FoodLatestMain PostNon Veg

ವಾಹ್, ಎಂಥಾ ರುಚಿ ಎಗ್ ಮಲೈ ಮಸಾಲಾ

ಮೊಟ್ಟೆ ಪ್ರಿಯರು ಖಂಡಿತವಾಗಿಯೂ ಇಷ್ಟಪಡುವ ಎಗ್ ಮಲೈ ಮಸಾಲಾ (Egg Malai Masala) ನೀವು ಟ್ರೈ ಮಾಡಿದ್ದೀರಾ? ಗೋಡಂಬಿ, ಕ್ರೀಂ ನೊಂದಿಗೆ ಕುದಿಸುವುದರೊಂದಿಗೆ ಜೀರಿಗೆ, ಏಲಕ್ಕಿಯಂತಹ ಪರಿಮಳ ಭರಿತ ಮಸಾಲೆಗಳನ್ನು ಹಾಕಿ ತಯಾರಿಸಲಾಗುವ ಎಗ್ ಮಲೈ ಮಸಾಲಾವನ್ನು ಖಂಡಿತವಾಗಿಯೂ ನೀವು ಚಪ್ಪರಿಸಿಕೊಂಡು ಸವಿಯುತ್ತೀರಿ. ರೋಟಿ, ಅನ್ನದೊಂದಿಗೆ ಪರ್ಫೆಕ್ಟ್ ಕಾಂಬಿನೇಷನ್ ಆಗಿರುವ ಈ ರೆಸಿಪಿ ಕಾಯಿಸಿದ ಬ್ರೆಡ್‌ನೊಂದಿಗೂ ಸವಿಯಬಹುದು. ಸುಲಭ ವಿಧಾನದಲ್ಲಿ ತಯಾರಿಸಬಹುದಾದ ಎಗ್ ಮಲೈ ಮಸಾಲಾ ರೆಸಿಪಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:
ಬೆಣ್ಣೆ – 2 ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
ಬೇಯಿಸಿದ ಮೊಟ್ಟೆ – 4
ಬೆಣ್ಣೆ – 2 ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ಲವಂಗದ ಎಲೆ – 1
ಏಲಕ್ಕಿ – 2
ಲವಂಗ – 2 ಇದನ್ನೂ ಓದಿ: ಒಮ್ಮೆ ನೀವೂ ಟ್ರೈ ಮಾಡಿ ನೋಡಿ ಚಿಕನ್ ಸೀಕ್ ಕಬಾಬ್

ದಾಲ್ಚಿನ್ನಿ ಚಕ್ಕೆ – 1 ಇಂಚು
ಜೀರಿಗೆ – 1 ಟೀಸ್ಪೂನ್
ಈರುಳ್ಳಿ ಪೇಸ್ಟ್ – 1 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದೂವರೆ ಟೀಸ್ಪೂನ್
ಗೋಡಂಬಿ ಪೇಸ್ಟ್ – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಅರ್ಧ ಚಮಚ
ನೀರು – ಅರ್ಧ ಕಪ್
ತಾಜಾ ಕೆನೆ (ಫ್ರೆಶ್ ಕ್ರೀಂ) – 3 ಟೀಸ್ಪೂನ್
ಗರಂ ಮಸಾಲೆ – 1 ಟೀಸ್ಪೂನ್
ಹೆಚ್ಚಿದ ಹಸಿರು ಮೆಣಸಿನಕಾಯಿ – 1
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ

ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ 2 ಟೀಸ್ಪೂನ್ ಬೆಣ್ಣೆ, 2 ಟೀಸ್ಪೂನ್ ಎಣ್ಣೆ ಹಾಗೂ ಕಾಶ್ಮೀರಿ ಕೆಂಪು ಮೆಣಸಿನ ಪುಡಿಯನ್ನು ಹಾಕಿ ಕಾಯಿಸಿ.
* ಅದಕ್ಕೆ ಬೇಯಿಸಿದ ಮೊಟ್ಟೆಗಳನ್ನು ಹಾಕಿ, 3-4 ನಿಮಿಷ ಫ್ರೈ ಮಾಡಿ ಬದಿಗಿಡಿ.
* ಇನ್ನೊಂದು ಕಡಾಯಿಯಲ್ಲಿ, 2 ಟೀಸ್ಪೂನ್ ಬೆಣ್ಣೆ ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ.
* ಅದಕ್ಕೆ ಲವಂಗದ ಎಲೆ, ಏಲಕ್ಕಿ, ಲವಂಗ, ದಾಲ್ಚಿನ್ನಿ ಚಕ್ಕೆ ಹಾಗೂ ಜೀರಿಗೆಯನ್ನು ಹಾಕಿ 2 ನಿಮಿಷ ಫ್ರೈ ಮಾಡಿ.
* ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಮತ್ತು ಗೋಡಂಬಿ ಪೇಸ್ಟ್ ಸೇರಿಸಿ, 5-6 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
* ಅದಕ್ಕೆ ನೀರು ಮತ್ತು ಕರಿಮೆಣಸಿನ ಪುಡಿ ಸೇರಿಸಿ 3-4 ನಿಮಿಷ ಬೇಯಿಸಿ.
* ಈಗ ಫ್ರೆಶ್ ಕ್ರೀಂ ಸೇರಿಸಿ ಕುದಿಸಿ.
* ಗರಂ ಮಸಾಲಾ ಹಾಗೂ ಫ್ರೈ ಮಾಡಿದ ಮೊಟ್ಟೆಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
* ಮಸಾಲೆ ಮೊಟ್ಟೆಗಳನ್ನು ಮುಚ್ಚುವವರೆಗೆ ಮುಚ್ಚಿ ಬೇಯಿಸಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಬಿಸಿಬಿಸಿಯಾಗಿ ಬಡಿಸಿ.

Live Tv

Leave a Reply

Your email address will not be published.

Back to top button