಸಿನಕಾಯಿ – 8
ಈರುಳ್ಳಿ – 4
ತುರಿದ ಕೊಬ್ಬರಿ – 2 ಕಪ್
ಗಸಗಸೆ – 2 ಟೀಸ್ಪೂನ್
ಕಾಳು ಮೆಣಸು – 8
ಖಾರದ ಪುಡಿ – 2 ಟೀಸ್ಪೂನ್
ಶುಂಠಿ – 1 ಇಂಚು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 5 ಟೀಸ್ಪೂನ್ ಇದನ್ನೂ ಓದಿ: ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

MuttonCurry 1ಮಾಡುವ ವಿಧಾನ:
* ಮೊದಲಿಗೆ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಒಂದು ಮಿಕ್ಸರ್ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ.
* ತೊಳೆದು ಸಣ್ಣಗೆ ಕತ್ತರಿಸಿದ ಮಟನ್‌ಗೆ ರುಬ್ಬಿದ ಪದಾರ್ಥಗಳನ್ನು ಸವರಿ ಒಂದೂವರೆ ಗಂಟೆ ಇಡಿ.
* ತುರಿದ ಕೊಬ್ಬರಿಯನ್ನು ಹುರಿದುಕೊಂಡು, ಅದರ ಜೊತೆಗೆ ಕತ್ತರಿಸಿದ 1 ಈರುಳ್ಳಿ, ಗಸಗಸೆ, ಲವಂಗ, ಏಲಕ್ಕಿ, ಕರಿಮೆಣಸು, ಖಾರದ ಪುಡಿ ಹಾಕಿಕೊಂಡು ರುಬ್ಬಿಕೊಳ್ಳಿ.
* ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಅದಕ್ಕೆ ಉಳಿದಿರುವ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಹಾಕಿ, ಚಿಟಿಕೆ ಅರಿಶಿನ ಸೇರಿಸಿ ಫ್ರೈ ಮಾಡಿ.
* ಬಳಿಕ ಅದಕ್ಕೆ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಟನ್ ಹಾಕಿ ಬೇಕೆನಿಸಿದರೆ ನೀರು ಹಾಕಿ ಬೇಯಿಸಬೇಕು.
* ಬೆಂದ ನಂತರ ಕೆಳಗೆ ಇಳಿಸಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿರುಚಿಯಾದ ಮಟನ್ ಕರಿ ಸವಿಯಲು ಸಿದ್ಧ. ಇದನ್ನೂ ಓದಿ: ಸರಳ, ರುಚಿಕರವಾಗಿ ಮೀನು ಸಾರು ಹೀಗೆ ಮಾಡಿ

Share This Article
Leave a Comment

Leave a Reply

Your email address will not be published. Required fields are marked *