ಪ್ರತಿ ನಿತ್ಯ ಬೆಳಗ್ಗಿನ ಉಪಾಹಾರ ಅತ್ಯಂತ ಮುಖ್ಯವಾದ ಭಾಗವಾಗಿರುತ್ತದೆ. ಇದನ್ನು ಸ್ಕಿಪ್ ಮಾಡಕೂಡದು ಎಂಬುದು ಪ್ರತಿಯೊಬ್ಬರ ಸಲಹೆ. ಆದರೆ ಅದೇ ಉಪಾಹಾರವನ್ನು ರುಚಿಕರ ಹಾಗೂ ಆರೋಗ್ಯಕರವಾಗಿ ಮಾಡುವುದು ಪ್ರತಿಯೊಬ್ಬರಿಗೂ ಸವಾಲು. ಪ್ರತಿ ನಿತ್ಯ ಭಿನ್ನ ವಿಭಿನ್ನವಾಗಿ ಉಪಾಹಾರ ತಯಾರಿಸುವುದು ಕಷ್ಟ ಎಂದರೆ ಸುಳ್ಳಲ್ಲ. ಆದರೆ ನಾವಿಂದು ಒಂದು ಸುಲಭದ, ರುಚಿಕರ ಮಾತ್ರವಲ್ಲದೇ ಆರೋಗ್ಯಕರ ಉಪಾಹಾರ ರೆಸಿಪಿಯನ್ನು ತಿಳಿಸಿಕೊಡುತ್ತೇವೆ. ಹೊಸ ರೀತಿಯ ರೆಸಿಪಿಯನ್ನು ಟ್ರೈ ಮಾಡಲು ಬಯಸುವವರು ಒಮ್ಮೆ ಸೋಯಾಬೀನ್ ದೋಸೆಯನ್ನು (Soyabean Dosa) ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ದೋಸೆ ಅಕ್ಕಿ – 2 ಕಪ್
ಸೋಯಾ ಬೀನ್ – ಅರ್ಧ ಕಪ್
ಉದ್ದಿನ ಬೇಳೆ – ಕಾಲು ಕಪ್
ಮೆಂತ್ಯ – 2 ಟೀಸ್ಪೂನ್
ಕಡಲೆ ಬೇಳೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಕಲ್ಲಂಗಡಿ ಸಿಪ್ಪೆಯನ್ನು ಎಸೆಯುವ ಬದಲು ಮಾಡಿ ನೋಡಿ ದೋಸೆ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸೋಯಾಬೀನ್, ಅಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ ಹಾಗೂ ಮೆಂತ್ಯವನ್ನು ತೊಳೆದು, 6-8 ಗಂಟೆಗಳ ಕಾಲ ನೆನೆಸಿಡಿ.
* ಈಗ ಹೆಚ್ಚುವರಿ ನೀರನ್ನು ಹರಿಸಿ, ಮಿಕ್ಸರ್ ಜಾರ್ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಹಿಟ್ಟಿಗೆ ಉಪ್ಪು ಸೇರಿಸಿ, ಮಿಶ್ರಣ ಮಾಡಿ, ರಾತ್ರಿ ಅಥವಾ 6-8 ಗಂಟೆಗಳ ಕಾಲ ಹುದುಗಲು ಬಿಡಿ.
* ಹಿಟ್ಟು ಹುದುಗಿದ ಬಳಿಕ ಮಿಶ್ರಣ ಮಾಡಿ, ಸ್ಥಿರತೆ ಪರಿಶೀಲಿಸಿ, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ.
* ಈಗ ದೋಸೆ ಕಾವಲಿಯನ್ನು ಬಿಸಿ ಮಾಡಿ, ಎಣ್ಣೆ ಸವರಿ, 1 ಸೌಟು ಹಿಟ್ಟು ಸುರಿದು ತೆಳ್ಳಗೆ ಹರಡಿ.
* ದೋಸೆ ಸುತ್ತಲೂ ಕೆಲ ಹನಿ ಎಣ್ಣೆ ಹಾಕಿ, 1-2 ನಿಮಿಷ ಮಧ್ಯಮ ಉರಿಯಲ್ಲಿ ಮುಚ್ಚಿ ಬೇಯಿಸಿ.
* ಇದೀಗ ಸೋಯಾಬೀನ್ ದೋಸೆ ತಯಾರಾಗಿದ್ದು, ನಿಮ್ಮ ಆಯ್ಕೆಯ ಚಟ್ನಿಯೊಂದಿಗೆ ಅಥವಾ ಸಾಂಬಾರಿನೊಂದಿಗೆ ಸವಿಯಿರಿ. ಇದನ್ನೂ ಓದಿ: ಡಿಫರೆಂಟ್ ರುಚಿ – ಸಬ್ಬಕ್ಕಿ ಇಡ್ಲಿ ಮಾಡಿ ನೋಡಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k